ಮಾನವರು ನಾವೇ ಬುದ್ದಿವಂತರು ಎಂದು ತಿಳಿದಿದ್ದಾರೆ. ಆದ್ರೆ ಮಾನವನಿಗಿಂತಲೂ ಕೆಲವು ಬಾರಿ ಪ್ರಾಣಿ-ಪಕ್ಷಿಗಳು ಜಾಣತನವನ್ನು ತೋರಿ ನೋಡುಗರಿಗೆ ಆನಂದ ತರಿಸುತ್ತವೆ. ಇನ್ನು ಕೆಲವೊಂದು ಸಲ ಪ್ರಾಣಿ ಪಕ್ಷಿಗಳ ಟೀಮ್ ವರ್ಕ್ ಕೂಡ ಬೆರಗಾಗುವಂತೆ ಮಾಡುತ್ತದೆ. ತನ್ನ ಗೂಡನ್ನು ನಿರ್ಮಾಣ ಮಾಡಲು ಪಕ್ಷಿಗಳು ಎಷ್ಟು ಜಾಣತನವನ್ನು ಉಪಯೋಗಿಸುತ್ತವೆ ಎಂಬುದನ್ನು ನವೆಲ್ಲರೂ ನೋಡಿದ್ದೇವೆ.
ಎಲ್ಲಿಯೋ ಬಿದ್ದಿರುವ ಗಿಡದ ನಾರುಗಳನ್ನು ತಂದು ಜೋಪಾನವಾಗಿ ಗೂಡು ಕಟ್ಟುತ್ತದೆ. ಇಲ್ಲಿ ಎರಡು ಎರಡು ನೀರುಕೋಳಿಗಳು ಅದೇ ರೀತಿ ತನ್ನ ಗೂಡನ್ನು ನಿರ್ಮಾಣ ಮಾಡಲು ಎಷ್ಟು ನಾಜೂಕಾಗಿ ಟೀಮ್ ವರ್ಕ್ ಮಾಡುತ್ತಿವೆ ಎಂಬುದನ್ನ ಗಮನಿಸಬೇಕು.
ಯಾವಾಗಲೂ ವಿಶೇಷವಾದ ವಿಡಿಯೋಗಳನ್ನು, ಅಪರೂಪದ ಪ್ರಾಣಿ ಪಕ್ಷಿಗಳ ವಿಡಿಯೋಗಳನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡುವ ಭಾರತೀಯ ಅರಣ್ಯ ಅಧಿಕಾರಿ ಸುಸಂತ ನಂದ ನೀರು ಕೋಳಿಗಳ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ನೀರುಕೋಳಿಗಳು ದಡದಲ್ಲಿ ನೀಡಿದ ಕಡ್ಡಿಗಳನ್ನು ಕೊಂಡೊಯ್ದು ನೀರಿನ ಮಧ್ಯೆ ಗೂಡನ್ನು ನಿರ್ಮಿಸುತ್ತಿವೆ. ಆಶ್ಚರ್ಯ ಅಂದ್ರೆ ದಡದಲ್ಲಿ ನಿಂತಿರುವುದು ಮತ್ತೊಂದು ನೀರು ಕೋಳಿಯಲ್ಲ, ಬದಲಾಗಿ ಯಾರೋ ಒಬ್ಬ ವ್ಯಕ್ತಿ ನೀಡಿದ ಕಡ್ಡಿಗಳನ್ನು ಕೊಂಡೊಯ್ಯುವ ನೀರುಕೋಳಿ, ತನ್ನ ಸಹಚರನಿಗೆ ನೀಡಿ ಗೂಡ ನಿರ್ಮಾಣ ಮಾಡಿಕೊಂಡಿವೆ.
ಈ ಅಪರೂಪದ ವಿಡಿಯೋವನ್ನು ಶೇರ್ ಮಾಡಿರುವ ಸುಸಂತ ನಂದ ಟೀಮ್ ವರ್ಕ್(ಗುಂಪು ಕೆಲಸ) ನಂಬಿಕೆಯಿಂದ ಶುರುವಾಗಿದೆ… ಎಂದು ಬರೆದಿದ್ದಾರೆ. ಇದನ್ನು ನೋಡಿದ ಮೇಲೆ ಎಂಥವರಿಗೂ ನಂಬಿಕೆ ಮತ್ತು ಟೀಮ್ ವರ್ಕ್ ನಿಂದ ಏನನನ್ನು ಬೇಕಾದರೂ ಸಾಧಿಸಬಹುದು ಎಂದು ಅನಿಸುತ್ತದೆ.