ನವದೆಹಲಿ: ಪಿಕ್ಸೆಲ್ ಸ್ಮಾರ್ಟ್ ಫೋನ್ ಗಳನ್ನು ಭಾರತದಲ್ಲಿ ತಯಾರಿಸಲು ಯೋಜನೆ ಹಾಕಿಕೊಂಡಿರುವುದಾಗಿ ಗೂಗಲ್ ಕಂಪನಿ ಗುರುವಾರ (ಅಕ್ಟೋಬರ್ 19) ಘೋಷಣೆ ಮಾಡಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:Kumkum issue; ಹಿಂದೂಗಳ ವಿರುದ್ಧ ಏನೇನೋ ಮಾಡಬೇಕು ಅದನ್ನು ಸರ್ಕಾರ ಮಾಡುತ್ತಿದೆ: ಈಶ್ವರಪ್ಪ
ಸರ್ಜ್ ಎಂಜಿನ್ ದೈತ್ಯ ಸಂಸ್ಥೆ ಪಿಕ್ಸೆಲ್ 8ರ ಶ್ರೇಣಿಯ ಮೊಬೈಲ್ ಗಳನ್ನು ಭಾರತದಲ್ಲಿಯೇ ತಯಾರಿಸುವುದಾಗಿ ತಿಳಿಸಿದ್ದು, 2024ರಲ್ಲಿ ಪಿಕ್ಸೆಲ್ 8ರ ಮೊಬೈಲ್ ತಯಾರಿಕೆಯ ಪ್ರಥಮ ಘಟಕ ಸಿದ್ಧವಾಗಲಿದೆ ಎಂದು ವಿವರಿಸಿದೆ.
ಈಗಾಗಲೇ ಗೂಗಲ್ ಭಾರತದಲ್ಲಿ ಪಿಕ್ಸೆಲ್ 8, ಪಿಕ್ಸೆಲ್ 8 ಪ್ರೊ, ಪಿಕ್ಸೆಲ್ ವಾಚ್ ಗಳನ್ನು ಬಿಡುಗಡೆ ಮಾಡಿತ್ತು. ಗೂಗಲ್ ಪಿಕ್ಸೆಲ್ ಹ್ಯಾಂಡ್ ಸೆಟ್ ಕಸ್ಟಮ್ ಗೂಗಲ್ ಟೆನ್ಸರ್ ಜಿ 3 ಚಿಪ್ ಮತ್ತು ಟೈಟಾನ್ ಎಂ2 ಸೆಕ್ಯುರಿಟಿ ಚಿಪ್ ಚಾಲಿತವಾಗಿದೆ. ಈ ಫೋನ್ ಡ್ಯುಯಲ್ Rear ಕ್ಯಾಮರಾ ಸೆಟ್ ಪ್ ಹೊಂದಿದ್ದು, ಬ್ಯಾಟರಿ ಸೇವ್ ಮೋಡ್ ನೊಂದಿಗೆ 72 ಗಂಟೆಗಳ ಬ್ಯಾಟರಿ ಅವಧಿ ನೀಡಲಿದೆ ಎಂದು ಕಂಪನಿ ತಿಳಿಸಿದೆ.
ತನ್ನ ಮೊದಲ ಪಿಕ್ಸೆಲ್ ಬ್ರಾಂಡ್ ಸ್ಮಾರ್ಟ್ ಫೋನ್ ಬಿಡುಗಡೆಯಾದ ಏಳು ವರ್ಷಗಳ ನಂತರ, ಕಂಪನಿಯು ಗೂಗಲ್ ಫಾರ್ ಇಂಡಿಯಾ 2023ರ ಕಾರ್ಯಕ್ರಮದಲ್ಲಿ ಗೂಗಲ್ ನ ಸ್ಮಾರ್ಟ್ ಫೋನ್ ಗಳನ್ನು ಭಾರತದಲ್ಲಿಯೂ ತಯಾರಿಸುವುದಾಗಿ ಘೋಷಿಸಿತ್ತು.
ಮುಂದಿನ ವರ್ಷ ಭಾರತದಲ್ಲಿಯೇ ಪಿಕ್ಸೆಲ್ 8 ಉತ್ಪಾದನೆ ಆರಂಭಗೊಳ್ಳಲಿದೆ. ಕಂಪನಿಯಲ್ಲಿ ಸ್ಥಳೀಯ ಹಾಗೂ ವಿದೇಶಿ ತಯಾರಿಕರು ಇರಲಿದ್ದಾರೆ ಎಂದು ಗೂಗಲ್ ತಿಳಿಸಿದೆ.