Advertisement
ಇದರಲ್ಲಿ ಹಳೆ ವಾಹನ, ಮಿಠಾಯಿ, ಬಯೋ ಡೀಸೆಲ್ ಮೇಲಿನ ಜಿಎಸ್‌ಟಿಯನ್ನು ಕಡಿತ ಮಾಡಲಾಗಿದೆ. ಅಲ್ಲದೆ ರಿಟರ್ನ್ಸ್ ಸಲ್ಲಿಕೆ ವಿಧಾನವನ್ನೂ ಸರಳಗೊಳಿಸಲು ನಿರ್ಧರಿಸಲಾಗಿದ್ದು, ಈ ಮೂಲಕ ಉದ್ದಿಮೆದಾರರಿಗೆ ಅನುಕೂಲ ಮಾಡಿಕೊಡಲಾಗಿದೆ. 54 ಸೇವೆಗಳ ವಿಭಾಗದಲ್ಲಿ ಕೆಲವು ಜಾಬ್ ವರ್ಕ್, ಟೈಲರ್ ಸೇವೆ, ಥೀಮ್ ಪಾರ್ಕ್‌ಗಳ ಪ್ರವೇಶದ ಮೇಲಿನ ಜಿಎಸ್‌ಟಿಯನ್ನು ಕಡಿತ ಮಾಡಲಾಗಿದೆ. ಇದಷ್ಟೇ ಅಲ್ಲ, 26ನೇ ಸಭೆ ಯಲ್ಲಿ ಪೆಟ್ರೋಲಿಯಂ, ರಿಯಲ್ ಎಸ್ಟೇಟ್ ಸೇವೆಗಳನ್ನೂ ಜಿಎಸ್‌ಟಿಯೊ ಳಗೆ ತರುವ ಬಗ್ಗೆ ಚರ್ಚಿಸುವುದಾಗಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಪರಿಷ್ಕೃತ ಜಿಎಸ್‌ಟಿ ದರವು ಜನವರಿ 25ರಿಂದ ಜಾರಿಗೆ ಬರಲಿದೆ.
ಶೇ. 28-ಶೇ.18
1. ಹಳೆಯ ಮತ್ತು ಬಳಸಲಾಗಿರುವ ವಾಹನಗಳು (ಮಧ್ಯಮ ಮತ್ತು ಭಾರಿ ಕಾರು ಹಾಗೂ ಎಸ್‌ಯುವಿಗಳು). 2. ಸಾರ್ವಜನಿಕ ಸೇವೆಗೆ ಬಳಕೆ ಮಾಡುವ ಬಯೋ ಡೀಸೆಲ್ ಬಸ್.
ಶೇ. 28-ಶೇ.12
1. ಎಲ್ಲ ಹಳೆಯ, ಬಳಸಿರುವ ವಾಹನ (ಮಧ್ಯಮ ಹಾಗೂ ಭಾರೀ ಕಾರು ಹಾಗೂ ಎಸ್‌ಯುವಿ ಹೊರತುಪಡಿಸಿ).
ಶೇ. 18 – ಶೇ.12
1. ಸಕ್ಕರೆಯಿಂದ ಮಾಡಿದ ಮಿಠಾಯಿ. 2.20 ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಬಾಟಲಿ. 3. ರಸಗೊಬ್ಬರ ಮಾದರಿಯ ಫಾಸ್ಪರಿಕ್ ಆ್ಯಸಿಡ್. 4. ಬಯೋ ಡೀಸೆಲ್. 5. ಕೆಲವು ಬಯೋ ಕೀಟನಾಶಕ. 6. ಬಂಬೂವಿನಿಂದ ಮಾಡಿದ ಏಣಿ. 7. ಹನಿ ನೀರಾವರಿ ಪರಿಕರಗಳು. 8. ಯಾಂತ್ರೀಕೃತ ಸಿಂಪಡಣೆ.
ಶೇ. 18 – ಶೇ.5
1. ಹುಣಿಸೇಹಣ್ಣಿನ ಪುಡಿ. 2. ಕೋನ್‌ನಲ್ಲಿನ ಮೆಹಂದಿ ಪುಡಿ. 3. ಖಾಸಗಿ ಕಂಪೆನಿಗಳಿಂದ ಮನೆಗಳಿಗೆ ಎಲ್‌ಪಿಜಿ ವಿತರಣೆ. 4. ವೈಜ್ಞಾನಿಕ ಮತ್ತು ತಾಂತ್ರಿಕ ಸಾಧನಗಳು, ಉಪಕರಣಗಳು, ಸಾಧನಗಳು, ಬಿಡಿಭಾಗಗಳು, ಟೂಲ್ಸ್, ಕಚ್ಚಾ ವಸ್ತುಗಳು, ಸ್ಯಾಟ್‌ಲೈಟ್ ಉಡಾವಣೆಗೆ ಬೇಕಾದ ಪರಿಕರಗಳು.
ಶೇ.12 – ಶೇ.5
1. ಮೇವು, ಗಿಡ ನೆಡುವ ಸಾಧನಗಳು, ಬ್ಯಾಸ್ಕೆಟ್‌ವೇರ್ ಮತ್ತು ವಿಕ್ಕರ್ ವರ್ಕ್ .
