ಕಾಸರಗೋಡು: ಕಾಸರಗೋಡು ಕ್ಷೇತ್ರದಲ್ಲಿ ಶೇ. 79.02ರಷ್ಟು ಪ್ರಮಾಣದ ಮತದಾನವಾಗಿದೆ. 2014ರ ಚುನಾವಣೆಯಲ್ಲಿ ಇಲ್ಲಿ ಶೇ. 78.49 ಮತದಾನವಾಗಿತ್ತು.
ಕೆಲವು ಕಡೆ ಇವಿಎಂ ದೋಷ, ಅಹಿತಕರ ಘಟನೆಗಳನ್ನು ಬಿಟ್ಟರೆ ಮತದಾನ ಬಹುತೇಕ ಶಾಂತಿಯುತ ವಾಗಿತ್ತು.
ಬಳ್ಳೂರು ಓಟೆಪಡು³ ನಿವಾಸಿ ಡಾ| ಆಶಾ ದಿಬ್ಬಣವನ್ನು ಸ್ವಲ್ಪ ಹೊತ್ತು ನಿಲ್ಲಿಸಿ ವಿದ್ಯಾರಣ್ಯ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಸಿಪಿಎಂನ ಭದ್ರಕೋಟೆಯಾಗಿರುವ ಉದುಮ ಬೇತೂರುಪಾರದಲ್ಲಿ 191 ಮತ್ತು 192 ನೇ ಬೂತ್‌ಗಳಲ್ಲಿ ಯುಡಿಎಫ್ ಬೂತ್ ಏಜೆಂಟರಿಗೆ ಸಿಪಿಎಂ ಕಾರ್ಯಕರ್ತರು ಕುಳಿತು ಕೊಳ್ಳಲು ಬಿಡಲಿಲ್ಲ ಎಂದು ಆರೋಪಿಸಲಾಗಿದೆ.
ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಟ್ರಾನ್ಸ್ ಜೆಂಡರ್ ಇಷಾ ಕಿಶೋರ್ ಕಾಂಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.