Advertisement

ಶೀಘ್ರದಲ್ಲೆ ಹಳಿಗಿಳಿಯಲಿವೆ ಎಲ್ಲಾ ಪ್ಯಾಸೆಂಜರ್ ರೈಲುಗಳು : ರೈಲ್ವೇ ಸಚಿವಾಲಯ

03:31 PM Feb 12, 2021 | Team Udayavani |

ನವ ದೆಹಲಿ : ಎಲ್ಲಾ ಪ್ಯಾಸೆಂಜರ್ ರೈಲುಗಳ ಸೇವೆಗಳನ್ನು ಅತಿ ಶೀಘ್ರದಲ್ಲಿ ಪುನರಾರಂಭಿಸುತ್ತೇವೆ ಎಂದು ರೈಲ್ವೆ ಸಚಿವಾಲಯ ಹೇಳಿದೆ.

Advertisement

ಲಾಕ್ಡೌನ್ ನಂತರ ಸ್ಥಗಿತಗೊಂಡಿದ್ದ ರೈಲು ಸೇವೆಯನ್ನು ಮತ್ತೆ ಹಂತ ಹಂತವಾಗಿ ಪುನರಾರಂಭಿಸುತ್ತಿದ್ದೇವೆ . ಶೇಕಡಾ 65ರಷ್ಟು ರೈಲುಗಳು ಸದ್ಯಕ್ಕೆ ದೇಶದಾದ್ಯಂತ ಸಂಚರಿಸುತ್ತಿವೆ.ಇನ್ನೂ ಹೆಚ್ಚಿನ ರೈಲುಗಳು ಅತಿ ಶೀಘ್ರದಲ್ಲಿ ಸಂಚರಿಸಲಿವೆ. ಈ ಮುನ್ನಾ ಎಲ್ಲಾ ರೀತಿಯ ಸಾಧಕ ಬಾಧಕಗಳನ್ನು ಪರಿಶೀಲಿಸಿಕೊಳ್ಳಬೇಕಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಓದಿ : ಕೃಷಿಹೊಂಡದ ನೀರಿನಲ್ಲಿ ಮುಳುಗಿ ನಾಲ್ಕು ವರ್ಷ ಪ್ರಾಯದ ಇಬ್ಬರು ಮಕ್ಕಳ ಸಾವು

ಹೋಳಿ ಹಬ್ಬದ ಸಂದರ್ಭದಲ್ಲಿ ಪ್ಯಾಸೆಂಜರ್ ಟ್ರೈನ್ ಸೇವೆಯನ್ನು ಹೆಚ್ಚಿಸಬೇಕು ಎಂಬ ಸಾರ್ವಜನಿಕರ ಬೇಡಿಕೆಯ ಮೇರೆಗೆ ಸಚಿವಾಲಯು ಹೆಚ್ಚಿನ ಸಂಖ್ಯೆಯ ರೈಲುಗಳ ಸೇವೆಯನ್ನು ಪುನರಾರಂಭಿಸಬಹುದು ಎಂದು ಹೇಳಲಾಗುತ್ತಿದೆ.

ಕೋವಿಡ್ 19 ಸಂದರ್ಭವಾಗಿರುವುದರಿಂದ ದೇಶವ್ಯಾಪಿ ಪರಿಸ್ಥಿತಿಯನ್ನು ಪರಿಶೀಲಿಸಲಾಗುತ್ತಿದೆ. ಸರ್ಕಾರ ಮತ್ತು ಸಚಿವಾಲಯ ಈ ಬಗ್ಗೆ ಅಂತಿಮ ನಿರ್ದಾರಕ್ಕೆ ಬರಲಿದೆ ಎಂದು ಹಿರಿಯ ರೈಲ್ವೇ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Advertisement

ಸದ್ಯಕ್ಕೆ ಶೇಕಡಾ 65 ರಷ್ಟು ಎಕ್ಸ್ ಪ್ರೆಸ್ ರೈಲುಗಳು ಸಂಚರಿಸುತ್ತಿವೆ. 100 ರಿಂದ 200 ರೈಲುಗಳ ಸೇವೆಯನ್ನು ಪ್ರತಿ ತಿಂಗಳಿಗೊಮ್ಮೆ ಹೆಚ್ಚಿಸಲಾಗುತ್ತಿದೆ ಎಂದು ಇಂಡಿಯನ್ ರೈಲ್ವೇ ಮಾಹಿತಿ ನೀಡಿದೆ.

ಓದಿ :  ರೈತರ ಪ್ರತಿಭಟನೆ ಅನಿರ್ದಿಷ್ಟಾವದಿಯವರೆಗೆ ನಡೆಯಲಿದೆ : ಟಿಕಾಯತ್

 

 

 

 

.

Advertisement

Udayavani is now on Telegram. Click here to join our channel and stay updated with the latest news.

Next