ಶೇ.12 – ಶೇ. 5(ಇನ್‌ಪುಟ್ ತೆರಿಗೆ ರಹಿತ)
1. ವ್ಯಾಲ್ವೆಟ್ ಫ್ಯಾಬ್ರಿಕ್
ಶೇ. 3 – ಶೇ.0.25
1. ವಜ್ರ ಮತ್ತು ಭಾರೀ ಬೆಲೆ ಬಾಳುವ ಕಲ್ಲುಗಳು ತೆರಿಗೆ ರಹಿತ
1. ಅಕ್ಕಿ ಹೊಟ್ಟು
Related Articles
ಶೇ.12 – ಶೇ.18
1. ಸಿಗರೇಟ್ ಫಿಲ್ಟರ್ ರಾಡ್‌ಗಳು
Advertisement
ಸೇವೆಗಳ ಮೇಲಿನ ತೆರಿಗೆ ಕಡಿತ1. ಆರ್‌ಸಿಎಸ್ ವಿಮಾನ ನಿಲ್ದಾಣಗಳ ಕಾರ್ಯಸಾಧ್ಯತಾ ಅಂತರ ನಿಧಿ(ವಿಜಿಎಫ್)ಗೆ ಮೂರು ವರ್ಷಗಳ ವರೆಗೆ ಜಿಎಸ್‌ಟಿ ವಿನಾಯಿತಿ.
2. ಆರ್‌ಟಿಐ ಮೂಲಕ ನೀಡುವ ಮಾಹಿತಿ ಪೂರೈಕೆಗೆ ವಿನಾಯಿತಿ.
3. ಸರಕಾರ, ಸ್ಥಳೀಯ ಸರಕಾರ, ಸರಕಾರದ ಪ್ರಾಧಿಕಾರಗಳು, ಸಂಸ್ಥೆಗಳಿಗೆ ನೀಡುವ ಕಾನೂನು ಸೇವೆಗೆ ವಿನಾಯಿತಿ.
4. ಮೆಟ್ರೋ ಮತ್ತು ಮಾನೋರೈಲ್ ಯೋಜನೆಗಳ ಕಾಮಗಾರಿ, ನಿರ್ಮಾಣ, ಆರಂಭ ಮತ್ತು ಅಳವಡಿಸುವಿಕೆ (ಶೇ.18ರಿಂದ ಶೇ.12).
5. ಟೈಲರಿಂಗ್ ಸೇವೆಯ ಮೇಲಿನ ಜಿಎಸ್‌ಟಿ ಶೇ. 18ರಿಂದ ಶೇ.5ಕ್ಕೆ ಇಳಿಕೆ.
6. ಥೀಮ್ ಪಾರ್ಕ್, ವಾಟರ್ ಪಾರ್ಕ್, ಜಾಯ್ ರೇಡ್, ಮೆರ್ರಿ ಗೋ ಗ್ರೌಂಡ್, ಕಾರ್ಟಿಂಗ್ ಮತ್ತು ಬ್ಯಾಲೆಟ್ (ಶೇ.28 ರಿಂದ 18).
7. ಭಾರತದಿಂದ ಹೊರಗೆ ವಿಮಾನ ಅಥವಾ ಹಡಗಿನ ಮೂಲಕ ಸರಕುಗಳ ಸಾಗಾಟದ ಸೇವೆಗೆ ಜಿಎಸ್‌ಟಿ ವಿನಾಯಿತಿ.
8. ಕೇಂದ್ರ ಸರಕಾರ, ರಾಜ್ಯ ಸರಕಾರ, ಕೇಂದ್ರಾಡಳಿತ ಪ್ರದೇಶ, ಸ್ಥಳೀಯ ಆಡಳಿತ, ಸರಕಾರಿ ಪ್ರಾಧಿಕಾರ ಅಥವಾ ಇನ್ನಾವುದೇ ಸರಕಾರದ ಗುತ್ತಿಗೆ ಮೇಲಿನ ಜಿಎಸ್‌ಟಿ ಶೇ.18 ರಿಂದ ಶೇ.12ಕ್ಕೆ ಇಳಿಕೆ.
9. ಕಚ್ಚಾ ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ವಸ್ತುಗಳ ಸಾಗಾಟದ ಮೇಲಿನ ಜಿಎಸ್‌ಟಿ ಶೇ.18 ರಿಂದ ಶೇ.5 (ಐಟಿಸಿ ಇಲ್ಲದೇ) ಹಾಗೂ ಶೇ.12(ಐಟಿಸಿ ಜತೆ)ಕ್ಕೆ ಇಳಿಕೆ.
10. ಚರ್ಮೋದ್ಯಮಕ್ಕೆ ಸಂಬಂಧಿಸಿದ ಜಾಬ್ ವರ್ಕ್ ಮೇಲಿನ ತೆರಿಗೆ ಶೇ.5ಕ್ಕೆ ಇಳಿಕೆ.
11. ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ
ಮತ್ತು ಪರೀಕ್ಷೆ ಮೇಲಿನ ತೆರಿಗೆ ರದ್ದು, ಹಾಗೆಯೇ ಪ್ರವೇಶ ಪರೀಕ್ಷೆ ನಡೆಸುವ ಶೈಕ್ಷಣಿಕ ಸಂಸ್ಥೆಗಳಲ್ಲೂ ಜಿಎಸ್‌ಟಿಯಿಂದ ಮುಕ್ತಿ.
12. ಕೃಷಿ ಪದಾರ್ಥಗಳನ್ನು ಇಡುವ ಗೋದಾಮು.
13. ಶೈಕ್ಷಣಿಕ ಉದ್ದೇಶಕ್ಕಾಗಿ ವಾಹನಗಳನ್ನು ಬಾಡಿಗೆಗೆ ನೀಡುವ ಸೇವೆ ಜಿಎಸ್‌ಟಿಯಿಂದ ಹೊರಕ್ಕೆ.
14. ಸರಕಾರದ ಯೋಜನೆಗಳನ್ನು ಬಳಸಿಕೊಂಡು ನಿರ್ಮಾಣ ಮಾಡಲಾಗುವ ಮನೆಗಳಿಗೆ ಕೊಂಚ ರಿಯಾಯಿತಿ.