Advertisement
ತಾಲೂಕು ಕೃಷಿ ಇಲಾಖೆ ಮಾಹಿತಿ ಪ್ರಕಾರ ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ 46,125 ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿ ಇದ್ದು, ಬಹುತೇಕ ರೈತರು ತೊಗರಿ ಬೆಳೆಯನ್ನೇ ಬಿತ್ತನೆ ಮಾಡಿದ್ದು, ಮೊಗ್ಗು ಹೂವು ಬಿಡುವ ಹಂತದಲ್ಲಿದೆ. ತೊಗರಿ ಬೆಳೆ ಉತ್ತಮ ಫಸಲು ಆಗಿ ಬೆಳೆದಿರುವುದರಿಂದ ಖುಷಿಯಾಗಿರುವ ರೈತರು ತೊಗರಿ ಬೆಳೆಗಳ ಮಧ್ಯೆ ಕಾಣಿಸಿಕೊಂಡ ಕಳೆ ತೆಗೆಯುವಲ್ಲಿ ಮತ್ತು ಕೀಟನಾಶಕ ಸಿಂಪರಣೆಯಲ್ಲಿ ತೊಡಗಿದ್ದಾರೆ.
ಕರಚಖೇಡ, ಜಟ್ಟೂರ, ಹಲಕೋಡ, ರುದನೂರ, ಚಿಂತಪಳ್ಳಿ, ಗಡಿಕೇಶ್ವಾರ, ಚಂದನಕೇರಾ, ಭೂಯ್ನಾರ, ಸಲಗರ ಬಸಂತಪುರ, ರಟಕಲ್, ಕೋಡ್ಲಿ, ಹಲಚೇರಾ, ಕೊರವಿ ಗ್ರಾಮಗಳಲ್ಲಿ ತೊಗರಿ ಬೆಳೆಗಳಲ್ಲಿ ಹೂವು ಕಾಣಿಸಿಕೊಂಡಿರುವುದರಿಂದ ರೈತರಲ್ಲಿ ಸಂತಸ ಮೂಡಿದೆ. ತಾಲೂಕಿನಲ್ಲಿ ಎರಡು ದಿನಗಳಿಂದ ಮಳೆ ಇಲ್ಲದ ಕಾರಣ ತೊಗರಿ ಬೆಳೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಕೆಲವು ಗ್ರಾಮಗಳಲ್ಲಿ ತೊಗರಿ ಬೆಳೆ ಮೊಗ್ಗಿನಿಂದ ಕೂಡಿದ್ದು, ಇನ್ನೆರಡು ದಿನಗಳಲ್ಲಿ ಹೂವು ಕಾಣಿಸಿಕೊಳ್ಳಲಿದೆ. ತೊಗರಿ ಬೆಳೆಗೆ ಯಾವುದೇ ಕೀಟ ನಾಶಕ ಸಿಂಪರಣೆ ಮತ್ತು ಕೃಷಿವಿಜ್ಞಾನಿಗಳ ಸಲಹೆ ಬೇಕಾದರೆ ತಾಲೂಕಿನ ಸುಲೇಪೇಟ, ನಿಡಗುಂದಾ, ಕೋಡ್ಲಿ, ಚಿಮ್ಮನಚೋಡ, ಐನಾಪುರ, ಕುಂಚಾವರಂ, ಚಿಂಚೋಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ಸಲಹೆ ಪಡೆದುಕೊಳ್ಳಬೇಕು ಎಂದು ತಾಲೂಕು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್. ಗಡಿಗಿಮನಿ ಸಲಹೆ ನೀಡಿದ್ದಾರೆ.
Related Articles
ಆರೋಗ್ಯಯುತವಾಗಿ ಬೆಳೆಸಬೇಕು.ಅಂದರೆ ಉತ್ತಮ ಹೆಚ್ಚುವರಿ ಪಡೆಯಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ.
Advertisement
ಕೆಲವು ಸಲ ನುಸಿ ಹಾವಳಿಯಿಂದ ಹೂವು ಕಾಯಿ ಬಿಡದಂತೆ ಹಾಗೆ ಬೆಳೆದರೆ ಮುಂದೆ ಗೊಡ್ಡು ರೋಗ ಕಾಣಿಸುತ್ತದೆ. ಆದ್ದರಿಂದ ರೈತರು ಕೃಷಿ ವಿಜ್ಞಾನಿಗಳೊಂದಿಗೆ ಸಂಪರ್ಕಿಸಿ ಸಲಹೆ ಪಡೆಯಬಹುದು ಎಂದು ತಿಳಿಸಿದ್ದಾರೆ.