Advertisement

UV Fusion: ದೃಷ್ಟಿಕೋನದಲ್ಲಿ ಒಳ್ಳೆಯತನ…!

01:25 PM Dec 01, 2023 | Team Udayavani |

ಪ್ರತಿಯೊಬ್ಬರಲ್ಲೂ ಒಬ್ಬ ಹೀರೋ ಇರ್ತಾನೆ, ಆದ್ರೆ ಅದು ನಮಗೆ ತಿಳಿಯೋದಿಲ್ಲ… ಈ ಮಾತು ಇತ್ತೀಚಿನ ದಿನಗಳಲ್ಲಂತೂ ವಾಟ್ಸ್‌ಆ್ಯಪ್‌ ಸ್ಟೇಟಸ್‌ , ಫೇಸ್‌ಬುಕ್‌ , ಇನ್ಸ್ಟಾಗ್ರಾಂ ಹೀಗೆ ಸಿಕ್ಕ ಸಿಕ್ಕ ಕಡೇಲಿ ಬಿತ್ತಿಪತ್ರ ಅಂಟಿಸಿದ ಹಾಗೆ ಕೇಳ್ಳೋಕೆ-ನೋಡೋಕೆ ಸಿಗುತ್ತೆ.

Advertisement

ಪ್ರತಿಯೊಬ್ಬರಲ್ಲೂ ಒಬ್ಬ ಹೀರೋ ಇರ್ತಾನೆ ಅನ್ನೋ ವಿಚಾರ ಒಪ್ಪಿಕೊಳ್ಳೋಣ, ನಾವು ಒಪ್ಪಿಕೊಳ್ತೀವಿ. ಯಾಕಂದ್ರೆ ಹಾಗಂದ ಕೂಡಲೇ ನಮ್ಮ ಮನಸ್ಸಲ್ಲಿ ಮೊದಲು ಬರೋದು ನಮ್ಮದೇ ಚಿತ್ರ! ಎಲ್ಲರಿಗೂ ಅವರವರು ಒಳ್ಳೆಯವರು ಅಂತಾನೇ ಅನ್ಸುತ್ತೆ, ಹೀರೋ ಅಂತಾನೇ ಅಂದ್ಕೋತೀವಿ! ನಾನೂ ಇದರಿಂದ ಹೊರತಲ್ಲ. ಅದೇನೋ ಸರಿ. ನಮ್ಮನ್ನ ನಾವು ಹೀರೋ ಅಂದೊRಳ್ಳೋ ನಮಗೆ, ಬೇರೆಯವರಲ್ಲಿ ಯಾಕೆ ದೋಷ ಕಾಣಿಸುತ್ತೆ?!

ಒಂದು ಉದಾಹರಣೆ. ಮನೇಲಿ ಎಲ್ಲರೂ ಕೂತ್ಕೊಂಡು ಒಂದ್‌ ಟಿವಿ ಸೀರಿಯಲ್‌ ನೋಡ್ತಾ ಇದ್ದೀವಿ ಅಂತ ಆನ್ಕೊಳ್ಳಿ. ಸೀರಿಯಲ್‌ ನಲ್ಲಿ ಒಬ್ಬಳು ಲೇಡಿ ವಿಲನ್‌ ಇದ್ದೇ ಇರ್ತಾಳೆ ತಾನೇ? ಅವಳು ಯಾವಾಗ್ಲೂ ಸೀರಿಯಲ್‌ ಹೀರೋಯಿನೆY ಏನಾದ್ರು ತೊಂದ್ರೆ ಕೊಡ್ತಾನೇ ಇರ್ತಾಳೆ. ಅದನ್ನ ನೋಡೋವಾಗ ಈ ವಿಲನ್‌ ಮೇಲೆ ನಮ್ಗೆ ಇನ್ನಿಲ್ಲದ ಸಿಟ್ಟು ಬರುತ್ತೆ. ಅದು ರೀಲ್‌ ಅಂತ ಗೊತ್ತಿದ್ರೂ ಅವಳನ್ನ ಬೈಕೊಳೆ¤àವೆ. ಆದ್ರೆ ಅದೇ ವಿಲನ್‌ ತರಹ ನಾವು ಆಗಿಬೋìದು ನಾವೂ ಕೆಟ್ಟ ಕೆಲಸ ಮಾಡ್ತಿಬೋìದು ಅಂತ ಯಾರೂ ತಲೆಕೆಡಿಸಿಕೊಳ್ಳಲ್ಲ!

