Advertisement

ಪ್ರಜಾಪ್ರಭುತ್ವದ ಹಬ್ಬಕ್ಕೆ ‘ಗೂಗಲ್‌ ಡೂಡಲ್‌’

09:51 AM Apr 12, 2019 | Hari Prasad |

17ನೇ ಲೋಕಸಭಾ ಸದಸ್ಯರ ಆಯ್ಕೆಗಾಗಿ ದೇಶಾದ್ಯಂತ ಏಳು ಹಂತಗಳಲ್ಲಿ ನಡೆಯಲಿರುವ ಮತದಾನಕ್ಕೆ ಗುರುವಾರದಂದು ಚಾಲನೆ ಸಿಕ್ಕಿದೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆ ಎಂಬುದೊಂದು ದೊಡ್ಡ ಹಬ್ಬವಾದರೆ ಆ ಚುನಾವಣೆಯಲ್ಲಿ ಅರ್ಹ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವುದೇ ಇನ್ನೊಂದು ಸಂಭ್ರಮ.

Advertisement

ಆದರೆ ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿನ ಮತದಾರರು ಮತ್ತು ವಿದ್ಯಾವಂತ ಮತದಾರರಲ್ಲಿ ಕೆಲವರು ಮತದಾನದತ್ತ ನಿರಾಸಕ್ತಿ ವಹಿಸುತ್ತಿರುವುದು ಬಹಳ ಕಳವಳಕಾರಿ ವಿಚಾರ. ಇದಕ್ಕಾಗಿ ಚುನಾವಣಾ ಆಯೋಗ, ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳು ಪ್ರತೀ ಬಾರಿ ಚುನಾವಣೆಯ ಸಂದರ್ಭದಲ್ಲಿ ಮತದಾನ ಜಾಗೃತಿ ಅಭಿಯಾನ ನಡೆಸುವ ಮೂಲಕ ಹೆಚ್ಚೆಚ್ಚು ಮತದಾರರು ಮತದಾನ ಕೇಂದ್ರದತ್ತ ಬಂದು ಮತದಾನ ಮಾಡುವಂತೆ ಪ್ರೇರೇಪಿಸುವ ಕಾರ್ಯಗಳು ನಡೆಯುತ್ತಿರುತ್ತವೆ.

ಸಾಮಾಜಿಕ ಜಾಲತಾಣಗಳು ಬಹುದೊಡ್ಡ ಸಮೂಹವನ್ನು ಪ್ರತಿನಿಧಿಸುತ್ತಿರುವ ಕಾರಣ ಫೇಸ್ಬುಕ್‌, ಟ್ವಿಟ್ಟರ್‌, ವಾಟ್ಸ್ಯಾಪ್‌ ಸಹಿತ ಸಾಮಾಜಿಕ ಜಾಲತಾಣ ಮಾಧ್ಯಮಗಳ ಮೂಲಕವೂ ಮತದಾನ ಜಾಗೃತಿ ಮೂಡಿಸು ಕೆಲಸಗಳು ಪರಿಣಾಮಕಾರಿಯಾಗಿ ನಡೆಯುತ್ತಿವೆ. ಇದಕ್ಕೆ ಪೂರಕವಾಗಿ ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ವಿಶೇಷವಾದ ‘ಡೂಡಲ್‌’ ಮೂಲಕ ಮತದಾನದ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಕೈಜೋಡಿಸಿದೆ. ಪ್ರತೀ ಬಾರಿ ವಿಶೇಷ ಸಂದರ್ಭಗಳಲ್ಲಿ ಮತ್ತು ಮಹಾನ್‌ ವ್ಯಕ್ತಿಗಳ ಸ್ಮರಣೆಗಾಗಿ ಡೂಡಲ್‌ ಗೌರವ ಸಲ್ಲಿಸುವ ಗೂಗಲ್‌ ಈ ಬಾರಿ ಭಾರತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದ ಸಂದರ್ಭದಲ್ಲಿ ಈ ಡೂಡಲ್‌ ರಚಿಸಿರುವುದು ವಿಶೇಷವಾಗಿದೆ. ಈ ಡೂಡಲ್‌ ಮೇಲೆ ಕ್ಲಿಕ್‌ ಮಾಡಿದರೆ ನಾವು ಹೇಗೆ ಮತದಾನ ಮಾಡಬಹುದು ಎಂಬ ಮಾಹಿತಿಯನ್ನು ಗೂಗಲ್‌ ಇಲ್ಲಿ ನೀಡಿದೆ.


Advertisement

Udayavani is now on Telegram. Click here to join our channel and stay updated with the latest news.

Next