Advertisement

ತನ್ನ “ಪ್ಲೇ ಮ್ಯೂಸಿಕ್” ಸೇವೆಯನ್ನು ಕೊನೆಗೊಳಿಸಲಿದೆ ಗೂಗಲ್

11:17 AM Feb 19, 2021 | Team Udayavani |

ನವ ದೆಹಲಿ : ಗೂಗಲ್ ತನ್ನ ಜನಪ್ರಿಯ ಮ್ಯೂಸಿಕ್ ಸ್ಟ್ರೀಮಿಂಗ್ ಸೇವೆಯ ‘ಪ್ಲೇ ಮ್ಯೂಸಿಕ್’ ನನ್ನು ಫೆಬ್ರವರಿ 24, 2021 ರಂದು ಡಿಲೀಟ್ ಮಾಡಲಾಗುತ್ತದೆ ಎಂದು ಹೇಳಿಕೊಂಡಿದೆ.

Advertisement

“ನಾವು ಶೀಘ್ರದಲ್ಲೇ ನಿಮ್ಮ ಎಲ್ಲಾ ಗೂಗಲ್ ಪ್ಲೇ ಮ್ಯೂಸಿಕ್ ಲೈಬ್ರರಿ ಮತ್ತು ಡೇಟಾವನ್ನು ಡಿಲೀಟ್ ಮಾಡಲಿದ್ದೇವೆ. ಫೆಬ್ರವರಿ 24,2021 ರಂದು, ನಿಮ್ಮ ಎಲ್ಲಾ ಗೂಗಲ್ ಪ್ಲೇ ಮ್ಯೂಸಿಕ್ ಡೇಟಾವನ್ನು ನಾವು ಡಿಲೀಟ್ ಮಾಡುತ್ತೇವೆ. ಈ ದಿನಾಂಕದ ನಂತರ, ಅದನ್ನು ಮರುಪಡೆಯಲು ಯಾವುದೇ ಮಾರ್ಗವಿಲ್ಲ “ಎಂದು ಗೂಗಲ್ ಹೇಳಿದೆ.

ಓದಿ : ಹೀರೋ ಎಂಬ ಟೆಕ್ನಿಷಿಯನ್ಸ್‌ ಸಿನಿಮಾ: ಇಲ್ಲಿ ಎಲ್ಲರೂ, ಎಲ್ಲವೂ ಆಗಿದ್ದಾರೆ…

ನಿಮ್ಮ ಗೂಗಲ್ ಪ್ಲೇ ಮ್ಯೂಸಿಕ್ ಲೈಬ್ರರಿ ಮತ್ತು ಡೇಟಾವನ್ನು ಡೌನ್‌ ಲೋಡ್ ಮಾಡಲು ನೀವು ಬಯಸಿದರೆ, ಫೆಬ್ರವರಿ 24,2021 ರ ಮೊದಲು ನೀವು ಗೂಗಲ್ ಟೇಕ್‌  ಔಟ್ ಮೂಲಕ ಮಾಡಬಹುದು “ಎಂದು ಗೂಗಲ್ ಹೇಳಿಕೊಂಡಿದೆ. ಗೂಗಲ್ ಡಿಸೆಂಬರ್ 2020 ರಲ್ಲಿ ಪ್ಲೇ ಮ್ಯೂಸಿಕ್‌ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು, ಅದನ್ನು ಯೂಟ್ಯೂಬ್ ಮ್ಯೂಸಿಕ್‌ ನಿಂದ ಬದಲಾಯಿಸಲಾಗುವುದು. ಈ ಹಿಂದೆ ಮ್ಯೂಸಿಕ್ ಗಾಗಿ ಪ್ಲೇ ಮ್ಯೂಸಿಕ್ ಅಪ್ಲಿಕೇಶನ್ ಬಳಸಿದ ಬಳಕೆದಾರರು ಈಗ ತಮ್ಮ ಸೇವೆಗಳನ್ನು ಯೂಟ್ಯೂಬ್ ಮ್ಯೂಸಿಕ್‌ಗೆ ಬದಲಾಯಿಸಬಹುದಾಗಿದೆ.

