ಗೂಗಲ್ ತನ್ನ ಗೂಗಲ್ ಕ್ಲೌಡ್‌ನಲ್ಲಿ ಹೊಸ ಇಮೇಜ್ ಫೀಚರ್ಸ್ ಅನ್ನು ಪರಿಚಯಿಸಿದೆ. ಕ್ಲೌಡ್‌ನಲ್ಲಿ ಇಮೇಜ್‌ಗಳನ್ನು ಬ್ಯಾಕಪ್ ಮಾಡಲು ಅಥವಾ ರಿಸ್ಟೋರ್ ಮಾಡಲು ವರ್ಚುವಲ್ ಮಷಿನ್ ಅನ್ನು ಕ್ರಿಯೆಟ್ ಮಾಡಲು ನೆರವಾಗುತ್ತದೆ. ಇದರಿಂದ ಜನರಿಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನ ಒಂದೇ ಫೀಚರ್‌ನಲ್ಲಿ ನೀಡುವ ಕಂಪ್ಯೂಟ್ ಎಂಜಿನ್ ಪರಿಚಯಿಸಿದೆ.
ಗೂಗಲ್‌ನಲ್ಲಿ ಕಸ್ಟಮ್ ಇಮೇಜ್‌ಗಳು ಕೇವಲ ಸಿಂಗಲ್ ಡಿಸ್ಕ್ ವಿಷಯಗಳನ್ನು ಮಾತ್ರ ಸೆರೆಹಿಡಿಯುತ್ತವೆ. ಅಲ್ಲದೆ ನಿಮಗೆ ಅಗತ್ಯವಿರುವ ಅಪ್ಲಿಕೇಶನ್‌ಗಳೊಂದಿಗೆ ನೀವು ಮೊದಲೇ ಕಾನ್ಫಿಗರ್ ಮಾಡಿರುವ ಹೊಸ ನಿದರ್ಶನಗಳನ್ನು ರೂಪಿಸಲು ಈ ಮಾದರಿಯನ್ನ ಬಳಸಬಹುದಾಗಿದೆ. ಆದರೆ ಇದೀಗ ಮಷಿನ್ ಇಮೇಜ್ ಫೀಚರ್ಸ್ ಪರಿಚಯಿಸಿರುವುದರಿಂದ ಬಳಕೆದಾರರಿಗೆ ಹೆಚ್ಚಿನ ಸಮಯ ವ್ಯಯವಾಗುವುದು ತಪ್ಪುತ್ತದೆ. ತಾವು ಆಯ್ಕೆ ಮಾಡಿದ ಫೊಟೋಗೆ ಸಂಬಂಧಿಸಿದ ವಿಚಾರಗಳನ್ನು ಹುಡುಕುವ ಬದಲು ಒಂದೇ ಬಾರಿಗೆ ಎಲ್ಲಾ ಮಾಹಿತಿಗಳನ್ನ ಇಲ್ಲಿ ತಿಳಿಯಬಹುದಾಗಿದೆ.
ನೀವು ಒಂದೇ ವರ್ಗಕ್ಕೆ ಸೇರಿದ ಇತರೆ ಇಮೇಜ್‌ಗಳನ್ನು ಆಯ್ಕೆ ಮಾಡಿದರೆ ಅದಕ್ಕೆ ಸಂಬಂಧಿಸಿದ ಮಾಹಿತಿ ಅಲ್ಲಿಯೇ ಲಭ್ಯವಾಗಲಿದೆ. ಇದರಿಂದ ನಿಮಗೆ ಬೇಕಿರುವ ಇಮೇಜ್ ಅದರ ಜತೆಗಿನ ಮಾಹಿತಿ ಎಲ್ಲವೂ ಒಂದೇ ಕಡೆ ಲಭ್ಯವಾ ಗಲಿದೆ. ಹೆಚ್ಚಿನ ವಿಷಯಗಳನ್ನು ಹಂತಹಂತವಾಗಿ ಸರ್ಚ್ ಮಾಡುವ ಬದಲು ಒಂದೇ ಹಂತದಲ್ಲಿ ವಿಚಾರ ತಿಳಿದುಕೊಳ್ಳಬಹುದಾಗಿರುವುದುರಿಂದ ಮೊಬೈಲ ಡಾಟಾ ಮತ್ತು ಸಮಯ ಉಳಿತಾಯವಾಗುತ್ತದೆ. ಇನ್ನು ಈ ಫೀಚರ್‌ನಿಂದಾಗಿ ಬಳಕೆದಾರರ ಹೆಚ್ಚು ಸಮಯವನ್ನು ಉಳಿಸಬಹುದಾಗಿದೆ. ಜತೆಗೆ, ಮಷಿನ್ ಇಮೇಜ್‌ನಲ್ಲಿ ಡಿಫರೆನ್ಷಿಯಲ್ ಡಿಸ್ಕ್ ಬ್ಯಾಕಪ್ ಟೆಕ್ನಾಲಜಿಯನ್ನೂ ನೀಡಲಾಗಿದೆ.
ಸದ್ಯ ಈ ಹೊಸ ಮಾದರಿಯ ಮಷಿನ್ ಇಮೇಜ್‌ಗಳು ಸ್ಕೇಲೆಬಿಲಿಟಿ, ಬ್ಯಾಕಪ್ ಮತ್ತು ರೀಸ್ಟೋರ್ ಮಾಡುವಲ್ಲಿ ಪ್ರಮುಖ ಪಾತ್ರವನ್ನ ವಹಿಸುತ್ತದೆ. ಇದರಿಂದ ನೀವು ಗೂಗಲ್ ಕ್ಲೌಡ್‌ನಲ್ಲಿ ಉಳಿಸುವ ಇಮೇಜ್‌ಗಳ ಪೂರ್ಣ ಮಾಹಿತಿಯ ಜತೆಗೆ ಮಲ್ಟಿ ಡಿಸ್ಕ್ ನೀಡುವುದರಿಂದ ಬಳಕೆದಾರರ ಮಾಹಿತಿಯನ್ನ ಗ್ರಹಿಸುವುದಕ್ಕೆ ಸಾಧ್ಯವಾಗಲಿದೆ. ಇದು ಒಂದು ರೀತಿಯಲ್ಲಿ ಬಳಕೆದಾರರಿಗೆ ಅದರಲ್ಲೂ ವಿಷಯ ಕೇಂದ್ರಿತ ಸಂಪನ್ಮೂಲ ಹುಡುಕುವವರಿಗೆ ಇದು ತುಂಬಾ ಉಪಯುಕ್ತವಾಗಿದೆ.