Advertisement

Rains; ಸುಳ್ಯ, ಕಡಬದಲ್ಲಿ ಉತ್ತಮ ಮಳೆ

12:58 AM Sep 14, 2023 | Team Udayavani |

ಸುಳ್ಯ/ ಮಂಗಳೂರು/ಉಡುಪಿ/ಕಾಸರಗೋಡು: ಕರಾವಳಿಯ ಕೆಲವು ಕಡೆಗಳಲ್ಲಿ ಬುಧವಾರ ಉತ್ತಮ ಮಳೆಯಾಗಿದೆ. ಮಂಗಳೂರು, ಉಡುಪಿ, ಮಣಿಪಾಲ, ಕಾಸರಗೋಡು ಸೇರಿದಂತೆ ಮೂರೂ ಜಿಲ್ಲೆಗಳಲ್ಲಿ ಮಳೆ ಸುರಿದಿದೆ.

Advertisement

ಸುಳ್ಯ ಹಾಗೂ ಕಡಬ ತಾಲೂಕಿನಲ್ಲಿ ಬುಧವಾರ ಬೆಳಗ್ಗಿನಿಂದಲೇ ಮೋಡ ಕವಿದ ವಾತವರಣವಿದ್ದು, ಮಧ್ಯಾಹ್ನ ಹಾಗೂ ಸಂಜೆ ವೇಳೆ ಸುಮಾರು ಅರ್ಧ ಗಂಟೆಗೂ ಅಧಿಕ ಸಮಯ ಧಾರಾಕಾರ ಮಳೆಯಾಗಿದೆ.

ಸುಳ್ಯ ತಾಲೂಕಿನ ಸುಳ್ಯ ನಗರ, ಜಾಲ್ಸೂರು, ಕನಕಮಜಲು, ಮಂಡಕೋಲು, ಅರಂತೋಡು, ಸಂಪಾಜೆ, ಬೆಳ್ಳಾರೆ, ಪಂಜ, ಗುತ್ತಿಗಾರು, ಕೊಲ್ಲಮೊಗ್ರು, ಕಲ್ಮಡ್ಕ, ಕಡಬ ತಾಲೂಕಿನ ಸುಬ್ರಹ್ಮಣ್ಯ, ಐನೆಕಿದು, ಎಡಮಂಗಲ, ಬಳ್ಪ, ಬಿಳಿನೆಲೆ, ಕೊಂಬಾರು, ಕಡಬ, ಕಲ್ಲುಗುಡ್ಡೆ ಸೇರಿದಂತೆ ವಿವಿಧೆಡೆ ಸಾಧರಣ ಮಳೆಯಾಗಿದೆ. ಸಣ್ಣ ಪುಟ್ಟ, ತೋಡುಗಳಲ್ಲಿ ನೀರಿನ ಮಟ್ಟದ ಏರಿಕೆಯಾಗಿದೆ.

ಐಎಂಡಿ ಪ್ರಕಾರ ಸೆ. 17ರಂದು ಎಲ್ಲೋ ಅಲರ್ಟ್‌ ಘೊಷಿಸಲಾಗಿದೆ. ಇನ್ನೂ ಎರಡು ದಿನಗಳ ಕಾಲ ಜಿಲ್ಲೆಯ ಕೆಲವು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮಂಗಳೂರಿನಲ್ಲಿ ಮಂಗಳವಾರ 30.1 ಡಿ.ಸೆ. ಗರಿಷ್ಠ, 23.6 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next