Advertisement

ಗುಡ್‌ಮಾರ್ನಿಂಗ್‌ ಬೀಟ್‌! ಪೊಲೀಸ್ ಇಲಾಖೆಯಿಂದ ಹೊಸ ಬೀಟ್ ವ್ಯವಸ್ಥೆ

06:00 AM Nov 05, 2017 | Team Udayavani |

ಬೆಂಗಳೂರು: ಈಗಾಗಲೇ ಕಾಂಗ್ರೆಸ್‌, ಬಿಜೆಪಿ ನಡುವೆ ವ್ಯಾಗ್ಯುದ್ಧಕ್ಕೆ ಕಾರಣವಾಗಿರುವ ಟಿಪ್ಪು ಜಯಂತಿ ವೇಳೆ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಗುಡ್‌ಮಾರ್ನಿಂಗ್‌ ಬೀಟ್‌ ವ್ಯವಸ್ಥೆ ಜಾರಿಗೆ ತರಲು ರಾಜ್ಯ ಸರಕಾರ ಮುಂದಾಗಿದೆ.

Advertisement

ಕಾನೂನು ಸುವ್ಯವಸ್ಥೆ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದ ಬೆನ್ನಲ್ಲೇ ಪೊಲೀಸ್‌ ಇಲಾಖೆ ಈ ಬೀಟ್‌ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಿದೆ ಎಂದು ಹೇಳಲಾಗಿದೆ.  ಈ  ವ್ಯವಸ್ಥೆ ಮೂಲಕ ಧಾರ್ಮಿಕ ಸ್ಥಳಗಳು, ಸೂಕ್ಷ್ಮಪ್ರದೇಶಗಳ ಮೇಲೆ ವಿಶೇಷ ನಿಗಾವಹಿಸಲು ಸರಕಾರ ಮುಂದಾಗಿದೆ.
ನ.10 ರಂದು ಟಿಪ್ಪು ಜಯಂತಿ ನಡೆಯಲಿದ್ದು, ಆ ಬಳಿಕವೂ ಗುಡ್‌ಮಾರ್ನಿಂಗ್‌ ಬೀಟ್‌ ವ್ಯವಸ್ಥೆ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.
ಈಗಾಗಲೇ ಮಾರ್ನಿಂಗ್‌ ಬೀಟ್‌ ವ್ಯವಸ್ಥೆ ಯಲ್ಲಿದ್ದು, ಇದನ್ನೇ “ಗುಡ್‌ಮಾರ್ನಿಂಗ್‌ ಬೀಟ್‌’ ಎಂದು ಹೊಸದಾಗಿ ರೂಪಿಸಲಾಗಿದೆ. ರಾತ್ರಿ ಪಾಳಿಯ ಹೊಯ್ಸಳ, ಚಿತಾ ಸಹಿತ ಇತರ ಸಿಬಂದಿ ಗುರುತಿಸಿರುವ ಪ್ರದೇಶಗಳಿಗೆ ಹೋಗಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದವರು ವಿವರಿಸಿದರು.
ಏನಿದು ಗುಡ್‌ಮಾರ್ನಿಂಗ್‌ ಬೀಟ್‌?: ಬೆಂಗಳೂರು ಸಹಿತ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರುವ ಸೂಕ್ಷ್ಮ ಪ್ರದೇಶಗಳು ಹಾಗೂ ಧಾರ್ಮಿಕ ಸ್ಥಳಗಳನ್ನು ಗುರುತಿಸಲಾಗಿದೆ. 
ಈ ಸ್ಥಳಗಳಿಗೆ ಬೀಟ್‌ನಲ್ಲಿರುವ ಹೊಯ್ಸಳ, ಚೀತಾ ಹಾಗೂ ಪ್ರಸ್ತುತ ಪಾಳಿಯಲ್ಲಿರುವ ಸಿಬಂದಿ, ಅಧಿಕಾರಿಗಳು ಆ ಸ್ಥಳದಲ್ಲಿ ಇಟ್ಟಿರುವ ಪಾಯಿಂಟ್‌ ಪುಸ್ತಕಕ್ಕೆ ಸಹಿ ಮಾಡಿ ಬರಬೇಕು. ಹಾಗೆಯೇ ಆಯಾ ಠಾಣಾ ವ್ಯಾಪ್ತಿಯ ಸಿಬಂದಿ ಕೆಲವು ಪ್ರದೇಶಗಳಲ್ಲಿರುವ ಸಾರ್ವಜನಿಕರ ಜತೆ ನೇರವಾಗಿ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರ ಸಂಪರ್ಕದಲ್ಲಿರಬೇಕು ಮತ್ತು ವಾಟ್ಸ್‌ಆ್ಯಪ್‌ ಮೂಲಕ ಸ್ಥಳೀಯರ ಜತೆ ಸಂವಹನ ನಡೆಸುತ್ತಿರಬೇಕು.
ರ್ಯಾಲಿ, ಪಥಸಂಚಲನಕ್ಕೆ 
ಅವಕಾಶವಿಲ್ಲ
ಟಿಪ್ಪು ಜಯಂತಿ ಸರಕಾರಿ ಕಾರ್ಯಕ್ರಮ ಆದ್ದರಿಂದ ಯಾವುದೇ ಕಾರಣಕ್ಕೂ ಸಾರ್ವ ಜನಿಕರ ಕಾರ್ಯಕ್ರಮ ಅಥವಾ ಪಥಸಂಚಲನ, ರ್ಯಾಲಿ ನಡೆಸು ವಂತಿಲ್ಲ. ಈ ಸಂಬಂಧ ಸ್ಥಳೀಯ ಎಲ್ಲ ಸಮುದಾಯದ ಮುಖಂ ಡರ ಜತೆ ಆಯಾ ಠಾಣಾ ವ್ಯಾಪ್ತಿಯ ಅಧಿಕಾರಿಗಳು ಸಭೆ ನಡೆಸಬೇಕು. ಪ್ರಮುಖವಾಗಿ ಮೊಹಲ್ಲಾ ಕಡೆಗಳಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಬೇಕು. 
ಸರಕಾರಿ 
    ಕಾರ್ಯಕ್ರಮ ಮಾತ್ರ
ಟಿಪ್ಪು ಜಯಂತಿ ಪ್ರಯುಕ್ತ ರಾಜ್ಯಾದ್ಯಂತ ಸಾಕಷ್ಟು ಭದ್ರತೆ ವಹಿಸಿದ್ದೇವೆ. ಸರಕಾರಿ ಕಾರ್ಯ ಕ್ರಮಕ್ಕೆ ಮಾತ್ರ ಅವಕಾಶವಿದೆ. ಸರಕಾರಿ ಕಾರ್ಯಕ್ರಮದಲ್ಲೇ ಸಾರ್ವಜನಿಕರು ಭಾಗವಹಿಸ ಬಹುದು. ಖಾಸಗಿಯಾಗಿ ಯಾರೂ ಮಾಡುವಂತಿಲ್ಲ. ಭದ್ರತೆಗಾಗಿ ಪ್ಯಾರಾ ಮಿಲಿಟರಿ ಪಡೆ, ಕೆಎಸ್‌ಆರ್‌ಪಿ ತುಕಡಿಗಳ ನಿಯೋಜನೆ, ಕಾರ್ಯಕ್ರಮ ಆಯೋಜಕರ ಜತೆ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಕಾರ್ಯಕ್ರಮ ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಿಸಿಟಿವಿ ಕೆಮರಾಗಳನ್ನು ಅಳವಡಿಸಲಾಗಿದೆ. ಪೊಲೀಸರ ರಜೆ ರದ್ದುಗೊಳಿಸಿ ಭದ್ರತೆಗೆ ನಿಯೋಜಿಸಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಹಿರಿಯ ಅಧಿಕಾರಿಗಳನ್ನು ಸೂಕ್ಷ್ಮಪ್ರದೇಶಗಳಲ್ಲಿ ನಿಯೋಜಿಸ
ಲಾಗಿದೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ 
ಕಮಲ್‌ ಪಂಥ್‌ ತಿಳಿಸಿದರು. 

