Advertisement

ವಿದ್ಯಾರ್ಥಿಗಳಿಗೆ ಶುಭ ಸುದ್ದಿ

12:52 AM Sep 12, 2019 | Team Udayavani |

ನವದೆಹಲಿ: ಇಂಗ್ಲೆಂಡ್‌ಗೆ ಅಧ್ಯಯನಕ್ಕಾಗಿ ತೆರಳುವ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಧ್ಯಯನಾನಂತರ ಕೆಲಸದ ವೀಸಾವನ್ನು ಎರಡು ವರ್ಷಗಳವರೆಗೆ ನೀಡಲು ನಿರ್ಧರಿಸಲಾಗಿದೆ. ಇಂಗ್ಲೆಂಡ್‌ ಸರ್ಕಾರದ ಈ ಕ್ರಮದಿಂದಾಗಿ ಪ್ರತಿಭಾವಂತ ವಿದ್ಯಾರ್ಥಿಗಳು ಉದ್ಯೋಗ ಮುಗಿಸಿದ ನಂತರ ಎರಡು ವರ್ಷಗಳವರೆಗೆ ಇಂಗ್ಲೆಂಡ್‌ನ‌ಲ್ಲೇ ಕೆಲಸ ಅರಸಲು ಮತ್ತು ವೃತ್ತಿ ಬದುಕು ಕಂಡುಕೊಳ್ಳಲು ನೆರವಾಗಲಿದೆ.

Advertisement

ಈ ಹೊಸ ವಿಧಾನ 2020-21ರಿಂದ ಜಾರಿಗೆ ಬರಲಿದೆ. ಥೆರೇಸಾ ಮೇ ಸರ್ಕಾರ 2012 ಮೇಯಲ್ಲಿ ಈ ವೀಸಾವನ್ನು ರದ್ದುಗೊಳಿಸಿತ್ತು. ಈ ವೀಸಾ ನೀಡುವಿಕೆಯನ್ನು ಪುನಃ ಆರಂಭಿಸಲು ನಿರ್ಧರಿಸಿರುವುದರಿಂದ ಬ್ರಿಟನ್‌ಗೆ ತೆರಳುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುವ ಸಾಧ್ಯತೆಯಿದೆ.

ಈ ವೀಸಾ ಯೋಜನೆ ಅಡಿಯಲ್ಲಿ ಯಾವುದೇ ಸ್ನಾತಕೋತ್ತರ ಪದವಿ ಅಥವಾ ಅದಕ್ಕೂ ಉನ್ನತ ಮಟ್ಟದ ಕೋರ್ಸ್‌ ಮುಗಿಸಿದ ನಂತರ ಎರಡು ವರ್ಷಗಳವರೆಗೆ ಕೆಲಸ ಮಾಡಬಹುದು ಅಥವಾ ಕೆಲಸ ಹುಡುಕಬಹುದು. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳು ದೇಶದಲ್ಲೇ ಉಳಿದುಕೊಳ್ಳುತ್ತಾರೆ ಎಂಬುದು ಇಂಗ್ಲೆಂಡ್‌ ಸರ್ಕಾರದ ಉದ್ದೇಶವಾಗಿದೆ.

2019 ಜೂನ್‌ ಕೊನೆಯ ವೇಳೆಗೆ ಸುಮಾರು 22 ಸಾವಿರ ವಿದ್ಯಾರ್ಥಿಗಳು ಯುನೈಟೆಡ್‌ ಕಿಂಗ್ಡಮ್‌ಗೆ ತೆರಳಿದ್ದಾರೆ. ಪ್ರತಿ ವರ್ಷ ಇಂಗ್ಲೆಂಡ್‌ಗೆ ತೆರಳುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. 2018 ಕ್ಕೆ ಹೋಲಿಸಿದರೆ 2019 ರಲ್ಲಿ ಯುಕೆಗೆ ತೆರಳಿದ ವಿದ್ಯಾರ್ಥಿಗಳ ಸಂಖ್ಯೆ ಶೇ. 42 ರಷ್ಟು ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next