Advertisement

ಶಿರಾಳ ಕೊಪ್ಪದಲ್ಲಿ ಬಂದ್‌ ಯಶಸ್ವಿ

05:37 PM Sep 29, 2020 | Suhan S |

ಶಿರಾಳಕೊಪ್ಪ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೃಷಿ ವಿಧೇಯಕಗಳ ವಿರುದ್ದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸೋಮವಾರ ಕರೆ ನೀಡಿದ್ದ ಬಂದ್‌ ಪಟ್ಟಣದಲ್ಲಿ ಸಂಪೂರ್ಣ ಯಶಸ್ವಿಯಾಯಿತು.

Advertisement

ಬೆಳಗ್ಗೆಯಿಂದಲೇ ಪಟ್ಟಣದ ಅಂಗಡಿ- ಮುಂಗಟ್ಟುಗಳ ಮಾಲೀಕರು ರೈತರ ಮನವಿ ಮೇರೆಗೆ ಬಾಗಿಲು ಹಾಕಿ ಬಂದ್‌ ಗೆ ಬೆಂಬಲ ವ್ಯಕ್ತಪಡಿಸಿದರು. ಮೆಡಿಕಲ್‌ ಶಾಪ್‌ಗಳು ಎಂದಿನಂತೆ ತೆರೆದಿದ್ದವು. ವಾಹನ ಸಂಚಾರ ಮುಕ್ತವಾಗಿತ್ತು. ಪಟ್ಟಣದ ಎಲ್ಲಾ ಸ್ಥಳಗಳಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು ಪ್ರತಿಭಟನಾಕಾರರು ರಸ್ತೆಗಳಿದು ರಾಜ್ಯಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ ಪಟ್ಟಣದ ಎಲ್ಲಾ ಬೀದಿಗಳಲ್ಲಿ ಪಥ ಸಂಚಲನ ನಡೆಸಿ ಬಸ್‌ ನಿಲ್ದಾಣದ ವೃತ್ತದಲ್ಲಿ ಕುಳಿತು ರೈತ ಗೀತೆಗಳನ್ನು ಹಾಡಿದರು. ಗೌರವಾಧ್ಯಕ್ಷ ಈರಣ್ಣ ಪ್ಯಾಟಿ, ಜಿಲ್ಲಾ ಉಪಾಧ್ಯಕ್ಷ ಪುಟ್ಟನ ಗೌಡ್ರು, ಕಾರ್ಯದರ್ಶಿ ಕೆ.ಜಿ. ಕೊಟ್ರೇಶ್‌, ಟೌನ್‌ ಅಧ್ಯಕ್ಷ ನವೀದ್‌, ಪ್ರದೀಪ್‌, ಇಫ್ತಿಕಾರ್‌, ಬಸವಣ್ಯಪ್ಪ, ತನ್ವೀರ್‌, ನಾಗರಾಜ ಇನ್ನಿತರರು ಇದ್ದರು.

ಹಸಿರು ಟವೆಲ್‌ ಹಾಕಿ ಬನ್ನಿ: ಬೆಳಗ್ಗೆ ರೈತರು ಪ್ರಟಿಭಟನೆ ಮಾಡುತ್ತಿರುವಾಗ ಕಾಂಗ್ರೆಸ್‌ ಮುಖಂಡರು ರೈತರ ಜೊತೆಗೂಡಿ ಪ್ರತಿಭಟಿಸಲು ಬಂದಾಗ ರೈತ ಮುಖಂಡರು ಬರುವುದಾದರೆ ಪಕ್ಷದ ಚಿನ್ಹೆ ಮತ್ತು ಬಾವುಟ ಬಿಟ್ಟು ಹಸಿರು ಟವೆಲ್‌ ಧರಿಸಿ ರೈತರಾಗಿ ಬನ್ನಿ ಎಂದು ಹೇಳಿದಾಗ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು ಪ್ರತ್ಯೇಕವಾಗಿ ಬಸ್‌ ನಿಲ್ದಾಣದಲ್ಲಿ ಪ್ರತಿಭಟಿಸಿ ಬಂದ್‌ಗೆ ಬೆಂಬಲ ಸೂಚಿಸಿ ನಾಡ ಕಚೇರಿಯಲ್ಲಿ ಮನವಿ ಸಲ್ಲಿಸಿದರು.

 

ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಬೆಂಬಲ :

Advertisement

ಶಿವಮೊಗ್ಗ: ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿ ಸಿ ರಾಜ್ಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯವರು ಜಿಲ್ಲಾ ಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿಯಾಗಿ ಕಾಯ್ದೆಗಳಿಗೆ ತಿದ್ದುಪಡಿ ಮಾಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್‌.ಎಲ್‌. ನಿಖೀಲ್‌,ಪ್ರಮುಖರಾದ ನರಸಿಂಹ ಹಸೂಡಿ, ಮಧು ಕುಮಾರ್‌ ಜಿ.ಕೆ. ರಜಾಕ್‌ ಸಾಬ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next