Advertisement
ದೇಶದ ಅತ್ಯಂತ ದೊಡ್ಡ ನಾಗರಿಕ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಒಳಗೊಂಡು ಹಲವಾರು ದೊಡ್ಡ್ ಬ್ಯಾಂಕ್ ಗಳ ಸಹಕಾರದೊಂದಿಗೆ ಗೂಗಲ್ ಪೇ ಕಾರ್ಡ್ ಟೋಕನೈಸೇಶನ್ ಮೂಲಕ ನೆಟ್ ವರ್ಕ್ ವಿಸ್ತರಿಸಲು ಕಾರ್ಯ ರೂಪದಲ್ಲಿದೆ ಎಂದು ಗೂಗಲ್ ಪೇ ಸಂಸ್ಥೆ ತಿಳಿಸಿದೆ.
Related Articles
Advertisement
ಕೊಟಕ್ ಮಹೀಂದ್ರಾ ಬ್ಯಾಂಕ್, ಎಸ್ ಬಿಐ ಕಾರ್ಡ್‌ಗಳು ಮತ್ತು ಆಕ್ಸಿಸ್ ಬ್ಯಾಂಕ್‌ನೊಂದಿಗೆ ಟೋಕನೈಸೇಶನ್ ನನ್ನು ಯಶಸ್ವಿಯಾಗಿ ಪ್ರಾರಂಭಿಸಿದ ನಂತರ, ಗೂಗಲ್ ಪೇ ಈಗ ಎಸ್ ಬಿ ಐ, ಇಂಡಸ್ ಇಂಡ್ ಬ್ಯಾಂಕ್ ಮತ್ತು ಫೆಡರಲ್ ಬ್ಯಾಂಕ್ ನಿಂದ ಡೆಬಿಟ್ ಕಾರ್ಡ್‌ಗಳನ್ನು ಮತ್ತು ಇಂಡಸ್ ಇಂಡ್ ಬ್ಯಾಂಕ್ ಮತ್ತು ಎಚ್ ಎಸ್ ಬಿಸಿ ಇಂಡಿಯಾದ ಕ್ರೆಡಿಟ್ ಕಾರ್ಡ್‌ಗಳನ್ನು ತನ್ನ ಸ್ಲೇಟ್ ಗೆ ಸೇರಿಸಿಕೊಳ್ಳಲಾಗಿದೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಟೋಕನೈಸೇಶನ್ ಅಂದರೇ ಏನು..?
ಬಳಕೆದಾರರು ತಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳನ್ನು ಹಂಚಿಕೊಳ್ಳದೆ ತಮ್ಮ ಫೋನ್ ಗೆ ಲಗತ್ತಿಸಲಾದ ಸುರಕ್ಷಿತ ಡಿಜಿಟಲ್ ಟೋಕನ್ ಮೂಲಕ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಮಾಡಲು ಅನುವು ಮಾಡಿಕೊಡುವ ಸೌಲಭ್ಯವೇ ಟೋಕನೈಸೇಶನ್ ಆಗಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿದ ಗೂಗಲ್ ಪೇ ಮತ್ತು ಎನ್ ಬಿ ಯು-ಎಪಿಎಸಿ ವ್ಯವಹಾರಗಳ ಮುಖ್ಯಸ್ಥ ಸಜಿತ್ ಶಿವಾನಂದನ್, ಟೋಕನೈಸೇಶನ್ ಡಿಜಿಟಲ್ ಯುಗದಲ್ಲಿ ಸುರಕ್ಷಿತ ವಹಿವಾಟು ನಡೆಸಲು ಮತ್ತು ಆನ್ ಲೈನ್ ಮತ್ತು ಆಫ್ ಲೈನ್ ನಲ್ಲಿ ವ್ಯಾಪಾರಿ ವಹಿವಾಟುಗಳನ್ನು ವಹೆಚ್ಚಿಸಿಕೊಳ್ಳಲು ಬಳಕೆದಾರರನ್ನು ಉತ್ತೇಜಿಸುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು, ಟೋಕನೈಸೇಶನ್ ಬಗ್ಗೆ ಮಾತನಾಡಿದ ವೀಸಾ ಇಂಡಿಯಾ ಮತ್ತು ದಕ್ಷಿಣ ಏಷ್ಯಾ ಗ್ರೂಪ್ ಕಂಟ್ರಿ ಮ್ಯಾನೇಜರ್ ಟಿ.ಆರ್.ರಾಮಚಂದ್ರನ್, ಟೋಕನೈಸೇಶನ್, ಸಂಪರ್ಕವಿಲ್ಲದ ಪಾವತಿ ವಿಧಾನ, ಲಕ್ಷಾಂತರ ಮೊಬೈಲ್ ಬಳಕೆದಾರರು ತಮ್ಮ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳನ್ನು ಗೂಗಲ್ ಪೇನಲ್ಲಿ ಬಳಸಲು ಸಾಧ್ಯವಾಗುತ್ತದೆ. ಇದೊಂದು ಅತ್ಯುನ್ನತ ವಿಶ್ವಾಸಾರ್ಹ ವಿಧಾನ ಎಂದು ಅವರು ಅನಿಸಿಕೆ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ : ಮೈಕ್ರೋಸಾಫ್ಟ್ ಟೀಮ್ಸ್ ಈಗ ಕನ್ನಡದಲ್ಲಿಯೂ ಲಭ್ಯ: ಈಗ ವೈಯಕ್ತಿಕ ವೈಶಿಷ್ಟ್ಯಗಳು ಉಚಿತ