Advertisement

ಕೊಡಗು ಜಿಲ್ಲೆಯಾದ್ಯಂತ ನಿರಂತರ  ಮಳೆ 

07:45 AM May 31, 2018 | Team Udayavani |

ಮಡಿಕೇರಿ: ಕೇರಳಕ್ಕೆ ನೈಋತ್ಯ ಮುಂಗಾರು ಮಾರುತಗಳು ಪ್ರವೇಶಿಸುತ್ತಿರುವ ಹಂತದಲ್ಲೆ ಕಾಣಿಸಿಕೊಂಡಿರುವ ಚಂಡಮಾರುತದ ಪರಿಣಾಮ, ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಂಗಳವಾರ ಮಧ್ಯಾಹ್ನದ ಬಳಿಕ ನಿರಂತರವಾಗಿ ಮಳೆ ಸುರಿಯುತ್ತಿದೆ.

Advertisement

ಎರಡು ತಿಂಗಳಿಗೂ  ಜಿಲ್ಲೆಯಾದ್ಯಂತ ಸುರಿಯುತ್ತಿರುವ ಅಕಾಲಿಕ ಮಳೆಯ ಅಬ್ಬರ ಇದೀಗ ಮುಂಗಾರಿನೊಂದಿಗೆ ಸೇರುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ. ಹವಾಮಾನ ಇಲಾಖೆಯ ಮಾ”ತಿಯಂತೆ ಕೇರಳವನ್ನು ನೈಋತ್ಯ ಮಾರುತಗಳು ಪ್ರವೇಶಿಸಿರುವುದರಿಂದ ಕೊಡಗು ಜಿಲ್ಲೆಯಲ್ಲಿ ಮಳೆಗಾಲದ ವಾತಾವರಣ ಸೃಷ್ಟಿ ಯಾಗಿದೆ.ಜಿಲ್ಲಾ ಕೇಂದ್ರ ಮಡಿಕೇರಿ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಬೆಳಗ್ಗಿನಿಂದಲೆ ಕಾರ್ಮೋಡ ಕವಿದು ಮಧ್ಯಾಹ್ನದ ಬಳಿಕ ಮಳೆಯಾಗುತ್ತಿದೆ.

ಮಂಜಿನ ವಾತಾವರಣದೊಂದಿಗೆ ಚಳಿಯೂ ಇದ್ದು, ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಗ್ರಾಮೀಣ ಭಾಗದ ಜನಜೀವನ ಕಷ್ಟಕರವಾಗಿದೆ. ವಿದ್ಯುತ್‌ ಕೊರತೆಯಿಂದ ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದಾರೆ. ಹದಗೆಟ್ಟ ರಸ್ತೆಗಳಿಂದಾಗಿ ವಾಹನ ಸಂಚಾರ ದುಸ್ತರವಾಗಿದೆ. 

ಪ್ರಸಕ್ತ ಶೆ„ಕ್ಷಣಿಕ ಸಾಲು ಇಂದಿನಿಂದ ಆರಂಭವಾಗಿದ್ದು, ಮಕ್ಕಳು ಶಾಲೆಗಳಿಗೆ ಕೊಡೆ ಹಿಡಿದು, ರೈನ್‌ ಕೋಟ್‌ ಧರಿಸಿ ಹನಿ ಮಳೆಯಲ್ಲಿ ನೆನೆದು ತೆರಳಿದರು. ಒಂದೆಡೆ ಮಳೆಯ ಸಂಭ್ರಮವಾದರೆ ಮತ್ತೂಂದೆಡೆ ಮಡಿಕೇರಿ ನಗರದಲ್ಲಿ ಯುಜಿಡಿ ಒಳಚಂರಂಡಿ ವ್ಯವಸ್ಥೆುಂದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು,ವಿದ್ಯಾರ್ಥಿಗಳು ನಡೆದಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರವಾಹ ಮುನ್ನೆಚ್ಚರಿಕೆ ಕ್ರಮ
ಮಳೆುಂದಾಗಿ ಪ್ರವಾಹ, ಬರೆ ಕುಸಿತ, ಜನ, ಜಾನುವಾರು ಪ್ರಾಣಹಾನಿ, ವಾಸದ ಮನೆ ಹಾನಿ ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿಯಾಗುವ ಸಾಧ್ಯತೆಗಳಿದ್ದು, ಅನಾಹುತಗಳು ಸಂಭ”ಸಿದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ತುರ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಐ.ಶ್ರೀ”ದ್ಯಾ ಅವರು ನಿರ್ದೇಶನ ನೀಡಿದ್ದಾರೆ.   

Advertisement

ಭಾಗಮಂಡಲ, ಅಯ್ಯಂಗೇರಿ, ನಾಪೋಕ್ಲು, ಬಲಮುರಿ, ”ರಾಜಪೇಟೆ ತಾಲ್ಲೂಕಿನ ಕರಡಿಗೋಡು, ದುಬಾರೆ ಮತ್ತು ಲಕ್ಷ್ಮಣತೀರ್ಥ ಹಾಗೂ ಸೋಮವಾರಪೇಟೆ ತಾಲ್ಲೂಕಿನ ಗುಹ್ಯ, ಕಣಿವೆ, ನೆಲ್ಯಹುದಿಕೇರಿ ಇನ್ನು ಹಲವು ಕಡೆ ರಸ್ತೆ, ಭೂ ಪ್ರದೇಶ ಪ್ರವಾಹ ಸಂದರ್ಭದಲ್ಲಿ ಜಲಾವೃತವಾಗುವ ಸಾಧ್ಯತೆ ಇದೆ. ತಾತ್ಕಾಲಿಕ ಪುನರ್ವಸತಿ ಕೇಂದ್ರ ತೆರೆಯುವ ಬಗ್ಗೆ ತಹಶೀಲ್ದಾರರು ಹಾಗೂ ಸ್ಥಳೀಯ ಗ್ರಾ.ಪಂ.ಆಡಳಿತ ಕ್ರಮ ಕೈಗೊಳ್ಳಲು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next