ಟಿಪ್ಪು ಜನ್ಮ ಸ್ಥಳದಲ್ಲಿ ಭಾರೀ ಭದ್ರತೆ
ದೇವನಹಳ್ಳಿಯಲ್ಲಿರುವ ಟಿಪ್ಪು ಪ್ರತಿಮೆ ಮತ್ತು ಇಲ್ಲಿಂದ 200 ಮೀಟರ್‌ ದೂರದಲ್ಲಿರುವ ಟಿಪ್ಪು ಜನ್ಮ ಸ್ಥಳದಲ್ಲಿ  ಸಿಸಿಟಿವಿಗಳನ್ನು ಅಳವಡಿಸಿದ್ದು, ದಿನದ 24 ಗಂಟೆಗಳ ಕಾಲ ಭದ್ರತೆ  ಸಿಬಂದಿ ನಿಯೋಜಿಸಲಾಗಿದೆ. ಜತೆಗೆ ಹೊರಾಂಗಣ ಕಾರ್ಯಕ್ರಮಕ್ಕೆ ಅವಕಾಶ ನಿರಾಕರಿಸಿದ್ದು, ಈ ಭಾಗದಲ್ಲಿ ಒಳಾಂಗಣ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗಿದೆ. ಇನ್ನುಳಿದಂತೆ ಎಲ್ಲ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲ ರೀತಿಯ ಕಟ್ಟೆಚ್ಚರ ವಹಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next