Advertisement

ಪ್ರಸಕ್ತ ವರ್ಷ ಉತ್ತಮ ಮಳೆ: ಜಿಡಗಾ ಶ್ರೀ

11:10 AM Mar 25, 2019 | pallavi |

ಅಫಜಲಪುರ: ಕಳೆದ ವರ್ಷ ಮಳೆಯಾಗದೆ ಬಹಳ ಸಮಸ್ಯೆಯಾಗಿತ್ತು. ಆದರೆ ಈ ವರ್ಷ ವರುಣ ಕರುಣೆ ತೋರಲಿದ್ದಾನೆ. ಹೀಗಾಗಿ ರೈತ ವರ್ಗದವರು ಎದೆಗುಂದಬೇಡಿ, ಆತ್ಮಹತ್ಯೆ ಮಾಡಿಕೊಳ್ಳಬೇಡಿ, ಭರವಸೆಯಿಂದ ಇರಿ. ಗುರು ಕರುಣೆ ನಿಮ್ಮ ಮೇಲಿದೆ ಎಂದು ಮುಗಳಖೋಡ ಜಿಡಗಾ ಮಠದ ಪೀಠಾಧೀಶ ಮುರುಘರಾಜೇಂದ್ರ ಮಹಾಸ್ವಾಮೀಜಿ ನುಡಿದರು.

Advertisement

ತಾಲೂಕಿನ ಕರ್ಜಗಿಯಲ್ಲಿ ಯಲ್ಲಾಲಿಂಗೇಶ್ವರರ 86ನೇ ಜಾತ್ರಾ ಮಹೋತ್ಸವದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಬೇಸಿಗೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ಬಂದಿದೆ. ಆದರೆ ಈ ವರ್ಷದ ಮಳೆಗಾಲ ಎಲ್ಲರಿಗೂ ಅನುಕೂಲ ಆಗಲಿದೆ. ರೈತರ ಕಷ್ಟ ಕಾರ್ಪಣ್ಯಗಳು ನೀಗಲಿವೆ. ಹೀಗಾಗಿ ಯಾವ ರೈತರು ಎದೆಗುಂದಬಾರದು, ಆತ್ಮಹತ್ಯೆ ಹಾದಿ ಹಿಡಿಯಬಾರದು ಎಂದರು.

ಕರ್ಜಗಿ ಯಲ್ಲಾಲಿಂಗರ ಸನ್ನಿಧಿ ಪವಾಡ ಮತ್ತು ಪುಣ್ಯ ಸ್ಥಾನವಾಗಿದೆ. ಇಂತಹ ಪುಣ್ಯಕ್ಷೇತ್ರದಲ್ಲಿ ಮದುವೆಯಾದ ಜೋಡಿಗಳ ಜೀವನ ಸುಖಮಯವಾಗಿರಲಿ, ಸಾಮರಸ್ಯದಿಂದ ಕೂಡಿರಲಿ, ಸಂಬಂಧ ಗಟ್ಟಿಗೊಳಿಸಿ ಸರಳ, ಸುಂದರ, ಧರ್ಮಾಧಾರಿತ ಜೀವನ ನಡೆಸುವಂತಾಗಲಿ ಎಂದು ಹರಸಿದರು.

ನಾಗಣಸೂರ ಮಠದ ರೇವಣಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಮುಗಳಖೋಡ-ಜಿಡಗಾ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಮಹಾಸ್ವಾಮೀಜಿ ಸದಾ ಜನಪರ ಕೆಲಸ ಮಾಡುತ್ತಾ ಭಕ್ತ ವರ್ಗದ ಕಷ್ಟ ನೀಗಿಸುವ
ಕೆಲಸ ಮಾಡಿದ್ದಾರೆ ಎಂದರು.

ಜಾತ್ರೆಯಲ್ಲಿ ಒಟ್ಟು 46 ಜೋಡಿಗಳ ಸಾಮೂಹಿಕ ವಿವಾಹ ನಡೆಯಿತು. ಎಲ್ಲಾ ಜೋಡಿಗಳಿಗೆ ಕರ್ಜಗಿ ಗ್ರಾಮದ ಮುಖಂಡ
ರಾಜು ಜಿಡ್ಡಗಿ ತಾಳಿ ಮತ್ತು ಕಾಲುಂಗುರ ಕಾಣಿಕೆ ನೀಡಿದರು. ಇವರು ಕಳೆದ ನಾಲ್ಕು ವರ್ಷದಿಂದ ಈ ಸೇವೆ ಸಲ್ಲಿಸುತ್ತಿದ್ದಾರೆ.

Advertisement

ವಧುವರರಿಗೆ ಗ್ರಾಮದ ಮುಖಂಡ ಮಹಾಂತಯ್ಯ ಹಿರೇಮಠ ಬಟ್ಟೆ ಕಾಣಿಕೆ ನೀಡಿದರೆ, ಶಿವಲಿಂಗಯ್ಯ ಸ್ವಾಮಿ ಹೂವಿನ
ಹಾರ ಮತ್ತು ದಂಡಿಗಳನ್ನು ನೀಡಿದರು. ಕಾಶಿನಾಥ ಹಳಗೋ, ವೀರಯ್ಯ ಸ್ವಾಮಿ ಸಾಲಿಮಠ, ಸಿದ್ಧಯ್ಯ ಸ್ವಾಮಿ ಹಿರೇಮಠ,
ಮಹಮ್ಮದ ಅಲಿ, ಚಂದು ದೇಸಾಯಿ, ಗುರು ಸಾಲಿಮಠ, ಸಿದ್ಧು ಹಳಗೋ , ವಿಜಯಕುಮಾರ ಬಂಗಾರಶೆಟ್ಟಿ, ಜಗದೇವಿ
ಮಾತಾ ಅಗರಖೇಡ, ವೆಂಕಟೇಶ, ಅಂಬಣ್ಣ ನರಗೋ  ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next