ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಕರ್ನಾಟಕ ಇಂಡಸ್ಟ್ರಿಯಲ್ ಪಾಲಿಸಿ ಕುರಿತು ಕರಡು ರೂಪಿಸಲು ನೂತನ ರಫ್ತು ನೀತಿ ರೂಪಿಸುವ ದಿಸೆಯಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು.
ಸರಕಾರ ಈ ಕ್ಷೇತ್ರಕ್ಕೆ ಹೆಚ್ಚಿನ ಆರ್ಥಿಕ ವ್ಯವಸ್ಥೆ ಕಲ್ಪಿಸಿದೆ. ರಫ್ತು ನೀತಿಯಡಿ ವಿಶೇಷವಾದ ವೆಬ್‌ಸೈಟ್‌ಗಳು ಲಭ್ಯವಿದ್ದು ಇದರ ಮುಖಾಂತರ ಕೌಶಲ ಅಭಿವೃದ್ಧಿ ವ್ಯವಸ್ಥೆ, ಸರಕು ಸಾಗಾಣಿಕೆ, ಎಕ್ಸಪೋರ್ಟ್ ಕ್ರೆಡಿಟ್ ಗ್ಯಾರಂಟಿ ಇನ್ಸೂರನ್ಸ್ ಹಾಗೂ ಇತರೆ ಅವಕಾಶಗಳು ಇದ್ದು ಇದರ ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ ಎಂದರು. ಬೆಳಗಾವಿ ಡಿಜಿಎಫ್ ಟಿ ಅಧಿಕಾರಿ ಪಿ.ಎಸ್.ಬಿ. ಶಾಸ್ತ್ರಿ ಮಾತನಾಡಿ, ದಾಖಲೆಗಳ ಪರಿಶೀಲನೆ ಹಾಗೂ ನಿರ್ವಹಣೆ ರಫ್ತು ನೀತಿಗೆ ಅನುಸಾರ ಬ್ಯಾಂಕುಗಳಿಂದ ಹಾಗೂ ಎಕ್ಸಪೋರ್ಟ್ ಕ್ರೆಡಿಟ್ ಗ್ಯಾರಂಟಿ ಇನ್ಸೂರನ್ಸ್ ಮುಖಾಂತರ ರಫ್ತು ಮಾಡಲು ಅನುಕೂಲಗಳ ಬಗ್ಗೆ ವಿವರಿಸಿದರು. ವಿಟಿಪಿಸಿ ಜಂಟಿ ನಿರ್ದೆಶಕ ಪ್ರವೀಣ ರಾಮದುರ್ಗ, ಸಹಾಯಕ ನಿರ್ದೆಶಕ ಪದ್ಮಕಾಂತ, ವಿವೇಕ ನಾಯಕ, ಪ್ರಕಾಶ ಕನ್ನೂರ, ಕೆ.ಟಿ. ಪವಾರ, ಅಶೋಕ ಲದವಾ, ರತಿ ಶ್ರೀನಿವಾಸನ್ , ಎಚ್ .ಎಚ್. ಯಂಡಿಗೇರಿ, ಅಂದಾನಪ್ಪ ಸಜ್ಜನರ, ಸಿ.ಜಿ. ಧಾರವಾಡ ಶೆಟ್ಟರ, ಅಶೋಕ ತೋಳನವರ, ಅಶೋಕ ಗಡಾದ ಉಪಸ್ಥಿತರಿದ್ದರು. ಮಹೇಂದ್ರ ಲದ್ದಡ ಸ್ವಾಗತಿಸಿದರು. ವಿನಯ ಜವಳಿ ವಂದಿಸಿದರು.
Advertisement
ಬೆಂಗಳೂರಿನ ವಿಟಿಪಿಸಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಟಿಪಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಸತೀಶ ಮಾತನಾಡಿ, ಕಳೆದ 4 ವರ್ಷಗಳಲ್ಲಿ ಕರ್ನಾಟಕ ರಾಜ್ಯ ರಫ್ತು ಉತ್ಪಾದನಾ ಕ್ಷೇತ್ರದಲ್ಲಿ ರಫ್ತು ನೀತಿ ಅನುಸಾರ ಹೆಚ್ಚಿನ ಪ್ರಗತಿ ಸಾಧಿಸಿದೆ. ಯೋಜನೆ ಪ್ರಕಾರ ಇನ್ನೂ ಹೆಚ್ಚಿನ ಗುರಿ ಸಾಧಿಸಬೇಕಿದ್ದು, ಕೈಗಾರಿಕಾ ನೀತಿ ಅಡಿ ರಫ್ತು ಉತ್ತೇಜನ ಸಲುವಾಗಿ ಸಾಕಷ್ಟು ಧನಸಹಾಯದ ಅವಕಾಶಗಳಿವೆ ಎಂದರು.