Advertisement
ಬಹುತೇಕ ಹೋಟೆಲ್‌ಗಳು ಬೆಳಗ್ಗೆ 5ರಿಂದ ರಾತ್ರಿ 11 ಗಂಟೆವರೆಗೆ ಮುಚ್ಚಿದ್ದರಿಂದ ಸಾರ್ವಜನಿಕರು ತಿಂಡಿ, ಊಟಕ್ಕೆ ಪರದಾಡಿದರು. ಕಚೇರಿ, ಮಾರ್ಕೆಂಟಿಂಗ್ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವವರು, ಮಧ್ಯಮ ವರ್ಗದ ಸಂಸ್ಥೆಗಳ ಕೆಲಸಗಾರರು ಮತ್ತು ಊಟ, ತಿಂಡಿಗಾಗಿ ಹೋಟೆಲ್‌ಗಳನ್ನೇ ನಂಬಿಕೊಂಡಿದ್ದ ಜನ ಸಾಮಾನ್ಯರಿಗೆ ಅಲೆದಾಟ ತಪ್ಪಲಿಲ್ಲ.
Related Articles
Advertisement
ಪ್ರತಿಭಟನೆ: ಜಿಎಸ್‌ಟಿಯಲ್ಲಿ ದುಬಾರಿ ತೆರಿಗೆ ವಿರೋಧಿಸಿ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ವತಿಯಿಂದ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಸಂಘದ ವ್ಯಾಪ್ತಿಯ ಸುಮಾರು 3000 ಹೋಟೆಲ್ ಮಾಲೀಕರು ಹಾಗೂ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು, ತೆರಿಗೆ ವಿನಾಯ್ತಿಗೆ ಆಗ್ರಹಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಜಯ ಕರ್ನಾಟಕ ಸಂಘಟನೆ ಪ್ರತಿನಿಧಿಗಳೂ ಹೋರಾಟಕ್ಕೆ ಸಾಥ್ ನೀಡಿದರು. ಮೈಸೂರ್ ಬ್ಯಾಂಕ್ ವೃತ್ತದಿಂದ ಟೌನ್‌ಹಾಲ್‌ವರೆಗೆ ಜಾಥಾ ಹೊರಟು, ಬಹಿರಂಗ ಸಭೆಯೊಂದಿಗೆ ಪ್ರತಿಭಟನೆ ಸಂಪನ್ನಗೊಂಡಿತು. ಸಂಘದ ಅಧ್ಯಕ್ಷ ಬಿ. ಚಂದ್ರಶೇಖರ ಹೆಬ್ಟಾರ್ ಮಾತನಾಡಿ, ಕೇಂದ್ರ ಸರ್ಕಾರದ ಜಿಎಸ್‌ಟಿ ಕಾಯ್ದೆಯಲ್ಲಿ ಹೋಟೆಲ್‌ಗಳ ಮೇಲೆ ದುಬಾರಿ ತೆರಿಗೆ ವಿಧಿಸಲಾಗಿದೆ. ಸದ್ಯ ಶೇ.4ರಷ್ಟು ತೆರಿಗೆ ಇದ್ದರೂ, ಗ್ರಾಹಕರಿಗೆ ಹೊರೆಯಾಗದಂತೆ ಆಹಾರ ವಿತರಣೆ ಮಾಡುತ್ತಿದ್ದೇವೆ.
ಕೇಂದ್ರ ಸರ್ಕಾರ ಜಿಎಸ್‌ಟಿ ಮೂಲಕ ಎಸಿ ಹೋಟೆಲ್‌ಗಳಿಗೆ ಶೇ.18 ಹಾಗೂ ನಾನ್ ಎಸಿ ಹೋಟೆಲ್‌ಗಳಿಗೆ ಶೇ.12ರಷ್ಟು ತೆರಿಗೆ ವಿಧಿಸುತ್ತಿರುವುದು ಸರಿಯಲ್ಲ. ಇದರಿಂದ ಗ್ರಾಹಕರಿಗೆ ನೇರ ಹೊರೆಯಾಗಲಿದೆ ಹಾಗೂ ಹೋಟೆಲ್ ನಷ್ಟದಲ್ಲಿ ನಡೆಸಬೇಕಾದ ಪರಿಸ್ಥಿತಿ ಬರಬಹುದು. ಹೀಗಾಗಿ ದುಬಾರಿ ತೆರಿಗೆ ರದ್ದು ಮಾಡಿ, ಏಕರೂಪ ತೆರಿಗೆ ಪದ್ಧತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಬೆಳಗ್ಗೆ 10 ಗಂಟೆಗೆ ಮನೆ ಬಿಟ್ಟರೆ ಮನೆ ಸೇರುವುದು ರಾತ್ರಿಯೇ. ಹೀಗಾಗಿ ಮಧ್ಯಾಹ್ನದ ಊಟಕ್ಕೆ ಹೋಟೆಲ್‌ಗಳನ್ನೇ ಅವಲಂಬಿಸಿದ್ದೆ. ಮಂಗಳವಾರ ಹೋಟೆಲ್ ಬಂದ್ ಹೆಚ್ಚು ಬೆಲೆ ನೀಡಿ ತಳ್ಳು ಗಾಡಿಯಲ್ಲಿ ಊಟ ಮಾಡಬೇಕಾಯಿತು.-ರವಿ, ಖಾಸಗಿ ಸಂಸ್ಥೆ ಉದ್ಯೋಗಿ