Advertisement

ಗೂಗಲ್‌ಪೇ ನಿಷೇಧವಾಗಿಲ್ಲ, ವ್ಯವಹಾರ ಸುರಕ್ಷಿತ: ಭರವಸೆ

11:12 AM Jun 29, 2020 | mahesh |

ನವದೆಹಲಿ: ಹಣಪಾವತಿಗೆ ನೆರವಾಗುವ ಆ್ಯಪ್‌ ಗೂಗಲ್‌ ಪೇ ನಿಷೇಧವಾಗಿಲ್ಲ. ಅದರಿಂದ ಮಾಡುವ ವ್ಯವಹಾರಗಳು ಸಂಪೂರ್ಣ ಸುರಕ್ಷಿತ. ಈ ಬಗ್ಗೆ ಎನ್‌ಪಿಸಿಐ (ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ ಆಫ್ ಇಂಡಿಯಾ)ವೆಬ್‌ ಸೈಟ್‌ನಲ್ಲಿ ಖಚಿತಪಡಿಸಿಕೊಳ್ಳಬಹುದು ಎಂದು ಗೂಗಲ್‌ ತನ್ನ ಗ್ರಾಹಕರಿಗೆ ಭರವಸೆ ನೀಡಿದೆ. ಇತ್ತೀಚೆಗೆ ಸಾಮಾಜಿಕ ತಾಣಗಳಲ್ಲಿ, ಆರ್‌ಬಿಐನ ಅಧಿಕೃತ ಸೇವಾದಾರರ ಪಟ್ಟಿ ಯಲ್ಲಿ ಗೂಗಲ್‌ಪೇ ಇಲ್ಲ. ಆದ್ದರಿಂದ ಅದನ್ನು ಬಳಸಿ ಮಾಡುವ ವ್ಯವಹಾರ ಅನಧಿಕೃತ ಎಂಬ ಸುದ್ದಿ ಹಬ್ಬಿತ್ತು. ಇದೇ ಕಾರಣದಿಂದ ಈ ಸ್ಪಷ್ಟನೆ ನೀಡಲಾಗಿದೆ.

Advertisement

ಇದೆಲ್ಲ ಶುರುವಾಗಲಿಕ್ಕೆ ಕಾರಣ; ಕೆಲವು ದಿನಗಳ ಹಿಂದೆ ಅಭಿಜಿತ್‌ ಮಿಶ್ರಾ ಎಂಬ ಆರ್ಥಿಕ ತಜ್ಞರು, ಆರ್‌ಬಿಐನಿಂದ ಅನುಮತಿ ಪಡೆಯದೇ ಗೂಗಲ್‌ ಪೇ ವ್ಯವಹಾರ ನಡೆಸುತ್ತಿದೆ ಎಂದು ದೆಹಲಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು. ಅದರ ಬಗ್ಗೆ ಆರ್‌ಬಿಐ ಆಗಲೇ ಸ್ಪಷ್ಟನೆ ನೀಡಿ, ಗೂಗಲ್‌ಪೇ ತನ್ನದೇ ಸ್ವತಂತ್ರ ಹಣಕಾಸು ನಿರ್ವಹಣೆ ವ್ಯವಸ್ಥೆ ಹೊಂದಿಲ್ಲ. ಅದು ಕೇವಲ ಯುಪಿಐ ಬಳಸಿಕೊಂಡು ಹಣಪಾವತಿ ಮಾಡಲು ಜನರಿಗೆ ನೆರವಾಗುವ ಆ್ಯಪ್‌. ಆದ್ದರಿಂದ ಅದನ್ನು ಎನ್‌ ಪಿಸಿಐ ಪಟ್ಟಿಗೆ ಸೇರಿಸಿಲ್ಲ. ಅದನ್ನು ಮೂರನೇ ವ್ಯಕ್ತಿ ಆ್ಯಪ್‌ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಗೂಗಲ್‌ಪೇಯಿಂದ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟಪಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next