Advertisement

ಉಭಯ ತಾಲೂಕಿನಲ್ಲಿ ಉತ್ತಮ ಮಳೆ

02:25 AM Jun 09, 2018 | Karthik A |

ಬೆಳ್ತಂಗಡಿ: ಗುರುವಾರ ರಾತ್ರಿ ಹಾಗೂ ಶುಕ್ರವಾರ ಉತ್ತಮ ಮಳೆಯಾಗಿದ್ದು, ಸೋಮಾವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ. ಹಲವೆಡೆ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿರುವುದರಿಂದ ಜನತೆ ಪರದಾಡುವಂತಾಗಿದೆ.

Advertisement

ಸಮಸ್ಯೆ ಎದುರಿಸಲು ಕ್ರಮ 
ತಾ| ಆಡಳಿತ ಸಮಸ್ಯೆ ಎದುರಿಸಲು ಸಜ್ಜಾಗಿದೆ ಎಂದು ತಹಶೀಲ್ದಾರ್‌ ಟಿ.ಸಿ. ಹಾದಿಮನಿ ತಿಳಿಸಿದ್ದಾರೆ. ಯಾವುದೇ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಅದೇ ರೀತಿ ಸಮರ್ಪಕ ರೀತಿ ಕಾರ್ಯ ನಿರ್ವಹಿಸಲು ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಕಾರ್ಯನಿರ್ವಹಣಾಧಿಕಾರಿಗಳ  ಆದೇಶ ಪಾಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.


ಬಂಟ್ವಾಳ: ಮುಂಜಾಗ್ರತೆ ಸೂಚನೆ

ಬಂಟ್ವಾಳ ತಾಲೂಕಿನಾದ್ಯಂತ ಎಲ್ಲ  ಶಾಲೆಗಳಿಗೂ ಜಿಲ್ಲಾಧಿಕಾರಿ ಸೂಚನೆಯಂತೆ ರಜೆ ನೀಡಲಾಗಿದೆ. ಎಲ್ಲ ಮಕ್ಕಳು ಮನೆಗೆ ಮುಟ್ಟಿದ ಬಗ್ಗೆ ಶಾಲಾ ಶಿಕ್ಷಕರು ಖಾತ್ರಿ ಮಾಡಿಕೊಳ್ಳುವಂತೆ ಸೂಚಿಸಿದ್ದು, ಶನಿವಾರವೂ ರಜೆ ನೀಡಿದ್ದಾಗಿ  ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌. ಶಿವಪ್ರಕಾಶ್‌ ತಿಳಿಸಿದ್ದಾರೆ. ತಾಲೂಕಿನ ವಿವಿಧೆಡೆ ಮಳೆ ಸುರಿದಿದ್ದು, ಹಾನಿ ವರದಿ ಬಂದಿಲ್ಲ ಎಂದು ಬಂಟ್ವಾಳ ತಹಶೀಲ್ದಾರ್‌ ವೈ. ರವಿ ತಿಳಿಸಿದ್ದಾರೆ. ರಾ.ಹೆ. ಮೆಲ್ಕಾರ್‌ ಸಂಚಾರ ಠಾಣೆ ರಸ್ತೆಯ ಸನಿಹ ಕೆಸರು ಹೆದ್ದಾರಿಗೆ ಮಳೆ ನೀರಿನ ಜತೆ ಹರಿದು ಬಂದಿದ್ದು ಪುರಸಭೆಯಿಂದ ತೆರವು ಕಾರ್ಯಾಚರಣೆ ನಡೆದಿದೆ. ವಿವಿಧೆಡೆ ಅಸಮರ್ಪಕ ಚರಂಡಿ ನಿರ್ಮಾಣ, ಕಸ ತೆರವು ಮಾಡದೆ ಮಳೆ ನೀರ ಹರಿವಿಗೆ ತಡೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next