Advertisement

ಕ್ರೀಡೆಯಿಂದ ಉತ್ತಮ ಭವಿಷ್ಯ: ಶಾಸಕ ಮೊಯಿದಿನ್‌ ಬಾವಾ

10:16 AM Jan 04, 2018 | Team Udayavani |

ಸುರತ್ಕಲ್‌: ಕ್ರೀಡಾಸಕ್ತಿ ಮತ್ತು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಶೈಕ್ಷಣಿಕ ಪ್ರಗತಿಯೂ ಉನ್ನತ
ಮಟ್ಟಕ್ಕೇರುತ್ತದೆ. ಕ್ರೀಡೆಯಿಂದ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದೆಂದು ಶಾಸಕ ಬಿ.ಎ. ಮೊದಿನ್‌ ಬಾವಾ ಅವರು ಹೇಳಿದರು. 

Advertisement

ಅಲ್‌ ಬದ್ರಿಯಾ ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ಅಲ್‌ ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಥೆಯ ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಸಂಸ್ಥೆಯು ಉತ್ತಮ ಶೈಕ್ಷಣಿಕ ವಾತಾವರಣವನ್ನು ಹೊಂದಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದರು.

ಪ್ರತಿಭೆ ಗುರುತಿಸಿ
ಸಮಾರಂಭದ ಅಧ್ಯಕ್ಷತೆಯನ್ನು ಅಲ್‌ ಬದ್ರಿಯಾ ಎಜುಕೇಶನಲ್‌ ಅಸೋಸಿಯೇಶನ್‌ನ ಅಧ್ಯಕ್ಷ ಅಬೂಬಕರ್‌ ಕೃಷ್ಣಾಪುರ ಅವರು ವಹಿಸಿದ್ದರು. ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪೋಷಿಸುವ ಕಾರ್ಯವನ್ನು ಸಂಸ್ಥೆಯು ಮಾಡುತ್ತಿದ್ದು, ಅನೇಕ ವಿದ್ಯಾರ್ಥಿಗಳು ವಿಭಾಗ ಹಾಗೂ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಕಾರ್ಪೊರೇಟರ್‌ಗಳಾದ ತಿಲಕ್‌ರಾಜ್‌, ಅಯಾಝ್ ಕೃಷ್ಣಾಪುರ, ಪ್ರತಿಭಾ ಕುಳಾಯಿ ಹಾಗೂ ಎಚ್‌ಎನ್‌ಜಿಸಿ ಸಂಸ್ಥೆಯ ನಿರ್ದೇಶಕ ಮನ್ಸೂರು, ಬದ್ರಿಯಾ ಜುಮ್ಮಾ ಮಸೀದಿಯ ಉಪಾಧ್ಯಕ್ಷ ಅಬ್ದುಲ್‌ ಜಲೀಲ್‌ ಆಗಮಿಸಿದ್ದರು. 

ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಹಾಜಿ ಬಿ. ಎಂ. ಹುಸೇನ್‌, ಸಂಸ್ಥೆಯ ಉಪಾಧ್ಯಕ್ಷ ಅಬ್ದುಲ್‌ ಖಾದರ್‌ ಮುಂಬಯಿ, ಸಂಚಾಲಕ ಬಿ.ಎ. ನಝೀರ್‌, ಕಾರ್ಯದರ್ಶಿ ಬಿ.ಕೆ. ಹಮೀದ್‌, ಜತೆ ಕಾರ್ಯದರ್ಶಿ ಝಾಕೀರ್‌ ಹುಸೇನ್‌, ಕೋಶಾಧಿಕಾರಿ ಟಿ.ಎಂ. ಮುಬಾರಕ್‌, ಪ್ರಾಂಶುಪಾಲ ಸಂದೀಪ್‌ ಆಚಾರ್ಯ, ಮುಖ್ಯ ಶಿಕ್ಷಕ ಸತೀಶ್‌ ಎನ್‌, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಬೂಸಾಲಿ, ಕೋಶಾಧಿಕಾರಿ ಅಶ್ರಫ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

ಕೃಷ್ಣಾಪುರದ ಖಾಝಿ ಅಲ್‌ಹಾಜ್‌ ಇ.ಕೆ. ಇಬ್ರಾಹಿಂ ಮುಸ್ಲಿಯಾರ್‌ ಅವರು ದುವಾ ನೆರವೇರಿಸಿದರು. ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ಹಾಗೂ ವರ್ಣರಂಜಿತ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ಸಹಶಿಕ್ಷಕಿ ಪ್ರಾರ್ಥನಾ ಸ್ವಾಗತಿಸಿದರು. ಜ್ಯೋತಿಷ್‌ ಕುಮಾರ್‌ ವಂದಿಸಿದರು. ಪ್ರಮೀಳಾ ಹಾಗೂ ಝೀನತ್‌ರವರು ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next