Advertisement

ಈ ಯುಗಾದಿ ಮಂಗಳೂರು ಪೊಲೀಸರಿಗೆ ಸಿಹಿ ಸುದ್ದಿ

08:51 AM Apr 06, 2019 | keerthan |

ಮಂಗಳೂರು: ಈ ವರ್ಷದ ಯುಗಾದಿ ಹಬ್ಬಕ್ಕೆ ಪೊಲೀಸರಿಗೆ ಸಿಹಿ ಸುದ್ದಿಯಿದೆ. ಪ್ರತಿ ಯುಗಾದಿಗೂ ಹಣಕಾಸು ವರ್ಷಾಂತ್ಯದ ನೆಪವೊಡ್ಡಿ ಮಾರ್ಚ್‌ ತಿಂಗಳ ಸಂಬಳ ನೀಡಲು ತಡವಾಗುತ್ತಿದ್ದರೆ, ಈ ಬಾರಿ ಎ. 2ರಂದೇ ಸಂಬಳ ಜಮೆಯಾಗಿದೆ.

Advertisement

ಪ್ರತಿ ವರ್ಷ ಮಾರ್ಚ್‌ ತಿಂಗಳ ಸಂಬಳವನ್ನು ಹಣಕಾಸು ವರ್ಷಾಂತ್ಯದ ನೆಪ ಹೇಳಿ ವಿಳಂಬ ಮಾಡಲಾಗುತ್ತಿತ್ತು. ಇದರಿಂದ ಯುಗಾದಿ ಹಬ್ಬಕ್ಕೆ ಖರೀದಿಗೆ ಹಣ ಹೊಂದಿಸಲು ಪೊಲೀಸ್‌ ಸಿಬಂದಿ ಕಷ್ಟಪಡಬೇಕಿತ್ತು. ಆದರೆ ಈ ಬಾರಿ ಎ. 2ರಂದೇ ಸಂಬಳ ಆಗಿರುವುದು ಖುಷಿ ತಂದಿದೆ ಎಂದು ನಗರ ಪೊಲೀಸ್‌ ಕಮಿಷನರೇಟ್‌ ಘಟಕದ ಓರ್ವ ಸಿಬಂದಿ ಮಾಹಿತಿ ನೀಡಿದ್ದಾರೆ. ಯುಗಾದಿ ಹಬ್ಬದ ವೇಳೆಗೆ ಸಂಬಳ ಕೈಗೆ ಸೇರಿದ ಬಗ್ಗೆ ಪೊಲೀಸ್‌ ಸಿಬಂದಿ ತಮ್ಮ ವಾಟ್ಸಪ್‌ ಗ್ರೂಪ್‌ಗ್ಳಲ್ಲಿ ಸಂದೇಶ ರವಾನಿಸಿ ಚರ್ಚೆ ನಡೆಸುತ್ತಿದ್ದಾರೆ.

ಮಂಗಳೂರು ನಗರ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಅವರ ವಿಶೇಷ ಮುತುವರ್ಜಿಯೇ ನಗರದ ಪೊಲೀಸರಿಗೆ ಸಕಾಲಕ್ಕೆ ಸಂಬಳವಾಗಲು ಕಾರಣ ಎಂದು ಓರ್ವ ಪೊಲೀಸ್‌ ಸಿಬಂದಿ ತಿಳಿಸಿದ್ದಾರೆ.

ಸಿಬಂದಿಗೆ ಖುಷಿ ಆಗಿದ್ದರೆ ನನಗೂ ಸಂತೋಷ
ಸಿಬಂದಿಗೆ ಖುಷಿ ಆಗಿದ್ದರೆ ನನಗೂ ಸಂತೋಷ. ಸಿಬಂದಿ ಕ್ಷೇತ್ರದಲ್ಲಿ ಕೆಲಸ ಮಾಡುವವರು. ಅವರು ಸಂತೋಷದಿಂದಿರಬೇಕು. ಅವರು ಖುಷಿಯಾಗಿದ್ದರೆ ಉತ್ತಮ ಸೇವೆಯನ್ನು ನಾವು ನಿರೀಕ್ಷಿಸಬಹುದು.
ಸಂದೀಪ್‌ ಪಾಟೀಲ್‌, ಪೊಲೀಸ್‌ ಕಮಿಷನರ್‌

Advertisement

Udayavani is now on Telegram. Click here to join our channel and stay updated with the latest news.

Next