ಸವದತ್ತಿ: ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದಿಂದ ಮಂಗಳವಾರ ಜ್ಞಾನ ಸಂಗಮ ಆನ್‌ಲೈನ್ ತರಬೇತಿ ಗೂಗಲ್ ಮೀಟ್ ಕಾರ್ಯಕ್ರಮಕ್ಕೆ ವಿಧಾನಸಭಾ ಉಪ ಸಭಾಧ್ಯಕ್ಷ ಆನಂದ ಮಾಮನಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಜೀವ ರಕ್ಷಿಸುವ ಆರೋಗ್ಯ ಇಲಾಖೆ ನಿಟ್ಟಿನಲ್ಲಿಯೇ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡಲು ಶಿಕ್ಷಕರಿಗಾಗಿ ಜ್ಞಾನ ಸಂಗಮ ಗೂಗಲ್‌ಮೀಟ್ ಏರ್ಪಡಿಸಿದ್ದು, ಇದರಲ್ಲಿ ಬಿಇಒ ಎ.ಎನ್.ಕಂಬೋಗಿ ಮುಂದಾಳತ್ವ ಮತ್ತು ಶಿಕ್ಷಣ ಅಭಿರುಚಿ ಶ್ಲಾಘನೀಯ ಎಂದರು.
ಗುರುವಿನ ಗುರುವಾಗಿ ಬಿಇಒ ಕಂಬೋಗಿ ಬಿಂಬಿತರಾಗಿದ್ದಾರೆ. ಮಕ್ಕಳ ವಿದ್ಯಾರ್ಜನೆಗೆ ತಂತ್ರಜ್ಞಾನದ ಬಳಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಹಿತಿಗಳು,ವಿದ್ವಾಂಸರು, ಶಿಕ್ಷಣ ತಜ್ಞ ಪ್ರೇಮಿಗಳಿಂದ ಕಲಿಕೆ ಕುರಿತುಸಲಹೆ ಪಡೆದು ಜ್ಞಾನ ಸಂಗಮ ದಾರಿ ಸುಗಮವಾಗಲಿ.ಇಲಾಖೆಗೆ ಅಪರ ಆಯುಕ್ತರ ಮಾರ್ಗದರ್ಶನಸೂಕ್ತವಿದ್ದು, ಶಿಕ್ಷಕರ ಇಚ್ಛಾಶಕ್ತಿ ಕೊರತೆಯಾಗದಂತೆಮಕ್ಕಳಿಗೆ ಶಿಕ್ಷಣ ನೀಡುವಂತಾಗಲಿ ಎಂದರು.
ಧಾರವಾಡದ ಅಪರ ಆಯುಕ್ತ ಮೇ. ಸಿದ್ಧಲಿಂಗಯ್ಯ ಮಾತನಾಡಿ, ಕಾರ್ಮಿಕ, ರೈತ, ಬಡ ಕುಟುಂಬಗಳು ಸರ್ಕಾರಿ ಶಾಲೆಯನ್ನೇ ಆಧರಿಸಿವೆ. ಮಕ್ಕಳಿಗೆ ಜ್ಞಾನಸಂಪತ್ತನ್ನಿರಿಸಿ ಸಿರಿವಂತಿಕೆ ದಾನ ಮಾಡಿ. ಜಗತ್ತಿನ ಶ್ರೇಷ್ಠ ವ್ಯಕ್ತಿಯನ್ನಾಗಿಸಲು ಶ್ರಮಿಸಿ. ಇಂದಿನ ವ್ಯವಸ್ಥೆ ಜಾತಿ,ಧರ್ಮ, ಲಿಂಗ, ಭಾಷೆಗಳೆಂಬ ವ್ಯೂಹಕ್ಕೆ ಸಿಲುಕಿ ದಾರಿ ತಪ್ಪುವಂತಾಗಿದೆ. ಶಿಕ್ಷಕರು ಹರಿಯುವ ನದಿಯಂತೆ ಸೇವೆ ಸಲ್ಲಿಸಲಿ ಎಂದರು.
