Advertisement

ಭಾರತದ 453 ಉದ್ಯೋಗಿಗಳ ವಜಾಗೊಳಿಸಿದ ಗೂಗಲ್‌ !

08:50 PM Feb 17, 2023 | |

ನವದೆಹಲಿ: ಟೆಕ್‌ ದೈತ್ಯ ಗೂಗಲ್‌ ದೇಶದಲ್ಲಿ ಕೆಲಸ ಮಾಡುವರ ಪೈಕಿ 453 ಮಂದಿಯನ್ನು ವಜಾ ಮಾಡಿದೆ.

Advertisement

ಗುರುವಾರ ತಡರಾತ್ರಿಯೇ ಈ ಬಗ್ಗೆ ದೇಶದಲ್ಲಿ ಗೂಗಲ್‌ನ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ಸಂಜಯ ಗುಪ್ತಾ ಇ-ಮೇಲ್‌ ಕಳುಹಿಸಿದ್ದಾರೆ. ಮತ್ತೂಂದೆಡೆ, ವಜಾಗೊಂಡ ಉದ್ಯೋಗಿಗಳ ಆಯ್ಕೆಯಲ್ಲಿನ ಸಂಪೂರ್ಣ ಹೊಣೆ ಗೂಗಲ್‌ ಸಿಇಒ ಸುಂದರ್‌ ಪಿಚೈ ಹೊತ್ತಿದ್ದಾರೆ. ದೇಶಿ ನಿಯಮಗಳಿಗೆ ಅನುಗುಣವಾಗಿ ವಜಾಗೊಂಡ ಉದ್ಯೋಗಿಗಳಿಗೆ ಪರಿಹಾರ ನೀಡುವುದಾಗಿ ಪಿಚೈ ತಿಳಿಸಿದ್ದಾರೆ.

ಒಂದು ತಿಂಗಳ ಹಿಂದಷ್ಟೇ, ಗೂಗಲ್‌ನ ಮಾತೃ ಸಂಸ್ಥೆ ಆಲ#ಬೆಟ್‌, ತನ್ನ ಜಾಗತಿಕ ಉದ್ಯೋಗಿಗಳ ಪೈಕಿ ಶೇ.6ರಷ್ಟು ಅಥವಾ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿರುವುದಾಗಿ ತಿಳಿಸಿತ್ತು. ಈಗ ಭಾರತದಲ್ಲಿ ಮಾಡಿರುವ ಉದ್ಯೋಗಕಡಿತ ಅದೇ ಘೋಷಣೆಯ ಭಾಗವೇ ಅಥವಾ ಪ್ರತ್ಯೇಕ ಕಡಿತವೇ ಎಂಬುದು ತಿಳಿದುಬಂದಿಲ್ಲ. ಈ ನಡುವೆ, 10 ಸಾವಿರ ಮಂದಿಯನ್ನು ವಜಾಗೊಳಿಸಲು ಯೋಜಿಸಿದ್ದ ಅಮೆಜಾನ್‌ ಆ ಸಂಖ್ಯೆಯನ್ನು 18 ಸಾವಿರಕ್ಕೆ ಹೆಚ್ಚಿಸಲು ಯೋಜಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next