Advertisement

ಸಿನಿಮಂದಿರ ಆರಂಭಕ್ಕೆ ಮರು ಬಿಡುಗಡೆಯ ಭಾಗ್ಯ!

12:08 AM Oct 14, 2020 | mahesh |

ಬೆಂಗಳೂರು: ಸಿನೆಮಾ ಮಂದಿರಗಳ ಆರಂಭಕ್ಕಾಗಿ ಏಳು ತಿಂಗಳಿಂದ ಕಾಯುತ್ತಿದ್ದ ಚಿತ್ರರಸಿಕರ ಕನಸು ನನಸಾಗುವ ದಿನ ಸಮೀಪಿಸಿದೆ. ಅ.16ರಿಂದ ರಾಜ್ಯಾದ್ಯಂತ ಮಲ್ಟಿಪ್ಲೆಕ್ಸ್‌ ಸಿನಿಮಂದಿರಗಳು ಮರಳಿ ತೆರೆದುಕೊಳ್ಳಲಿವೆ. ಆದರೆ ಹೊಸ ಸಿನೆಮಾಗಳ ಬಿಡುಗಡೆ ಕೊಂಚ ತಡವಾಗಲಿದ್ದು, ಹಳೆಯ ಚಿತ್ರಗಳು ಮರುಬಿಡುಗಡೆ ಕಾಣಲಿವೆ.

Advertisement

ಕೊರೊನಾ ಸಂಪೂರ್ಣವಾಗಿ ಮಾಯವಾಗದ ಹಿನ್ನೆಲೆಯಲ್ಲಿ ಚಿತ್ರ ನಿರ್ಮಾಪಕರು ಮತ್ತು ಪ್ರದರ್ಶಕರು ಹೊಸ ಸಿನೆಮಾಗಳ ಬಿಡುಗಡೆಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಲಾಕ್‌ಡೌನ್‌ಗೆ ಕೆಲವು ದಿನಗಳ ಮುನ್ನ ಬಿಡುಗಡೆಯಾಗಿದ್ದ ಚಿತ್ರಗಳನ್ನು ಈಗ ಮರು ಬಿಡುಗಡೆ ಮಾಡಿ, ಜನರ ಪ್ರತಿಕ್ರಿಯೆ ಹೇಗಿರಲಿದೆ ಎಂಬುದನ್ನು ಕಾದು ನೋಡಲಿದ್ದಾರೆ.

ಎಲ್ಲ ಚಿತ್ರಮಂದಿರಗಳು ತೆರೆಯುವುದಿಲ್ಲ
ರಾಜ್ಯದಲ್ಲಿ 600ಕ್ಕೂ ಹೆಚ್ಚು ಸಿಂಗಲ್‌ ಸ್ಕ್ರೀನ್‌ ಮತ್ತು 60ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಿವೆ. ಆದರೆ ಸದ್ಯ ಸಿನೆಮಾಗಳ ಕೊರತೆ ಇರುವುದರಿಂದ ಅ. 16ರಿಂದ ರಾಜ್ಯದ ಕೆಲವೇ ಕೆಲವು ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳು ಮಾತ್ರ ತೆರೆಯುತ್ತವೆ. ಈ ಚಿತ್ರಮಂದಿರಗಳಲ್ಲಿ ರೀ ರಿಲೀಸ್‌ ಸಿನೆಮಾಗಳು ಪ್ರದರ್ಶನ ಕಾಣಲಿವೆ. ಈ ವಾರ ಆರು ಸಿನೆಮಾಗಳು ಮರು ಬಿಡುಗಡೆಯಾಗಲಿವೆ.

15 ದಿನ ಹೊಸ ಸಿನೆಮಾ ಅನುಮಾನ
ಸಿನೆಮಾ ಬಿಡುಗಡೆ ಬಗ್ಗೆ ಮಾತನಾಡಿರುವ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್‌, ಕನಿಷ್ಠ ಒಂದು ಅಥವಾ ಎರಡು ವಾರಗಳ ಮುನ್ನವಾದರೂ ಹೊಸ ಸಿನೆಮಾ ಬಿಡುಗಡೆ ಘೋಷಣೆ ಆಗುತ್ತದೆ. ಆದರೆ ಇದುವರೆಗೆ ಯಾವುದೇ ಹೊಸ ಸಿನೆಮಾ ಬಿಡುಗಡೆ ಘೋಷಣೆ ಆಗಿಲ್ಲ. ಹೀಗಾಗಿ ಇನ್ನೂ 15 ದಿನ ಹೊಸ ಸಿನೆಮಾಗಳು ತೆರೆಗೆ ಬರುವುದು ಅನುಮಾನ ಎಂದಿದ್ದಾರೆ.

ಮಲ್ಟಿಪ್ಲೆಕ್ಸ್‌ ಚಿತ್ರಮಂದಿರ ಸಿದ್ಧ
ಮಲ್ಟಿಪ್ಲೆಕ್ಸ್‌ಗಳು ಪ್ರೇಕ್ಷಕರನ್ನು ಸೆಳೆಯಲು ಎಲ್ಲ ಸಿದ್ಧತೆ ಮಾಡಿಕೊಂಡಿವೆ. ಸಾಮಾಜಿಕ ಅಂತರಕ್ಕೆ ಹೆಚ್ಚಿನ ಮಹತ್ವ ನೀಡಿದ್ದು, ಅದರಂತೆ ಆಸನದ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಸ್ಯಾನಿಟೈಸೇಶನ್‌, ಆನ್‌ಲೈನ್‌ ಬುಕಿಂಗ್‌ಗೆ ಆದ್ಯತೆ ನೀಡಲಾಗಿದೆ.

Advertisement

ಸಿಂಗಲ್‌ ಸ್ಕ್ರೀನ್‌ ತೆರೆಯದಿರಲು ಕಾರಣವೇನು?
– ಹೊಸ ಸಿನೆಮಾ ಕೊರತೆ
– ಮರು ಬಿಡುಗಡೆ, ಹೀಗಾಗಿ ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳಿಗೆ ಸಿನೆಮಾ ಸಿಗುವುದಿಲ್ಲ
– ಪರಭಾಷೆ ಚಿತ್ರಗಳ ಬಿಡುಗಡೆಯೂ ಆರಂಭವಾಗಿಲ್ಲ
– ಪರಭಾಷಾ ಸೆಂಟರ್‌ ಎನಿಸಿಕೊಂಡ ಚಿತ್ರಮಂದಿರಗಳಿಗೆ ನಷ್ಟ ಸಾಧ್ಯತೆ

ಮರು ಬಿಡುಗಡೆ
– ಶಿವಾಜಿ ಸುರತ್ಕಲ್‌
– ಶಿವಾರ್ಜುನ
– 4 ಲವ್‌ ಮಾಕ್ಟೇಲ್‌
– ಥರ್ಡ್‌ ಕ್ಲಾಸ್‌
– 5 ಅಡಿ 7 ಅಂಗುಲ
– ಕಾಣದಂತೆ ಮಾಯವಾದನು

Advertisement

Udayavani is now on Telegram. Click here to join our channel and stay updated with the latest news.

Next