Advertisement

ಹಾನಿ, ಅಪಾಯವಿಲ್ಲದ ಉತ್ತಮ ಮಳೆ

09:41 PM Jul 23, 2019 | Team Udayavani |

ಪುತ್ತೂರು: ತಾಲೂಕಿನಾದ್ಯಂತ ಕೆಲವು ದಿನಗಳಿಂದ ಸುರಿಯುತ್ತಿರುವ ಉತ್ತಮ ಮಳೆ ಮಂಗಳವಾರವೂ ಮುಂದುವರಿದಿದೆ. ತಾಲೂಕಿನ ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಮಂಗಳವಾರ ಪೂರ್ವಾಹ್ನ 11 ಗಂಟೆಯ ಬಳಿಕ ಬಿರುಸಿನ ಮಳೆಯಾಗಿದೆ. ಬೆಳಗ್ಗಿನ ಹೊತ್ತಿನಲ್ಲಿ ಸ್ವಲ್ಪ ಬಿಡುಗಡೆ ಪಡೆದುಕೊಂಡಿತ್ತು. ಗ್ರಾಮಾಂತರದ ಕುಂಬ್ರ, ಈಶ್ವರಮಂಗಲ, ಸುಳ್ಯಪದವು, ಬೆಟ್ಟಂಪಾಡಿ, ಪುರುಷರಕಟ್ಟೆ, ಉಪ್ಪಿನಂಗಡಿಗಳಲ್ಲಿ ಉತ್ತಮ ಮಳೆಯಾ ಗಿದೆ. ಗಾಳಿ, ಸಿಡಿಲಿನ ಅಬ್ಬರವಿರದೆ ಇರುವುದರಿಂದ ದೊಡ್ಡ ಪ್ರಮಾಣದ ಹಾನಿ ಉಂಟಾಗಿಲ್ಲ.

Advertisement

ಮಾಡು ಕುಸಿತ
ಇರ್ದೆ ಗ್ರಾಮದ ಪೇರಳ್ತಡ್ಕದಲ್ಲಿ ಜು. 22ರ ಸಂಜೆ ಮಳೆಗೆ ಮನೆಯ ಮಾಡು ಕುಸಿದ ಘಟನೆ ನಡೆದಿದೆ. ಕೂಲಿ ಕಾರ್ಮಿಕ ಅಬೂಬಕ್ಕರ್‌ ಅವರ ಮನೆಯಾಗಿದ್ದು, ಅವರ ತಾಯಿ ಕುಸಿತದ ಶಬ್ದ ಕೇಳಿ ಹೊರಗೆ ಬಂದು ಪಾರಾಗಿದ್ದಾರೆ. ಸ್ಥಳಕ್ಕೆ ಬೆಟ್ಟಂಪಾಡಿ ಗ್ರಾಮಕರಣಿಕ ಕನಕರಾಜ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ.

422.9 ಮಿ.ಮೀ. ಮಳೆ
ಸೋಮವಾರ ಬೆಳಗ್ಗಿನಿಂದ ಮಂಗಳ ವಾರ ಬೆಳಗ್ಗಿನ 24 ಗಂಟೆಗಳ ಅವಧಿಯಲ್ಲಿ ಪುತ್ತೂರು ನಗರದಲ್ಲಿ 56 ಮಿ.ಮೀ., ಉಪ್ಪಿನಂಗಡಿಯಲ್ಲಿ 102 ಮಿ.ಮೀ., ಶಿರಾಡಿಯಲ್ಲಿ 60.4 ಮಿ.ಮೀ., ಕೊçಲದಲ್ಲಿ 85.2 ಮಿ.ಮೀ., ಐತೂರುನಲ್ಲಿ 46.4 ಮಿ.ಮೀ., ಕಡಬದಲ್ಲಿ 72.3 ಮಿ.ಮೀ. ಮಳೆ ಸುರಿದಿದೆ. ತಾಲೂಕಿನಲ್ಲಿ ಒಟ್ಟು 422 .9 ಮಿ.ಮೀ. ಹಾಗೂ ಸರಾಸರಿ 70.4 ಮಿ.ಮೀ. ಮಳೆಯಾಗಿದೆ.

ಸುಳ್ಯ ತಾಲೂಕಿನಲ್ಲಿ ಮಳೆ ಇಳಿಮುಖ
ಸುಳ್ಯ: ತಾಲೂಕಿನಲ್ಲಿ ಮಂಗಳ ವಾರ ಮಧ್ಯಾಹ್ನ ಸಾಧಾರಣ ಮಳೆಯಾ ದರೆ, ಉಳಿದ ಹೊತ್ತು ಮೋಡ ಕವಿದ ವಾತಾವರಣ ಕಂಡು ಬಂತು. ಕಳೆದ ಮೂರು ದಿನಗಳಿಗೆ ಹೋಲಿಸಿದರೆ ಮಳೆ ಹಗಲು ಮಳೆ ಪ್ರಮಾಣ ಕೊಂಚ ತಗ್ಗಿತ್ತು. ಗ್ರಾಮಾಂತರ ಪ್ರದೇಶದಲ್ಲಿ ಸಾಧಾ ರಣ ಮಳೆಯಾಗಿದೆ. ಕೊಡಗು ಭಾಗ ದಲ್ಲಿ ಉತ್ತಮ ಮಳೆಯಾದ ಕಾರಣ ಸೋಮವಾರ ಪಯಸ್ವಿನಿ ನದಿ ನೀರಿನ ಮಟ್ಟ ಏರಿಕೆ ಕಂಡಿತ್ತು. ಮಂಗಳವಾರ ನೀರಿನ ಪ್ರಮಾಣ ತಗ್ಗಿತ್ತು.

17 ಮೀ.ಗೆ ಏರಿಕೆ
ಉಪ್ಪಿನಂಗಡಿ ಸಂಗಮ ಕ್ಷೇತ್ರದಲ್ಲಿ 17 ಮೀ. ತನಕ ನೀರಿನ ಮಟ್ಟ ಏರಿಕೆ ಯಾಗಿದೆ. ತೀವ್ರ ಮಳೆ ಸಾಧ್ಯತೆಯ ಕುರಿತು ಹವಾಮಾನ ಇಲಾಖೆಯ ಮಾಹಿತಿಯಂತೆ ಮಂಗಳವಾರ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next