ವಿವಿಧ ಆ್ಯಪ್ ಬಳಸಿ ಶಿಕ್ಷಕರೇ ಹೆಚ್ಚಿನ ಜ್ಞಾನ ಪಡೆದು ಮಕ್ಕಳಿಗೆ ಬೋಧಿಸಬೇಕಿದೆ.ಬಿಇಒ ಕಂಬೋಗಿ ಪ್ರಯತ್ನದಿಂದತಂತ್ರಜ್ಞಾನದ ನಿರೀಕ್ಷೆಗಳನ್ನು ಸವದತ್ತಿಭಾಗದಲ್ಲಿ ತಲುಪಿಸಲು ಸಾಧ್ಯವಾಗಿದೆ.ಈಗಾಗಲೇ 30 ಕೋಟಿ ಜನತೆಗೆಕೋವಿಡ್ ಲಸಿಕೆ ನೀಡಲಾಗಿದೆ. 3ನೇ ಅಲೆ ಸುಳ್ಳಾಗುವಸಾಧ್ಯತೆಗಳಿವೆ. ಈ ವಿಷಮ ಸ್ಥಿತಿಯಲ್ಲಿ ಮಕ್ಕಳುಶಿಕ್ಷಣದಿಂದ ವಂಚಿತರಾಗಬಾರದೆಂದು ಪರ್ಯಾಯ ಕಲಿಕೆಗೆ ಮುನ್ನುಗ್ಗಿದ್ದಾರೆ ಎಂದರು.
ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆನಂದ ಪುಂಡಲೀಕ ಮಾತನಾಡಿ, ಬಿಇಒ ಕಂಬೋಗಿ ಕ್ರಿಯಾಶೀಲತೆಯಿಂದಭೌತಿಕ ಸೌಲಭ್ಯ ಸಿಗದಿದ್ದರೂ ಬೌದ್ಧಿಕವಾಗಿ ಮುನ್ನಡೆ ಸಾಧಿಸಿದೆ. ಬೋಧನಾ ಕಲಿಕೆಗೆ ತಾಂತ್ರಿಕತೆ ಒತ್ತು ನೀಡಿದ್ದು ಮಕ್ಕಳ ಶಿಕ್ಷಣಕ್ಕೆ ಶಿಕ್ಷಕರನ್ನು ರೂಪಿಸುತ್ತಿದ್ದಾರೆಎಂದ ಅವರು, ಎಸ್ಸೆಸ್ಸೆಲ್ಸಿ ಒಂದೆಡೆಯಾದರೆ 4 ರಿಂದ9ನೇ ತರಗತಿ ಮಕ್ಕಳಿಗೆ ಬೋಧನೆಯ ಮಾರ್ಗದರ್ಶನ ನಡೆಯಲಿ ಎಂದರು.
ಬಿಇಒ ಎ.ಎನ್. ಕಂಬೋಗಿ ಮಾತನಾಡಿ, ಈ ಗೂಗಲ್ ಮೀಟ್ ಮೂಲಕ ಪ್ರತಿ ಬಾರಿ ಅನುಭವಿಗಳು,ಸಾಹಿತಿಗಳು, ಶಿಕ್ಷಣ ತಜ್ಞರು, ಆಧ್ಯಾತ್ಮಿಕ ಗುರುಗಳ ಸಲಹೆ ಮೇರೆಗೆ ನಡೆಸಲಾಗುತ್ತಿದೆ. ತಿಂಗಳ 2ನೇ ರವಿವಾರಬೆಳಗ್ಗೆ 11ಕ್ಕೆ ಗೂಗಲ್ ಮೀಟ್ ನಡೆಯುತ್ತದೆ. ಮೊದಲಜ್ಞಾನ ಸಂಗಮದಲ್ಲಿ ತಾಲೂಕಿನ 1200 ಶಿಕ್ಷಕರುಭಾಗಿಯಾಗಿದ್ದಾರೆ. ಕೋವಿಡ್ ಸ್ಥಿತಿ ಅರಿತು ನಡೆಸಿದ ಈ ಕಾರ್ಯಕ್ರಮ ಶಾಲೆ ರಜಾ ದಿನಗಳಲ್ಲಿಯೂ ಮಹತ್ವಪಡೆಯುವುದೆಂಬ ಮಹದಾಸೆ ಹೊಂದಿದ್ದೇನೆ ಎಂದರು.