ಒಂದು ವೇಳೆ ನಾವೂ ಅದೇ ಕೆಟ್ಟ ಕೆಲಸ ಮಾಡ್ತಿದ್ರೂ, ಬೇರೆಯವರಿಗೆ ವಿನಾಕಾರಣ ತೊಂದರೆ ಕೊಡ್ತಿದ್ರೂ ಅದನ್ನ ಒಪ್ಪಿಕೊಳ್ಳೋಕೆ ನಮ್ಮ ಮನಸ್ಸು ತಯಾರಿರೋದಿಲ್ಲ. ನಮ್ಮ ದೃಷ್ಟಿಕೋನದಲ್ಲಿ ನಮ್ಗೆ ನಾವು ಒಳ್ಳೆಯವರ ತರಾನೇ ಕಾಣಿಸ್ತೀವಿ! ಆದ್ರೆ ಒಮ್ಮೆ ದೃಷ್ಟಿಕೋನ ಬದಲಾಯಿಸಿ ನೋಡಿ, ಆವಾಗ ಬೇರೆಯವರ ಭಾವನೆಗಳು ಕೂಡ ಅರ್ಥವಾಗುತ್ತವೆ. ಆ ಒಳ್ಳೆಯವರ ಕೆಟ್ಟತನ ಅಥವಾ ಕೆಟ್ಟವರ ಒಳ್ಳೆಯತನ ಅರ್ಥವಾಗುತ್ತೆ.

ದಿನನಿತ್ಯ ನಮ್ಮ ಜೀವನದಲ್ಲಿ ಇಂತಹ ಅನೇಕ ಘಟನೆಗಳಾಗುತ್ತವೆ. ಒಬ್ಬ ವ್ಯಕ್ತಿಯ ಬಗ್ಗೆ, ಅವರು ಮಾಡಿದ್ದಾರೆ ಎನ್ನಲಾದ ಕೆಟ್ಟ ಕೆಲಸದ ಬಗ್ಗೆ ಯಾರೋ ಒಂದಿಬ್ಬರು ಕೆಟ್ಟದಾಗಿ ಮಾತನಾಡಿದರೆ ನಾವೂ ಅವರ ಜತೆ ಸೇರಿಕೊಂಡುಬಿಡ್ತೀವಿ. ಏನೇನೋ ಕಲ್ಪನೆಗಳನ್ನು ಮಾಡಿಕೊಂಡು ಹಿಂದುಮುಂದು ಯೋಚಿಸದೆ ಆ ವ್ಯಕ್ತಿಯನ್ನು ದೂಷಿಸುವೆವು. ಆ ವ್ಯಕ್ತಿಯ ಸ್ಥಾನದಲ್ಲಿ ನಿಂತು ಯೋಚನೆಯನ್ನೇ ಮಾಡೋದಿಲ್ಲ. ಅವನನ್ನು ಅರ್ಥಮಾಡಿಕೊಳ್ಳೋ ಗೋಜಿಗೇ ಹೋಗಲ್ಲ. ಅದಿರಲಿ, ಅವನ ಬಗ್ಗೆ ಮಾತನಾಡೋ ನೈತಿಕತೆ ನಮಗಿದೆಯಾ ಅಂತಾನೂ ಯೋಚಿಸೋದಿಲ್ಲ!

Advertisement

ಹಾಗಂತ ಯಾರೂ ತಪ್ಪೇ ಮಾಡೋದಿಲ್ಲ ಅಂತ ಅಲ್ಲ! ಆದರೆ ತುಂಬಾ ಸಲ ತಪ್ಪಿರೋದು ಪರಿಸ್ಥಿತಿಯಲ್ಲಿ…! ಯಾವ ಸಮಯದಲ್ಲಿ ಯಾವ ನಿರ್ಧಾರ ತೆಗೀಬೇಕು ಅನ್ನೋ ಗೊಂದಲದಲ್ಲಿ…! ಅಷ್ಟಕ್ಕೂ ಅವ್ರು ನಮ್ಮ ಹಾಗೇನೇ ಇಬೇìಕು ಅಂತ ನಾವೂ ಯಾಕೆ  ಅನ್ಕೋಳ್ಬೇಕು ಹೇಳಿ…? ಪ್ರತಿಯೊಬ್ಬರ ಮನಸ್ಥಿತಿ ಕೂಡ ಒಂದೇ ರೀತಿ ಇರೋದಿಲ್ವಲ್ಲ ಅವರೂ ನಮ್ಮ ಹಾಗೇ ಇಬೇìಕು ಅಂತ ಹೇಳ್ಳೋಕು ನಮಗೆ ಅಧಿಕಾರ ಇಲ್ಲ. ನಾವು ಎಲ್ಲರ ದೃಷ್ಟಿಕೋನದಲ್ಲಿ ನಿಂತು ಯೋಚನೆ ಮಾಡಿದಾಗ ಮಾತ್ರ ನಾವು ಬದುಕಿನಲ್ಲಿ ಪರಿಪೂರ್ಣತೆಯನ್ನು ಕಂಡುಕೊಳ್ಳಬಹುದು. ನಮ್ಮ ದೃಷ್ಟಿಕೋನ ಚೆನ್ನಾಗಿದ್ದರೆ ಇತರರ ಒಳ್ಳೆಯತನ ನಮಗೆ ಕಾಣುತ್ತೆ. ಅವರೂ ಹೀರೋಗಳಾಗಿ ಕಾಣ್ತಾರೆ. ನಮ್ಮ ಜೀವನದ ನಿಜವಾದ ಹೀರೋ ಆಚೆ ಬರ್ತಾನೇ.

- ಪ್ರೇರಣಾ ಸುವರ್ಣ

ವಿ.ವಿ., ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next