Advertisement

Panaji: ಹಳಿ ತಪ್ಪಿದ ಗೂಡ್ಸ್ ರೈಲು… ಹಲವು ರೈಲುಗಳ ಮಾರ್ಗ ಬದಲಾವಣೆ

04:43 PM Aug 09, 2024 | Team Udayavani |

ಪಣಜಿ: ಸೌತ್ ವೆಸ್ಟರ್ನ್ ರೈಲ್ವೇ ವಿಭಾಗದ ಲೋಂಡಾ-ವಾಸ್ಕೋ ರೈಲು ಮಾರ್ಗದ ಸೋನಾವ್ಲಿ ಮತ್ತು ದೂಧ್‍ಸಾಗರ್ ನಡುವಿನ ಸುರಂಗ ಸಂಖ್ಯೆ 15 ರ ಸಮೀಪ ಶುಕ್ರವಾರ ಬೆಳಗ್ಗೆ 10.30 ರ ಸುಮಾರಿಗೆ ಗೂಡ್ಸ್ ರೈಲು ಹಳಿತಪ್ಪಿತು. ಇದರಿಂದಾಗಿ ಈ ರೈಲು ಮಾರ್ಗವನ್ನು ರೈಲು ಸಂಚಾರಕ್ಕೆ ಬಂದ್ ಮಾಡಲಾಗಿದೆ. ಅನೇಕ ರೈಲು ಪ್ರಯಾಣಗಳನ್ನು ರದ್ದುಗೊಳಿಸಲಾಗಿದೆ ಮತ್ತು ಕೆಲವು ಮಾರ್ಗಗಳನ್ನು ಬದಲಾಯಿಸಲಾಗಿದೆ.

Advertisement

ಬೆಳಗ್ಗೆ ಕಲ್ಲಿದ್ದಲು ಹೊತ್ತ ಸರಕು ಸಾಗಣೆ ರೈಲು ಕರ್ನಾಟಕದ ಕಡೆಗೆ ಹೊರಟಿತ್ತು. ಈ ಬಾರಿ ಬೆಳಗ್ಗೆ 10.30ರ ಸುಮಾರಿಗೆ ದೂಧ್‍ಸಾಗರ್-ಸೋನಾವಲಿಮ್ ನಡುವಿನ ಸುರಂಗ ಸಂಖ್ಯೆ 15 ರ ಬಳಿ ಹಳಿತಪ್ಪಿತು. 17 ಬೋಗಿಗಳು ಹಳಿ ತಪ್ಪಿದ್ದು, ಒಂದು ಕೋಚ್ ಕಣಿವೆಗೆ ಬಿದ್ದಿದೆ ಎಂದು ವರದಿಯಾಗಿದೆ. ಹೀಗಾಗಿ ಕೂಡಲೇ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಈ ಅವಘಡದಿಂದ ರೈಲ್ವೆ ಹಳಿ ಸಂಪೂರ್ಣ ಹಾಳಾಗಿದ್ದು, ದುರಸ್ತಿಗೆ ಕಾಲಾವಕಾಶ ಬೇಕು. ಈ ಮಾರ್ಗದಲ್ಲಿ ಸಂಚರಿಸುವ ವಾಸ್ಕೋಡಿಗಾಮಾ -ತಿರುಪತಿ-ಹೈದರಾಬಾದ್ ವೀಕ್ಲಿ ಎಕ್ಸ್‍ಪ್ರೆಸ್ ಅನ್ನು ಮಡಗಾವ್-ಕಾರವಾರ-ಪಡೀಲ್ ಸುಬ್ರಹ್ಮಣ್ಯಂ ಮಾರ್ಗವಾಗಿ ಬದಲಾಯಿಸಲಾಗಿದೆ. ವಾಸ್ಕೋ ಡಿ ಗಾಮಾ – ಹಜರತ್ ನಿಜಾಮುದ್ದೀನ್ ಎಕ್ಸ್‍ಪ್ರೆಸ್ ರೋಹಾ, ಪನ್ವೆಲ್ ಮಾರ್ಗವಾಗಿ ಚಲಿಸುತ್ತದೆ. ಇಂದು ಓಡುವ ಯಶವಂತಪುರ-ವಾಸ್ಕೋ ರೈಲನ್ನು ರದ್ದುಗೊಳಿಸಲಾಗಿದೆ.

ಇದನ್ನೂ ಓದಿ: SC; ಹಿಜಾಬ್‌ ಬ್ಯಾನ್‌ ಮಾಡುವ ನೀವು ತಿಲಕವನ್ನೂ ನಿಷೇಧ ಮಾಡುತ್ತೀರಾ.?: ಸುಪ್ರೀಂ ಕೋರ್ಟ್

Advertisement

Udayavani is now on Telegram. Click here to join our channel and stay updated with the latest news.

Next