Advertisement
ರಾಜ್ಯದಲ್ಲಿ ನೀರನ್ನು ಉಳಿಸುವ ಉದ್ದೇಶದಿಂದ 2019ನೇ ವರ್ಷವನ್ನು ಸರಕಾರ ಜಲವರ್ಷ ಎಂದು ಘೋಷಿಸಿಕೊಂಡಿತ್ತು. ಹನಿ ನೀರನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡುತ್ತೇವೆ ಎಂಬುವುದು ಜಲಾಮೃತ ಕಾರ್ಯಕ್ರಮದ ಪ್ರತಿಜ್ಞಾ ವಿಧಿಯಾಗಿದೆ. ಜಿಲ್ಲೆ, ತಾಲೂಕು, ಗ್ರಾಮ ಮಟ್ಟದಲ್ಲಿ ಈ ಕಾರ್ಯಕ್ರಮ ಅನುಷ್ಠಾನವಾಗಲಿದೆ. ಈ ಯೋಜನೆಗಾಗಿ ರಾಜ್ಯ ಸರಕಾರದಿಂದ 500 ಕೋ.ರೂ.ಗಳನ್ನು ಮೀಸಲಿಟ್ಟಿದೆ.
Related Articles
Advertisement
ರಾಜ್ಯದಲ್ಲಿ ಬರಸ್ಥಿತಿಯನ್ನು ಎದುರಿಸಲು 2019-20ನೇ ಸಾಲಿನ ಬಜೆಟ್‌ನಲ್ಲಿ 2019ನೇ ವರ್ಷವನ್ನು ಜಲಾಮೃತ ವರ್ಷ ಎಂದು ಘೋಷಿಸಿಕೊಂಡಿತ್ತು. ಜಲಸಂರಕ್ಷಣೆ, ಜಲಸಾಕ್ಷರತೆ, ಜಲಮೂಲಗಳ ಪುನಶ್ಚೇತನ ಮತ್ತು ಹಸುರೀಕರಣವನ್ನು ಕೇಂದ್ರವಾಗಿಟ್ಟುಕೊಂಡು ಈ ಯೋಜನೆಯನ್ನು ಆರಂಭಿಸಲಾಗಿದೆ.
ಉತ್ತಮ ಸ್ಪಂದನೆ
ಜಿಲ್ಲೆಯಲ್ಲಿ ಜಲಾಮೃತ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಇದನ್ನು ಆಲಿಸಿ ಅನುಷ್ಠಾನದ ಬಗ್ಗೆಯೂ ಮಾಹಿತಿ ಕೇಳಿ ಪಡೆದುಕೊಳ್ಳುತ್ತಿದ್ದಾರೆ. ಜೂನ್ 11ರಿಂದ ಆರಂಭಗೊಂಡಿದ್ದು, ಬ್ರಹ್ಮಾವರ, ಕೋಟೇಶ್ವರ, ಬಸ್ರೂರು, ಶಿರಿಯಾರ, ಯಡ್ತಾಡಿ, ಸ್ಯಾಬ್ರಕಟ್ಟೆ, ಹಾಲಾಡಿ, ಸಿದ್ದಾಪುರ, ಶಂಕರನಾರಾಯಣ, ಹಳ್ಲಿಹೊಳೆ, ಬಸ್ರೂರು, ನೆಲ್ಲಿಕಟ್ಟೆ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮ ಪೂರ್ಣಗೊಂಡಿದೆ. ವಾಹನ ಸಂಚರಿಸಿದ ಜಾಗದಲ್ಲೆಲ್ಲ ಜನರು ಆಸಕ್ತಿಯಿಂದ ಬಂದು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
-ಜೋಸೆಫ್ ಜಿ.ಎಂ.ರೆಬೆಲ್ಲೋ,ತಂಡದ ಸದಸ್ಯ
ನೀರಿನ ಸಂರಕ್ಷಣೆಗೆ ಆದ್ಯತೆ
ನೀರಿನ ಸಂರಕ್ಷಣೆಗೆ ಆದ್ಯತೆ ನೀಡುವ ಯೋಜನೆ ಇದಾಗಿದೆ. ಜಿಲ್ಲೆಯ ಪ್ರತೀ ಗ್ರಾ.ಪಂ.ಗಳಲ್ಲೂ 500 ಗಿಡಗಳನ್ನು ನೆಡುವ ಪ್ರಕ್ರಿಯೆ ಆರಂಭಗೊಂಡಿದೆ. ನರೇಗಾ ಸಹಿತ ಇನ್ನಿತರ ಯೋಜನೆಗಳ ಮೂಲಕ ಕೆರೆಗಳ ಹೂಳೆತ್ತುವಿಕೆ ಸಹಿತ ಇತರ ಪ್ರಕ್ರಿಯೆಗಳು ನಿರಂತರ ನಡೆಯಲಿವೆ.
-ಸಿಂಧೂ ಬಿ. ರೂಪೇಶ್,ಜಿ.ಪಂ. ಸಿಇಒ
ನೀರಿನ ಮಿತ ಬಳಕೆಯ ಅರಿವು
ವೈಜ್ಞಾನಿಕವಾಗಿ ನೀರು ಸಂಗ್ರಹಣೆ ಮಾಡಲು ಜಲಮೂಲಗಳ ನಿರ್ಮಾಣ ಮಾಡುವುದು ನೀರಿನ ಲಭ್ಯತೆ ಮತ್ತು ಮಿತಬಳಕೆ ಬಗ್ಗೆ ಅರಿವು ಮೂಡಿಸಲಿದ್ದಾರೆ. ಫಲಾನುಭವಿಗಳ ಸ್ವಂತ ಮನೆಯಲ್ಲಿ ಮಳೆ ಕೊಯ್ಲು ಅಳವಡಿಸುವುದು ಮುಂತಾದ ಕಾರ್ಯಕ್ರಮಗಳು ಇದರ ವ್ಯಾಪ್ತಿಗೆ ಬರುತ್ತದೆ.
ಕೆರೆಗಳ ಪುನರುಜ್ಜೀವನ
ನಿಷ್ಕ್ರಿಯವಾಗಿರುವ ಜಲಾಶಯಗಳು, ನದಿಗಳು, ಕೆರೆಗಳು, ಕಾಲುವೆಗಳನ್ನು ಗುರುತಿಸಿ ಅದಕ್ಕೆ ಪುನರುಜ್ಜೀವನ ನೀಡುವಂತಹ ಕೆಲಸದ ಮಾಹಿತಿ ನೀಡುವ ಕೆಲಸವೂ ಈ ತಂಡದಿಂದ ಆಗಲಿದೆ.
ಹಸುರೀಕರಣ
– ಪುನೀತ್ ಸಾಲ್ಯಾನ್ ಅಂತರ್ಜಲ ಮಟ್ಟ ಹಾಗೂ ಮಳೆಯ ಪ್ರಮಾಣವನ್ನು ಹೆಚ್ಚಿಸುವುವ ಸಲುವಾಗಿ ಪ್ರತೀ ಜಿಲ್ಲೆಯಲ್ಲಿ 50 ಲಕ್ಷ ಸಸಿಗಳನ್ನು ಸಮುದಾಯದ ಸಹಭಾಗಿತ್ವದಲ್ಲಿ ಅರಣ್ಯೀಕರಣ ಮಾಡುವ ಉದ್ದೇಶವನ್ನೂ ಹೊಂದಲಾಗಿದೆ. ಕೆಲಕಾಮಗಾರಿಗಳು ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಕೂಡ ನಡೆಯಲಿದೆ.