Advertisement

ಗೂಗಲ್‌ ಫ್ಯಾಮಿಲಿ ಲಿಂಕ್‌ ಆ್ಯಪ್‌

10:18 AM Sep 21, 2019 | mahesh |

ಮಣಿಪಾಲ: ಇಂಟರ್‌ನೆಟ್‌ನಲ್ಲಿ ಮಕ್ಕಳು ಏನೇನೋ ನೋಡುತ್ತಾರೆ ಎನ್ನುವ ಆರೋಪಗಳು ಇದ್ದಿದ್ದೇ. ಹೆತ್ತವರಿಗೆ ಇರುವ ಈ ಆತಂಕ ನಿವಾರಿಸಲು ಗೂಗಲ್‌ “ಫ್ಯಾಮಿಲಿ ಲಿಂಕ್‌’ ಪರಿಚಯಿಸಿದೆ. ಇದೀಗ ಈ ಲಿಂಕ್‌ ಮತ್ತಷ್ಟು ಹೊಸ ಫೀಚರ್‌ಗಳೊಂದಿಗೆ ಲಭ್ಯವಿದೆ. ಏನಿದು ಹೊಸ ಫೀಚರ್‌ ಇಲ್ಲಿದೆ ಮಾಹಿತಿ.

Advertisement

ಏನಿದು ಆ್ಯಪ್‌?
ಮಕ್ಕಳು ಅಥವಾ ಹದಿಹರೆಯದವರು ಸ್ಮಾರ್ಟ್‌ ಫೋನ್‌ ಬಳಸುತ್ತಿದ್ದಲ್ಲಿ ಈ ತಂತ್ರಾಂಶ ನೆರವಾ ಗಬ ಲ್ಲದು. ಇದು ಮಕ್ಕಳ ಫೋನ್‌ ಅನ್ನು ಹೆತ್ತವರ ಪೋನ್‌ಗೆ ಸಂಪರ್ಕಿಸಿ ಮಾನಿಟರ್‌ ಮಾಡುವ ಆ್ಯಪ್‌ ಆಗಿದೆ. ಈ ಆ್ಯಪ್‌ ಅನ್ನು ಗೂಗಲ್‌ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಹೆತ್ತವರು “ಫ್ಯಾಮಿಲಿ ಲಿಂಕ್‌’ ಮತ್ತು ಮಕ್ಕಳ ಫೋನ್‌ನಲ್ಲಿ “ಫ್ಯಾಮಿಲಿ ಲಿಂಕ್‌ ಫಾರ್‌ ಚಿಲ್ಡ್ರನ್ಸ್‌ ಆ್ಯಂಡ್‌ ಟಿನೇಜರ್ì’ ಇರಬೇಕು.

ಖಾತೆ ತೆರೆಯುವುದು ಹೇಗೆ?
ಹೆತ್ತವರು ಮತ್ತು ಮಕ್ಕಳು ಗೂಗಲ್‌ ಪ್ಲೇಸ್ಟೋರ್‌ನಿಂದ ಮೇಲೆ ಸೂಚಿಸಿದ ಪ್ರತ್ಯೇಕ ಆ್ಯಪ್‌ ಡೌನ್‌ಲೋಡ್‌ ಮಾಡಬೇಕು. ಹೆತ್ತವರು ಅವರ ಗೂಗಲ್‌ ಖಾತೆ ಮತ್ತು ಮಕ್ಕಳು ತಮ್ಮ ಗೂಗಲ್‌ ಖಾತೆಯಲ್ಲಿ ಸೈನ್‌ ಇನ್‌ ಆಗಬೇಕು. ಮಕ್ಕಳಲ್ಲಿ ಖಾತೆ ಇಲ್ಲದೇ ಇದ್ದರೆ ಗೂಗಲ್‌ ಅಕೌಂಟ್‌ ರಚಿಸಿಕೊಳ್ಳಬೇಕು. ಅದರಲ್ಲಿ ಅವರ ಹೆಸರು ಮತ್ತು ಜನ್ಮದಿನಾಂಕ ದಾಖಲಿಸಿದ ಬಳಿಕವಷ್ಟೇ ತೆರೆದು ಕೊಳ್ಳುತ್ತದೆ. ಈ ಖಾತೆಯ ಲಿಂಕ್‌ ಮಕ್ಕಳ ಇ-ಮೇಲ್‌ಗ‌ೂ ಕಳುಹಿಸಲಾಗುತ್ತದೆ. ಮಕ್ಕಳು ಲಾಗಿನ್‌ ಆದ ಕೂಡಲೇ, ಅದರ ಮಾಹಿತಿ ಪಾಲಕರಿಗೆ ಇ-ಮೇಲ್‌ ಬರುತ್ತದೆ. ಅಲ್ಲಿಗೆ ಇಬ್ಬರ ಆ್ಯಪ್‌ಗ್ಳ ಲಿಂಕ್‌ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಮೊಬೈಲ್‌ ಲಾಕ್‌ ಮಾಡಬಹುದು
ಯಾವುದೋ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭ, ಹೊರಗೆ ಆಟಕ್ಕೆ ತೆರಳಿದರೆ, ಊಟದ ಸಮಯದಲ್ಲಿ, ಕುಟುಂಬದ ಜತೆ ಸಮಯ ಕಳೆಯುವ ಸಂದರ್ಭ ಗಳಲ್ಲಿ ಮಕ್ಕಳು ಮೊಬೈಲ್‌ ಬಳಸುತ್ತಿದ್ದರೆ, ಅವರ ಫೋನ್‌ ಅನ್ನು ಲಾಕ್‌ ಮಾಡಿ ಬಳಸದಂತೆ ಮಾಡಬಹುದು. ಈ ಲಾಕ್‌ ಎಷ್ಟು ಗಂಟೆ ತನಕ ಮುಂದುವರಿಯಲಿದೆ ಎಂಬುದನ್ನು ನೀವು ನಿಗದಿಪಡಿಸಬಹುದು. ಅವಧಿಯಲ್ಲಿ ಇಂಟರ್‌ನೆಟ್‌ ಬಳಸಲು ಮಾತ್ರ ಅಸಾಧ್ಯ. ಆದರೆ ಕರೆ ಮತ್ತು ಎಸ್‌ಎಂಎಸ್‌ಗಳು ಅಬಾಧಿತ.

