Advertisement

ಉದ್ಯೋಗ ಹುಡುಕಲು ಗೂಗಲ್‌ನಿಂದ ಕಾರ್ಮೊ ಆ್ಯಪ್‌ ಬಿಡುಗಡೆ

12:56 AM Aug 21, 2020 | mahesh |

ಹೊಸದಿಲ್ಲಿ: ದೇಶದಲ್ಲಿ ನಿರುದ್ಯೋಗ ಜಾಸ್ತಿಯಾಗಿದೆ. ಈ ಪರಿಸ್ಥಿತಿಯಲ್ಲಿ ಇದು ಸಹಜ ಕೂಡಾ. ಅನಿವಾರ್ಯವಾಗಿ ಉದ್ಯೋಗ ಕಳೆದುಕೊಂಡು ಪರದಾಡುತ್ತಿರುವವರ ನೆರವಿಗೆ ಜಗತ್ತಿನ ದೈತ್ಯ ತಾಂತ್ರಿಕಸಂಸ್ಥೆಗಳಲ್ಲೊಂದಾದ ಗೂಗಲ್‌ ಧಾವಿಸಿದೆ. ಅದು ಕಾರ್ಮೊ ಜಾಬ್ಸ್ ಆ್ಯಪನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಮೂಲಕ ದೇಶದ ಎಲ್ಲೆಲ್ಲಿ ಉದ್ಯೋಗಗಳಿವೆ ಎಂಬುದನ್ನು ಪತ್ತೆಹಚ್ಚಿ, ಅರ್ಜಿ ಸಲ್ಲಿಸಲು ಸಾಧ್ಯವಿದೆ.

Advertisement

ಈ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡು, ಅಲ್ಲೇ ಒಂದು ಡಿಜಿಟಲ್‌ ಅರ್ಜಿ ಸಿದ್ಧಪಡಿಸಬಹುದು. ಅದನ್ನು ಗೂಗಲ್‌ ಕಂಪನಿಗಳಿಗೆ ಸಲ್ಲಿಸುತ್ತದೆ. ವ್ಯಕ್ತಿಗಳೇ ಸ್ವತಃ ಆ್ಯಪ್‌ ಬಳಸಿ ಅರ್ಜಿ ಸಲ್ಲಿಸಲೂ ಸಾಧ್ಯವಿದೆ. ತನ್ನ ಅರ್ಜಿಯ ಪರಿಸ್ಥಿತಿಯನ್ನು ಅವಲೋಕನ ಮಾಡಲೂ ಅವಕಾಶವಿದೆ. ಗೂಗಲ್‌ ಕಂಪನಿಗಳ ಮುಂದೆ ತೆರೆದಿಡುವ ಈ ಮಾಹಿತಿಯಿಂದ ಹಲವು ಕಂಪನಿಗಳು ಆಕಾಂಕ್ಷಿಗಳನ್ನು ನೇರವಾಗಿ ಸಂಪರ್ಕಿಸಲು ಸಾಧ್ಯವಾಗ ಲಿದೆ. ಎಲ್ಲಕ್ಕೂ ಮಿಗಿಲಾಗಿ ಹೊಸ ಬದಲಾವಣೆ, ನಮ್ಮ ಬೆಳವಣಿಗೆ ಎಲ್ಲೆಲ್ಲಿ ಆಗಬೇಕು ಎಂಬ ಮಾಹಿತಿಯೂ ಕಾರ್ಮೊದಿಂದ ಲಭ್ಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next