Advertisement
ಗೂಗಲ್ 2003ರಲ್ಲಿ “ಬ್ಲಾಗ್‌ಸ್ಪಾಟ್.ಇನ್’ ಖರೀದಿಸಿತ್ತು. ಬ್ಲಾಗ್ ಕ್ರಾಂತಿಯ ಈ ಉಚ್ಛಾ†ಯದ ಕಾಲದಲ್ಲಿ ಭಾರತದ ಹೆಸರನ್ನು ಸೂಚಿಸುವ “ಬ್ಲಾಗ್‌ಸ್ಪಾಟ್.ಇನ್’ ನೆಟ್‌ಪ್ರಿಯರಿಗೆ ಸುಲಭವಾಗಿ ಬ್ಲಾಗ್ ತೆರೆಯಲು ನೆರವಾಗಿತ್ತು. ನಂತರ ಇದರ ನವೀಕರಣಕ್ಕೆ ಗೂಗಲ್ ಯಾವತ್ತೂ ಮುಂದಾಗಲಿಲ್ಲ ಎನ್ನುವ ಆರೋಪಗಳೂ ಕೇಳಿಬರುತ್ತಿದ್ದವು. ಆದರೆ ಈಗ ಗೂಗಲ್ ಸದ್ದಿಲ್ಲದೆ, ಭಾರತದ ಬ್ಲಾಗಿಗರಿಗೆ ತಿಳಿಸದೆ ಬ್ಲಾಗ್‌ಸ್ಪಾಟ್.ಇನ್ ಅನ್ನು ಡೊಮೇನಿಂಗ್.ಕಾಂ.ಗೆ ಮಾರಿದೆ. ಬ್ಲಾಗಿಂಗನ್ನು ಪ್ರವೃತ್ತಿ, ದುಡಿಮೆ ಮಾರ್ಗವಾಗಿ ಮಾಡಿಕೊಂಡಿ ದ್ದವರಿಗೆ ಈ ಮೂಲಕ ಶಾಕ್ ನೀಡಿದೆ.
ಆದರೆ, ಬ್ಲಾಗ್‌ಸ್ಪಾಟ್.ಇನ್‌ನ ಯುಆರ್‌ಎಲ್‌ಗಳನ್ನು ಬ್ಲಾಗ್‌ಸ್ಪಾಟ್.ಕಾಂ.ಗೆ ಪರಿವರ್ತಿಸಲು ಬ್ಲಾಗಿಗರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಬಳಕೆದಾರರು ಅನ್ಯ ಮಾರ್ಗದಲ್ಲಿ ಬ್ಲಾಗನ್ನು ಪ್ರವೇಶಿಸಬಹುದಾಗಿದೆ. ಭದ್ರತೆ ನೀಡಿ
ಅಮೆರಿಕದಲ್ಲಿ ಗಣ್ಯರ ಟ್ವಿಟರ್ ಖಾತೆಗಳು ಹ್ಯಾಕ್ ಆಗಿರುವ ಹಿನ್ನೆಲೆಯಲ್ಲಿ, ಭಾರತದ ಸೆಲೆಬ್ರಿಟಿಗಳ, ಬಳಕೆದಾರರ ಡೇಟಾಗಳನ್ನು ಸುರಕ್ಷಿತವಾಗಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಮಹಾರಾಷ್ಟ್ರ ಸೈಬರ್ ಟ್ವಿಟ್ಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂಗಳಿಗೆ ಸೂಚಿಸಿದೆ.