ಯಾವ ಫೋನ್‌ಗಳಿಗೆ ಲಭ್ಯ?
ಕಿಟ್‌ಕ್ಯಾಟ್‌ (4.4) ಮತ್ತು ಅದಕ್ಕಿಂತ ಮೇಲ್ಪಟ್ಟ ಆ್ಯಂಡ್ರಾಯ್ಡ ಒ.ಎಸ್‌. ಇರುವ ಫೋನ್‌ಗಳಲ್ಲಿ ಬಳಸಬಹುದು. ಐಫೋನ್‌ನ ಐಒಎಸ್‌ 9 ಮತ್ತು ಅದರ ಅನಂತರದ ಆವೃತ್ತಿಗಳಲ್ಲಿ ಇದು ಕೆಲಸ ಮಾಡು¤ದೆ. ಮಕ್ಕಳ ಸ್ಮಾರ್ಟ್‌ ಫೋನ್‌ಗಳು ಆ್ಯಂಡ್ರಾಯ್ಡ 5.0 ವರ್ಷನ್‌ಗಳ ಅನಂತರ ಎಲ್ಲ ಫೋನ್‌ಗಳಲ್ಲಿ ಬಳಸಬಹುದಾಗಿದ್ದು, ಐ ಫೋನ್‌ನಲ್ಲಿಯೂ ಲಭ್ಯ.

Advertisement

ಮಕ್ಕಳ ಆ್ಯಪ್‌ ನಿರ್ವಹಿಸಬಹುದೇ?
ಮಕ್ಕಳು ಬಳಸುವ ಆ್ಯಪ್‌ಗ್ಳನ್ನು ತಮ್ಮ ಮೊಬೈಲ್‌ ಫೋನ್‌ಗಳಲ್ಲಿ ನಿಯಂತ್ರಿಸಬಹುದಾಗಿದೆ. ಅವರು ಯಾವೆಲ್ಲ ಆ್ಯಪ್‌ಗ್ಳನ್ನು ಬಳಸುತ್ತಿದ್ದಾರೆ ಮತ್ತು ಎಷ್ಟು ತಾಸು ಬಳಸಿ ದ್ದಾರೆ ಎಂಬುದನ್ನು ನೀವು ಅರಿತುಕೊಳ್ಳಬಹುದು. ಮಕ್ಕಳು ನಿಮಗ ರಿವಿಲ್ಲದೇ ಪ್ಲೇಸ್ಟೋರ್‌ನಿಂದ ಆ್ಯಪ್‌ಗ್ಳನ್ನು ಡೌನ್‌ಲೋಡ್‌ ಮಾಡಲು ಇಚ್ಚಿಸಿದರೆ ನೀವು ಓಕೆ ಅಂದರೆ ಮಾತ್ರ ಆ್ಯಪ್‌ ಡೌನ್‌ಲೋಡ್‌ ಮಾಡಬಹುದಾಗಿದೆ. ಇದು ಫಿಲ್ಟರ್‌ ರೂಪದಲ್ಲಿ ಕಾರ್ಯ ನಿರ್ವಹಿಸುತ್ತದೆ. ಅವರ ಅಗತ್ಯ ಇರುವ ಆ್ಯಪ್‌ಗ್ಳನ್ನು ನೀವು ನೇರವಾಗಿ ಅವರ ಪೋನ್‌ಗೆ ಡೌನ್‌ಲೋಡ್‌ ಮಾಡಬಹುದು. ಮಕ್ಕಳು ಮೊಬೈಲ್‌ ಬಳಸಿದ ಮಾಹಿತಿ ವಾರಾಂತ್ಯ ಹೆತ್ತವರ ಮೊಬೈಲ್‌ಗೆ ವರದಿ ರೂಪದಲ್ಲಿ ಬರುತ್ತದೆ.

