Advertisement

ಭಾರತ ಬಂದ್ ಗೆ ಗಂಗಾವತಿ ನಗರದಲ್ಲಿ ಉತ್ತಮ ಪ್ರತಿಕ್ರಿಯೆ: ಅಂಗಡಿ ಮುಂಗಟ್ಟುಗಳು ಬಂದ್

03:46 PM Dec 08, 2020 | keerthan |

ಗಂಗಾವತಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದ ಹಲವು ಸಂಘಟನೆಗಳು ಕರೆ ನೀಡಿದ್ದ ‘ಭಾರತ ಬಂದ್’ ಗೆ ಗಂಗಾವತಿ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

Advertisement

ಬೆಳಗಿನಿಂದಲೇ ನಗರದ ಬಹುತೇಕ ಅಂಗಡಿ ಮುಂಗಟ್ಟುಗಳು ಹಾಗೂ ದಲಾಲಿ ಅಂಗಡಿಗಳನ್ನು ಮಾಲೀಕರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ದರು. ವಕೀಲರ ಸಂಘದ ಪದಾಧಿಕಾರಿಗಳು ಕಲಾಪ ಬಹಿಷ್ಕಾರ ಮಾಡಿ ಬಂದ್ ಗೆ ಬೆಂಬಲಿಸಿದರು.

ಸಿಐಟಿಯು, ಅಂಗನವಾಡಿ, ಬಿಸಿಯೂಟ ಯೋಜನೆ ನೌಕರರರು, ರೈತ ಸಂಘ, ಕನ್ನಡ ದಲಿತರ ಪರ ಸಂಘಟನೆ ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಚನ್ನಬಸವಸ್ವಾಮಿ ವೃತ್ತದಲ್ಲಿ ಹಾಗೂ ಎಐಟಿಸಿಯು ನೇತೃತ್ವದಲ್ಲಿ ಹಮಾಲಿ, ಅಂಗನವಾಡಿ, ಉದ್ಯೋಗ ಖಾತ್ರಿ ಕೂಲಿಕಾರರು ಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಇದನ್ನೂ ಓದಿ:ತಾರಾಲಯ ಕಾಮಗಾರಿಗೆ ಹಿಡಿದಿದೆ ಗ್ರಹಣ! ಅನೈತಿಕ ಚಟುವಟಿಕೆ ತಾಣವಾಗಿದೆ ಜ್ಞಾನಾರ್ಜನೆ ಕಟ್ಟಡ

Advertisement

ಮಾಜಿ ಸಂಸದ ಶಿವರಾಮಗೌಡ, ನಿರುಪಾದಿ ಬೆಣಕಲ್, ವಿರೇಶಪ್ಪ, ಶರಣೇಗೌಡ ಕೇಸರಟ್ಟಿ, ಬಸವರಾಜ ಸ್ವಾಮಿ ಮಳಿಮಠ, ವಿಶ್ವನಾಥ ಕೇಸರಟ್ಟಿ, ಶೈಲಜಾ ಹಿರೇಮಠ, ವಲಿಸಾಬ, ಅಮರೇಶ ಕಡಗದ, ಶ್ರೀನಿವಾಸ್, ಬವರಾಜ, ಲಕ್ಷ್ಮೀದೇವಿ ಸೋನಾರ್, ಗೋತಾಜೋಶಿ, ಹುಸೆನಪ್ಪ ಹಂಚಿನಾಳ, ಜಿಲಾನಿ ಪಾಷಾ, ಎ.ಎಲ್.ತಿಮ್ಮಣ್ಣ, ಎ.ಹುಲುಗಪ್ಪ ಸೇರಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next