ಮಂಗಳೂರು/ಉಡುಪಿ: ಕರಾವಳಿಯ ಬಹುತೇಕ ಭಾಗದಲ್ಲಿ ರವಿವಾರ ಉತ್ತಮ ಮಳೆ ಯಾಗಿದೆ. ಕೆಲವೆಡೆ ದಿನವಿಡೀ ಮಳೆ ಸುರಿದಿದೆ.
ಮಂಗಳೂರಿನಲ್ಲಿ ಶನಿವಾರ ರಾತ್ರಿಯಿಂದಲೇ ಉತ್ತಮ ಮಳೆಯಾಗಿದೆ. ಪುಂಜಾಲಕಟ್ಟೆ, ಕುಂದಾ ಪುರ, ಶಿರ್ವ, ಕಾರ್ಕಳ, ಪಡುಬಿದ್ರಿ, ಮೂಲ್ಕಿ, ಹಳೆ ಯಂಗಡಿ, ಬ್ರಹ್ಮಾವರ, ಸಿದ್ದಾಪುರದಲ್ಲಿ ಉತ್ತಮ ಮಳೆ ಯಾಗಿದೆ. ವಿಟ್ಲ, ಬೆಳ್ತಂಗಡಿ, ಮಡಂತ್ಯಾರು, ಮಚ್ಚಿನ, ತೆಕ್ಕಟ್ಟೆ, ಕಟೀಲು, ಕೊಲ್ಲೂರು, ವಂಡ್ಸೆ, ಕೊಟೇಶ್ವರ, ಕೋಟ, ಕಿನ್ನಿಗೋಳಿಯಲ್ಲಿ ದಿನವಿಡೀ ಮಳೆ ಸುರಿದಿದೆ. ಬಜಪೆಯಲ್ಲಿ ಬಿಟ್ಟು ಬಿಟ್ಟು ಮಳೆ ಯಾದರೆ ಸುಳ್ಯ, ಕಡಬ, ಪುತ್ತೂರಿನಲ್ಲಿ ಸಾಧಾರಣ ಮಳೆಯಾಗಿದೆ.
ತುಂಬಿ ಹರಿದ ನದಿಗಳು: ಕಳೆದ ಎರಡು ದಿನಗಳಿಂದ ನಿರಂತರ ಮಳೆ ಯಾಗು ತ್ತಿರುವುದರಿಂದ ಹೆಚ್ಚಿನ ನದಿ, ತೊರೆಗಳು ತುಂಬಿ ಹರಿಯುತ್ತಿದ್ದು, ನೀರು ಕೆಂಪಾಗಿದೆ. ಬಾವಿ, ಕೆರೆಗಳಲ್ಲಿಯೂ ನೀರು ತುಂಬಿದೆ. ಕೆಲವೊಮ್ಮೆ ಜೋರು ಮಳೆ ಸುರಿದರೂ ಅನಂತರ ಕೆಲ ಸಮಯ ಲಘುವಾಗಿ ಸುರಿಯುತ್ತಿದ್ದುದರಿಂದ ನೆರೆಯ ಸ್ಥಿತಿ ಉಂಟಾಗಿಲ್ಲ.
ಚಿಂದಿಯಾದ ರಸ್ತೆ: ರಾಷ್ಟ್ರೀಯ ಹೆದ್ದಾರಿಯಿಂದ ಗ್ರಾಮೀಣ ರಸ್ತೆಗಳ ವರೆಗೆ ಹೆಚ್ಚಿನೆಡೆ ಡಾಮರು ಎದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಕಳೆದ ಬೇಸಗೆಯಲ್ಲಿ ಡಾಮರು ಆಗಿರುವ ರಸ್ತೆಗಳು ಮಾತ್ರ ಸುಸ್ಥಿತಿಯಲ್ಲಿದ್ದು, ಇತರ ಹೆಚ್ಚಿನ ರಸ್ತೆಗಳಲ್ಲಿ ಹೊಂಡ ಬಿದ್ದಿವೆ. ರಾ.ಹೆ. 66ರ ಸುರತ್ಕಲ್ ಟೋಲ್ ಗೇಟ್ ನಿಂದ ಮಂಗಳೂರುವರೆಗೆ ಹಾಗೂ ಮಂಗಳೂರು-ಬೆಂಗಳೂರು ರಸ್ತೆಯ ಅಲ್ಲಲ್ಲಿ ಬೃಹತ್ ಗುಂಡಿಗಳಾಗಿವೆ. ಕೇರಳದ ಮಂಜೇಶ್ವರ- ಹೊಸಂಗಡಿ ನಡುವಿನ ರಸ್ತೆ ಕೂಡ ತೀರಾ ಹದಗೆಟ್ಟಿದೆ. ಇದರಿಂದಾಗಿ ಕೆಲವೆಡೆ ಗಂಟೆಗಟ್ಟಳೆ ಟ್ರಾಫಿಕ್ ಜಾಂ ಸಂಭವಿಸಿತು.
ಗಣೇಶೋತ್ಸವ ಮೆರವಣಿಗೆಗೂ ಅಡ್ಡಿ: ನಿರಂತರ ವಾಗಿ ಮಳೆ ಸುರಿದ ಪರಿ ಣಾಮ ಗಣೇಶೋತ್ಸವದ ಮೆರವಣಿಗೆ, ಕಾರ್ಯಕ್ರಮ ಗಳಿಗೂ ಅಡ್ಡಿಯಾಯಿತು.