ನಿಮ್ಮ ಕಂಟೆಂಟನ್ನು ನೀವು ಗೂಗಲ್ ಪ್ಲೆ ಮ್ಯೂಸಿಕ್ ಬ್ಯಾಕಪ್ ಮಾಡಬಹುದು ಮತ್ತು ಅದನ್ನು ಕೆಲವು ಸುಲಭ ಹಂತಗಳಲ್ಲಿ ಯೂಟ್ಯೂಬ್ ಮ್ಯೂಸಿಕ್ ಗೆ  ವರ್ಗಾಯಿಸಬಹುದಾಗಿದೆ.  ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಆ್ಯಪ್ ಸ್ಟೋರ್‌ ನಿಂದ ಯೂಟ್ಯೂಬ್ ಮ್ಯೂಸಿಕ್ ಅಪ್ಲಿಕೇಶನ್ ಡೌನ್‌ ಲೋಡ್ ಮಾಡಿ ಮತ್ತು ಅದನ್ನು ಇನ್ ಸ್ಟಾಲ್ ಮಾಡಬಹುದಾಗಿದೆ.

Advertisement

ಓದಿ : ಮಾರ್ಚ್ 15ಕ್ಕೆ ಪರಿಷತ್ ಉಪಚುನಾವಣೆ

ನಿಮ್ಮ ಡೇಟಾವನ್ನು ವರ್ಗಾಯಿಸಲು, ಟ್ರಾನ್ಸ್ ಫರ್ ಬಟನ್ ಮೇಲೆ ಕ್ಲಿಕ್ ಮಾಡಿ. ಈ ವೈಶಿಷ್ಟ್ಯದ ಅಡಿಯಲ್ಲಿ ಪಾಡ್‌ ಕಾಸ್ಟ್‌ಗಳನ್ನು ವರ್ಗಾಯಿಸಲು ಸಾಧ್ಯವಾಗುವುದಿಲ್ಲ. ಈಗಾಗಲೇ ತಮ್ಮ ಡೇಟಾವನ್ನು ಯೂಟ್ಯೂಬ್ ಮ್ಯೂಸಿಕ್ ಅಪ್ಲಿಕೇಶನ್‌ ಗೆ ವರ್ಗಾಯಿಸಿದ ಬಳಕೆದಾರರು, ತಮ್ಮ ಲೈಬ್ರರಿಯನ್ನು ನವೀಕೃತವಾಗಿಡಲು ಪ್ರಕ್ರಿಯೆಯನ್ನು ಪುನರಾವರ್ತಿಸಲು ಗೂಗಲ್ ಶಿಫಾರಸು ಮಾಡಿದೆ.

“ತಮ್ಮ ಗೂಗಲ್ ಪ್ಲೇ ಮ್ಯೂಸಿಕ್ ಖಾತೆಯನ್ನು ಯೂಟ್ಯೂಬ್ ಮ್ಯೂಸಿಕ್‌ ಗೆ ವರ್ಗಾಯಿಸದಿರಲು ನಿರ್ಧರಿಸುವ ಬಳಕೆದಾರರಿಗಾಗಿ, ನಿಮ್ಮ ಬಿಲ್ಲಿಂಗ್ ಸೈಕಲ್ ನ ಕೊನೆಯಲ್ಲಿ ನಿಮ್ಮ ಚಂದಾದಾರಿಕೆಯನ್ನು ರದ್ದುಗೊಳಿಸುವುದು ಖಚಿತವಾಗಿದೆ, ಆದ್ದರಿಂದ ನೀವು ಚಂದಾದಾರಿಕೆಯನ್ನು ಪಾವತಿಸುವುದಿಲ್ಲ” ಎಂದು ಗೂಗಲ್ ಬ್ಲಾಗ್‌ ಸ್ಪಾಟ್‌ ನಲ್ಲಿ ತಿಳಿಸಿದೆ.

ಓದಿ : ಶಾಲೆಗಳಲ್ಲಿ ಇನ್ನು ವೇದ-ಮಂತ್ರ ಘೋಷ?ಗೋ ವಿಜ್ಞಾನ್‌ಗೆ ಸೂಚನೆ

 

Advertisement

Udayavani is now on Telegram. Click here to join our channel and stay updated with the latest news.

Next