Advertisement
ಗೂಗಲ್ ಭಾರತದ ಪ್ರಸಿದ್ಧ ಕಲಾವಿದರಿಂದ ಭಾರತದ ಕಥೆ ಹೇಳುವಂತಹ ಚಿತ್ರಕಲೆಗಳು ಮತ್ತು ಕಲಾತ್ಮಕ ಉತ್ಪನ್ನಗಳನ್ನು ಪ್ರದರ್ಶಿಸಲಿದೆ. 10 ಕಲಾವಿದರಿಂದ ನಿರ್ಮಿಸಲಾಗಿರುವ 120ಕ್ಕೂ ಹೆಚ್ಚು ಕಲಾಕೃತಿಗಳು, 21ಕ್ಕೂ ಅಧಿಕ ಕಥೆಗಳನ್ನು ಪ್ರದರ್ಶಿಸಲಾಗುವುದು. ವಿವಿಧ ಇಲಾಖೆಗಳೂ ಈ ಪ್ರದರ್ಶನದಲ್ಲಿ ಭಾಗವಹಿಸಲಿವೆ. ಹಾಗೆಯೇ 1947ರ ನಂತರ ದೇಶದ ಅಭಿವೃದ್ಧಿಗೆ ಭಾರತೀಯರ ಕೊಡುಗೆಯನ್ನು ತಿಳಿಹೇಳುವಂತಹ ಮಾಹಿತಿಗಳನ್ನು ಜನರಿಗೆ ತಲುಪಿಸುವಲ್ಲೂ ಗೂಗಲ್ ಸರ್ಕಾರದ ಜತೆಯಾಗಲಿದೆ.
ಗೂಗಲ್ ಸಂಸ್ಥೆಯು 2022ರ ಡೂಡಲ್4ಗೂಗಲ್ ಸ್ಪರ್ಧೆಗೆ “ಮುಂದಿನ 25 ವರ್ಷಗಳಲ್ಲಿ ನನ್ನ ಭಾರತ’ ಎನ್ನುವ ವಿಷಯವನ್ನೇ ಇಟ್ಟುಕೊಂಡಿದೆ. 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ. ವಿಜೇತರಾಗುವ ವಿದ್ಯಾರ್ಥಿ ತಯಾರಿಸಿದ ಡೂಡಲ್ ಅನ್ನು ಆ.14ರಂದು ಗೂಗಲ್‌ನ ಹೋಮ್‌ಪೇಜ್(ಭಾರತಕ್ಕೆ ಮಾತ್ರ)ನಲ್ಲಿ ಹಾಕಲಾಗುವುದು. ಹಾಗೆಯೇ ವಿದ್ಯಾರ್ಥಿಗೆ 5 ಲಕ್ಷ ರೂ. ವಿದ್ಯಾರ್ಥಿ ವೇತನ ಮತ್ತು ಶಾಲೆಗೆ 2 ಲಕ್ಷ ರೂ. ತಂತ್ರಜ್ಞಾನ ಪ್ಯಾಕೇಜ್ ನೀಡಲಾಗುವುದು ಎಂದು ತಿಳಿಸಲಾಗಿದೆ.