Advertisement

Google 41 ಕೋಟಿ ರೂ ಪಿಂಚಣಿ ಜತೆಗೆ ನಿವೃತ್ತಿ: ಗೂಗಲ್‌ ಎಂಜಿನಿಯರ್‌ ಒಬ್ಬನ ವಿಶೇಷ ಬಯಕೆ

08:26 PM Sep 04, 2023 | Team Udayavani |

ವಾಷಿಂಗ್ಟನ್‌:“ನಿವೃತ್ತಿಯ ಬಳಿಕ ಹಾಯಾಗಿ ಇರಬೇಕು’ ಎಂದು ಹೇಳುತ್ತಿದ್ದ ಕಾಲವಿತ್ತು. ಆದರೆ, ಜಾಗತೀಕರಣ ಬಂದ ಮೇಲೆ ಆ ಹೇಳಿಕೆಯಲ್ಲಿ ಕೊಂಚ ಬದಲಾಗಿದೆ ಎಂದು ಹೇಳಲೇಬೇಕಾಗಿದೆ. ಅದಕ್ಕೆ ಕಾರಣವೂ ಇದೆ. ಗೂಗಲ್‌ನಲ್ಲಿ 22ನೇ ವಯಸ್ಸಿಗೆ ಕೆಲಸ ಪಡೆದುಕೊಂಡಿರುವ ಇಥಾನ್‌ ನಾನಿ ಎಂಬಾತ 35ನೇ ವಯಸ್ಸಿಗೆ 41 ಕೋಟಿ ರೂ. ಪಿಂಚಣಿ ಪಡೆದುಕೊಂಡು ನಿವೃತ್ತಿಯಾಗಲು ಬಯಸಿದ್ದಾನಂತೆ.

Advertisement

ಪ್ರತಿ ವರ್ಷಕ್ಕೆ 1,94,000 ಡಾಲರ್‌ ವೇತನ ಇದೆ (ಸರಿ ಸುಮಾರು 1.60 ಕೋಟಿ ) ಎಂದು ಆತನೇ “ಸಿಎನ್‌ಬಿಸಿ’ ಚಾನೆಲ್‌ಗೆ ಹೇಳಿಕೊಂಡಿದ್ದಾನೆ. ಉಳಿತಾಯ ಖಾತೆಯಲ್ಲಿ ಹಣ ಹಾಗೆಯೇ ಉಳಿಸಿಕೊಂಡರೆ ಯಾವ ಲಾಭವೂ ಇಲ್ಲ. ಬರುತ್ತಿರುವ ಸಂಬಳವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿದರೆ ಲಾಭ ಪಡೆಯಲು ಸಾಧ್ಯವೆಂದು ಹೆತ್ತವರು ನನಗೆ ವಿವರಿಸಿದ್ದಾರೆ. ಅದರಂತೆ ನಡೆದುಕೊಳ್ಳಲು ಮುಂದಾಗಿದ್ದೇನೆ ಎಂದಿದ್ದಾನೆ. ಇಂಥ ಯೋಚನೆಯಿಂದಲೇ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಿಂದ ಆತ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಪದವಿಯನ್ನು ಪಡೆದುಕೊಂಡಿದ್ದಾನೆ.

ನಂತರ ಕೆಲಸ ಮಾಡುತ್ತಲೇ ಡೇಟ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡು ಗೂಗಲ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾನೆ. ಸದ್ಯ 1.11 ಕೋಟಿ ರೂ. ಮೊತ್ತವನ್ನು ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದಾನೆ. ಕೈಗೆ ಸಿಗುವ ಸಂಬಳದಲ್ಲಿ ಪ್ರತಿ ವರ್ಷ ಶೇ.35ನ್ನು ಹೂಡಿಕೆಗೆ ವಿನಿಯೋಗ ಮಾಡಲು ಮುಂದಾಗಿದ್ದಾನೆ ಆತ. ಜತೆಗೆ ರಿಯಲ್‌ ಎಸ್ಟೇಟ್‌ನಲ್ಲೂ ವಿನಿಯೋಗಿಸಲು ಮುಂದಾಗಿದ್ದಾನಂತೆ.

 

Advertisement

Udayavani is now on Telegram. Click here to join our channel and stay updated with the latest news.

Next