ಮಧ್ಯಪ್ರದೇಶ: ಸರಕು ಸಾಗಣೆ ಮಾಡುತ್ತಿದ್ದ ಸರಕು ಸಾಗಾಟ ರೈಲಿನ ಎರಡು ವ್ಯಾಗನ್ ಗಳು ಹಳಿ ತಪ್ಪಿರುವ ಘಟನೆ ಮಧ್ಯಪ್ರದೇಶದ ಜಬಾಲ್ಪುರ್ ಜಿಲ್ಲೆಯಲ್ಲಿ ಮಂಗಳವಾರ (ಜೂನ್ 07) ರಾತ್ರಿ ನಡೆದಿದ್ದು, ಭಾರೀ ದುರಂತ ತಪ್ಪಿದಂತಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:WTC Final: ಆಸ್ಟ್ರೇಲಿಯಾ ವಿರುದ್ಧ ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ
ಈ ಘಟನೆ ಜಬಾಲ್ಪುರ್ ಜಿಲ್ಲೆಯ ಶಹಾಪುರ್ ಭಿಟೋನಿ ನಿಲ್ದಾಣದ ಭಾರತ್ ಪೆಟ್ರೋಲಿಯಮ್ ಘಟಕದ ಬಳಿ ನಡೆದಿರುವುದಾಗಿ ವರದಿ ತಿಳಿಸಿದೆ.
ಕಳೆದ ರಾತ್ರಿ ಎಲ್ ಪಿಜಿಯನ್ನು ಇಳಿಸುತ್ತಿದ್ದ ಸಂದರ್ಭದಲ್ಲಿ ಎರಡು ವ್ಯಾಗನ್ ಹಳಿ ತಪ್ಪಿತ್ತು. ಆದರೆ ಇದರಿಂದಾಗಿ ಯಾವುದೇ ರೈಲು ಸಂಚಾರಕ್ಕೆ ತೊಂದರೆಯಾಗಿಲ್ಲ ಎಂದು ಸೆಂಟ್ರಲ್ ರೈಲ್ವೆ ಸಿಪಿಆರ್ ಒ ತಿಳಿಸಿದೆ.
Related Articles
ರೈಲ್ವೆ ಹಳಿಯನ್ನು ಪುನರ್ ಸ್ಥಾಪಿಸುವ ಕೆಲಸ ಸಾಗಿದ್ದು, ಶೀಘ್ರದಲ್ಲಿ ಕೆಲಸವನ್ನು ಪೂರ್ಣಗೊಳಿಸಲಾಗುವುದು. ಜೂನ್ 2ರಂದು ಒಡಿಶಾದ ಬಾಲ್ ಸೋರ್ ನಲ್ಲಿ ಸಂಭವಿಸಿದ್ದ ತ್ರಿವಳಿ ರೈಲು ಅಪಘಾತದ ಪ್ರಕರಣದಲ್ಲಿ ಕನಿಷ್ಠ 280ಕ್ಕೂ ಅಧಿಕ ಮಂದಿ ಪ್ರಯಾಣಿಕರು ಕೊನೆಯುಸಿರೆಳೆದಿದ್ದು, 1000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದ ಭೀಕರ ಘಟನೆ ನಡೆದಿತ್ತು.