Advertisement

ಮಗಳು ಜಾನಕಿಗೆ ಶುಭ ಮುಹೂರ್ತ

01:38 PM Jun 08, 2018 | |

ಹಿರಿಯ ನಿರ್ದೇಶಕ ಟಿ.ಎನ್‌. ಸೀತಾರಾಂ ಅವರು ಕಲರ್ಸ್‌ ಸೂಪರ್‌ ಚಾನಲ್‌ಗಾಗಿ “ಮಗಳು ಜಾನಕಿ’ ಎಂಬ ಧಾರಾವಾಹಿಯನ್ನು ನಿರ್ದೇಶಿಸುತ್ತಿರುವುದು ಗೊತ್ತೇ ಇದೆ. ಈ ಧಾರಾವಾಹಿ ಮುಂದಿನ ತಿಂಗಳನಿಂದ ಪ್ರಸಾರವಾಗಲಿದ್ದು, ಅದಕ್ಕೂ ಮುನ್ನ ಬುಧವಾರ ಚಿತ್ರೀಕರಣ ಪ್ರಾರಂಭವಾಗಿದೆ.

Advertisement

ಬನಶಂಕರಿಯ ದೇವಸ್ಥಾನವೊಂದರಲ್ಲಿ ನಡೆದ ಸರಳ ಮುಹೂರ್ತದಲ್ಲಿ ವಿಧಾನಸಭೆಯ ಸಭಾಪತಿ ರಮೇಶ್‌ ಕುಮಾರ್‌, ಹಿರಿಯ ಸಾಹಿತಿ ಎಚ್‌.ಎಸ್‌. ವೆಂಕಟೇಶಮೂರ್ತಿ ಸೇರಿದಂತೆ ಹಲವರು ಟಿ.ಎನ್‌. ಸೀತಾರಾಂ ಮತ್ತು “ಮಗಳು ಜಾನಕಿ’ಗೆ ಶುಭ ಹಾರೈಸಿದರು.

ಇದೊಂದು ಭಾವಪ್ರಧಾನ ಕಥೆಯಾಗಲಿದೆ ಎನ್ನುತ್ತಾರೆ ಸೀತಾರಾಂ. “ಈ ಹಿಂದೆ ನನ್ನ ಧಾರಾವಾಹಿಗಳಲ್ಲಿ ರಾಜಕೀಯ, ಕೋರ್ಟ್‌ ದೃಶ್ಯಗಳಿದ್ದವು. ಇದು ಭಾವಪ್ರಧಾನ ಕಥೆಯಾಗಿದ್ದು, ಇಲ್ಲಿ ಕೋರ್ಟ್‌ ಸಹ ಮುಂದಿನ ದಿನಗಳಲ್ಲಿ ಬರಲಿದೆ. ಜಾನಕಿ ಪಾತ್ರವನ್ನು ಚಿಕ್ಕಮಗಳೂರಿನ ಗಾನವಿ ಎನ್ನುವವರು ಮಾಡುತ್ತಿದ್ದಾರೆ.

ಇನ್ನು ನಾನು ಸುಧಾ ಬೆಳವಾಡಿ, ಮಂಡ್ಯ ರವಿ, ಡಿ.ಸಿ. ಕಿಟ್ಟಿ ಸೇರಿದಂತೆ ಹಲವರು ನಟಿಸುತ್ತಿದ್ದೇವೆ. ನನ್ನ ಹಿಂದಿನ ಧಾರಾವಾಹಿಗಳಂತೆ, ಇದಕ್ಕೂ ಹಿರಿಯ ಸಾಹಿತಿಗಳಾದ ಎಚ್‌.ಎಸ್‌. ವೆಂಕಟೇಶಮೂರ್ತಿ ಅವರು ಸಾಹಿತ್ಯ ರಚಿಸಿದ್ದಾರೆ. ಪ್ರವೀಣ್‌ ಡಿ. ರಾವ್‌ ಅವರು ಸಂಗೀತ ಸಂಯೋಜಿಸುತ್ತಿದ್ದಾರೆ’ ಎಂದು ಮಾಹಿತಿ ಕೊಡುತ್ತಾರೆ ಟಿ.ಎನ್‌. ಸೀತಾರಾಂ.

Advertisement

Udayavani is now on Telegram. Click here to join our channel and stay updated with the latest news.

Next