Advertisement
ದಿನವಿಡೀ ತೀವ್ರ ಸೆಖೆಯ ವಾತಾವರಣವಿತ್ತು. ಸಂಜೆ ವೇಳೆಗೆ ಸುರಿದ ಮಳೆ ಇಳೆಯನ್ನು ತಂಪಾಗಿಸಿತು. ಜನರೂ ಇದರಿಂದ ತುಸು ಚೇತರಿಕೆಗೊಂಡರು.
ಅಜೆಕಾರು ಸುತ್ತಮುತ್ತಲ ಗ್ರಾಮಗಳಲ್ಲಿ ಎ.10ರ ಸಂಜೆ ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಪಶ್ಚಿಮ ಘಟ್ಟ ತಪ್ಪಲಿನ ಗ್ರಾಮಗಳಾದ ಕೆರ್ವಾಶೆ, ಶಿರ್ಲಾಲು, ಮಾಳ, ಅಂಡಾರು, ಮುಟ್ಲುಪಾಡಿಯಲ್ಲಿ ಭಾರೀ ಮಳೆಯಾಗಿದೆ. ಅಜೆಕಾರು, ಹೆರ್ಮುಂಡೆ, ಮುನಿಯಾಲು, ಕುಕ್ಕುಜೆ, ಕಡ್ತಲ, ಹಿರ್ಗಾನ ಪರಿಸರದಲ್ಲಿ ಗಾಳಿ, ಸಿಡಿಲು ಸಹಿತ ಮಳೆಯಾಗಿದೆ.
ಗ್ರಾಮೀಣ ಭಾಗಗಳಲ್ಲಿ ಬೇಸಗೆ ಮಳೆ ಪ್ರತಿದಿನ ಸುರಿಯುತ್ತಿರುವುದರಿಂದ ಮಳೆಗಾಲಕ್ಕೆ ಕೃಷಿಗೆ ಪೂರಕವಾದ ವಸ್ತುಗಳಾದ ತರಗೆಲೆ, ಕಟ್ಟಿಗೆ ಸಂಗ್ರಹಿಸಲು ಗ್ರಾಮೀಣ ಜನತೆಗೆ ಸಮಸ್ಯೆಯಾಗಿದೆ.
Related Articles
Advertisement
ಕೆರ್ವಾಶೆಯಲ್ಲಿ ಆಲಿಕಲ್ಲು ಮಳೆಕೆರ್ವಾಶೆ ಭಾಗದಲ್ಲಿ ಭಾರೀ ಗಾಳಿ ಮಳೆ ಸುರಿದಿದ್ದು, ಆಲಿಕಲ್ಲು ಮಳೆಯೂ ಸುರಿದಿದೆ. ಇದರಿಂದ ಕೃಷಿಗೆ ಅಪಾರ ನಷ್ಟವುಂಟಾಗಿದೆ. ಹಲವೆಡೆಗಳಲ್ಲಿ ತೆಂಗು, ಅಡಿಕೆ ಮರಗಳು ನೆಲಕ್ಕೊರಗಿವೆ. ಜತೆಗೆ ಮರಗಳು ವಿದ್ಯುತ್ ಕಂಬದ ಮೇಲೆ ಬಿದ್ದಿವೆ. ಕೆಲವೆಡೆಗಳಲ್ಲಿ ಮನೆಗಳ ಛಾವಣಿಗೂ ಹಾನಿಯುಂಟಾಗಿವೆ. ಮಳೆಯಿಂದಾದ ಒಟ್ಟು ನಷ್ಟದ ಬಗ್ಗೆ ಇನ್ನಷ್ಟೇ ಅಂದಾಜಿಸಬೇಕಿದೆ.