ಸಮಯ ನಿಗದಿಪಡಿಸಬಹುದು
ಮಕ್ಕಳು ಎಷ್ಟು ತಾಸುಗಳ ಕಾಲ ಮೊಬೈಲ್‌ ಬಳಸ ಬೇಕು ಎಂಬುದನ್ನು ನೀವು ಈ ಆ್ಯಪ್‌ ಮುಖಾಂತರ ನಿರ್ಧರಿಸಬಹುದಾಗಿದೆ. ಹೆತ್ತವರು ನಿಗದಿಪಡಿಸಿದ ಸಮಯ ಮಾತ್ರ ಮಕ್ಕಳು ಫೋನ್‌ ಬಳಸಬಹುದಾಗಿದೆ. ಇದರಲ್ಲಿ “ಡೇ ಟೈಮ್‌’ ಮತ್ತು “ಬೆಡ್‌ ಟೈಮ್‌’ ಎಂದು ಇದ್ದು, ಹಗಲು ಮತ್ತು ರಾತ್ರಿ ಮೊಬೈಲ್‌ ಬಳಕೆಯ ಅವಧಿಯನ್ನು ನಿರ್ಧರಿಸಬಹುದು. ಹೆತ್ತವರಿಗೆ ಈ ಮಿತಿಯನ್ನು ಬದಲಿಸುವ ಅವಕಾಶವೂ ಇದೆ. ಈ ಆ್ಯಪ್‌ ಮಕ್ಕಳಿಗೆ ಲಭ್ಯವಾದ ಸಮಯ ಮುಗಿಯುತ್ತ ಬರುತ್ತಿದ್ದಂತೆ ಸೂಚನೆಯನ್ನು ಕೊಡುತ್ತದೆ.

ಲೊಕೇಶನ್‌ ಟ್ರ್ಯಾಕಿಂಗ್‌ ಗೂಗಲ್‌ನ ಈ ಫ್ಯಾಮಿಲಿ
ಲಿಂಕ್‌ನಲ್ಲಿ ನಿಮ್ಮ ಮಗ/ಮಗಳು ಎಲ್ಲಿದ್ದಾರೆ ಎಂಬುದನ್ನು ಮನೆ ಯಿಂದಲೇ ನೋಡಬಹುದಾಗಿದೆ. ಇದು ಗೂಗಲ್‌ ಲೊಕೇಶನ್‌ ಟ್ರ್ಯಾಕರ್‌ ಸಹಾಯದೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಉದಾ: ಪ್ರವಾಸಕ್ಕೆಂದು ಮಗ/ಮಗಳು ಹೊರಟರೆ ಅವರು ಈಗ ಎಲ್ಲಿ ತಲುಪಿದರು ಎಂಬುದನ್ನು “ಲೈವ್‌ ಲೊಕೇಶನ್‌ ಶೇರಿಂಗ್‌’ ರೂಪದಲ್ಲಿ ದೊರೆಯುತ್ತದೆ.

ಬ್ರೌಸರ್‌ನಲ್ಲಿ ಬಳಸಬಹುದು
ಈ ಆ್ಯಪ್‌ನಲ್ಲಿ ದೊರೆಯುವ ಎಲ್ಲ ಫೀಚರ್‌ಗಳನ್ನು ನಾವು ವೆಬ್‌ ಬ್ರೌಸರ್‌ ಮೂಲಕವೂ ಬಳಸಬಹುದು. ಆದರೆ ನಿಮ್ಮ ಸ್ಮಾರ್ಟ್‌ ಫೋನ್‌ನಲ್ಲಿ ಈ ಆ್ಯಪ್‌ ಇರಲೇ ಬೇಕು. ಮಕ್ಕಳು ಸ್ಮಾರ್ಟ್‌ ಫೋನ್‌ಗಳ ಬದಲು ಕ್ರೋಮ್‌ಬುಕ್‌ ಬಳಸುತ್ತಿದ್ದರೆ ಅವುಗಳ ಮೇಲೆಯೂ ನಿಯಂತ್ರಣ ಹೊಂದಬಹುದಾಗಿದೆ. ಆ ಕ್ರೋಮ್‌ಬುಕ್‌ನಲ್ಲಿ ಮಕ್ಕಳ ಗೂಗಲ್‌ ಖಾತೆ ಸೈನ್‌ಇನ್‌ ಆಗಿರಬೇಕು.

– ಕಾರ್ತಿಕ್‌ ಅಮೈ

Advertisement

Udayavani is now on Telegram. Click here to join our channel and stay updated with the latest news.

Next