“”ಸ್ವಸ್ಥಸ್ಯ ಸ್ವಾಸ್ಥ್ಯ ವರ್ಧನಂ
ಆತುರಸ್ಯ ರೋಗನುತ್” ಎನ್ನುತ್ತದೆ ಆಯುರ್ವೇದ ಶಾಸ್ತ್ರ. ಅಂದರೆ ಆರೋಗ್ಯವಂತರಲ್ಲಿ ಸ್ವಾಸ್ಥ್ಯವನ್ನು ವರ್ಧಿಸುವುದು ರೋಗಿಗಳಲ್ಲಿ ರೋಗವನ್ನು ನಿವಾರಣೆ ಮಾಡುವುದು. ಈ ಎರಡೂ ಕಾರ್ಯಗಳನ್ನು ನಿರ್ವಹಿಸುವಲ್ಲಿ ನಾವು ನಿತ್ಯದಲ್ಲಿ ಬಳಸುವ ಸಂಬಾರ ದಿನಸುಗಳು ಬಹೂಪಯುಕ್ತ. ಮಳೆಗಾಲದಲ್ಲಿ ಸಂಬಾರ ದಿನಿಸುಗಳನ್ನು ಆಹಾರದಲ್ಲಿ ವಿಶೇಷ ರೀತಿಯಲ್ಲಿ ಬಳಸುವುದರಿಂದ ಆರೋಗ್ಯ ವರ್ಧಿಸಿಕೊಳ್ಳಬಹುದು.
Advertisement
ಇಂಗುಮಳೆಗಾಲದ ಹಬ್ಬಗಳಲ್ಲಿ, ಶ್ರಾವಣ ಮಾಸದ ವಿಶೇಷ ಪೂಜೆಗಳಿಗೆ ಈರುಳ್ಳಿ-ಬೆಳ್ಳುಳ್ಳಿಯ ಬದಲಾಗಿ ಇಂಗು ಉಪಯೋಗಿಸಲಾಗುತ್ತದೆ. ತೀಕ್ಷ್ಣ , ಕಟು ಗುಣವುಳ್ಳ, ಪರಿಮಳಯುಕ್ತ ಇಂಗು, ವಾತಾ-ಕಫಗಳಲ್ಲಿ ಶಮನ ಮಾಡಿ ಮಳೆಗಾಲದಲ್ಲಿ ಜೀರ್ಣದ ಪ್ರಕ್ರಿಯೆ ವರ್ಧಿಸುತ್ತದೆ. ಇಂಗಿನ ಪರಿಮಳಕ್ಕೆ ಕಾರಣ ಅದರಲ್ಲಿರುವ ಸಲ್ಫೆ„ಡ್ ಕಂಪೌಂಡ್‌ಗಳು. ಮಳೆಗಾಲದಲ್ಲಿ ಅಜೀರ್ಣ, ಹೊಟ್ಟೆಯುಬ್ಬರ, ಭೇದಿ ಮೊದಲಾದವು ಉಂಟಾದಾಗ ವಿಶೇಷವಾಗಿ ಮಕ್ಕಳಲ್ಲಿ ಇಂಗನ್ನು ಬಿಸಿನೀರಿನಲ್ಲಿ ಕದಡಿ ಅಥವಾ ಮಜ್ಜಿಗೆಯಲ್ಲಿ ಕದಡಿ ಕುಡಿಸಿದರೆ ಶೀಘ್ರ ಶಮನವಾಗುತ್ತದೆ. ನೆಗಡಿ, ಅಸ್ತಮಾ, ಫ್ಲೂ ಜ್ವರಗಳಿಗೂ ಇಂಗು ಉತ್ತಮ ಮನೆಮದ್ದು.
ರುಚಿ ಪರಿಮಳ ಹೆಚ್ಚಿಸುವುದಲ್ಲದೆ ಖಾದ್ಯಗಳು ಸುಲಭವಾಗಿ ಚಯಾಪಚಯ ಕ್ರಿಯೆಯಲ್ಲಿ ಒಂದಾಗುವಂತೆ ಮಾಡುತ್ತದೆ ಇಂಗು.
Related Articles
.ಕಡಲೆಹಿಟ್ಟು , ಬಟಾಣಿ ಹಿಟ್ಟುಗಳ ಮಿಶ್ರಣಕ್ಕೆ ಸ್ವಲ್ಪ ಇಂಗಿನ ಹುಡಿ ಬೆರೆಸಿ ಮುಖಕ್ಕೆ ಲೇಪಿಸಬೇಕು. ಇದು ಮುಖವನ್ನು ಬೆಳ್ಳಗೆ ಮಾಡುತ್ತದೆ, ಜೊತೆಗೆ ಮೊಗದ ನೆರಿಗೆಗಳ ನಿವಾರಣೆಗೆ ಸಹಾಯಕ. ಕಪ್ಪು ಬಣ್ಣಕ್ಕೆ ಕಾರಣವಾಗಿರುವ ಮೆಲಾನಿನ್ ಸ್ರಾವ ಹೆಚ್ಚಿಸುವ ಟೈರೊಸಿನ್ ಉತ್ಪತ್ತಿ ಕಡಿಮೆ ಮಾಡುವುದರಿಂದ ಕಲೆಗಳನ್ನು ನಿವಾರಣೆ ಮಾಡಿ, ಮುಖವನ್ನು ಶುಭ್ರಗೊಳಿಸುತ್ತದೆ.
Advertisement
ಹೀಗೆ ಸೌಂದರ್ಯವರ್ಧಕವಾಗಿಯೂ ಇಂಗು ಉಪಯುಕ್ತ.
ಇಂಗಿನ ಹೇರ್ಪ್ಯಾಕ್ಇಂಗಿನ ಹುಡಿಯನ್ನು ಮೊಸರಿನೊಂದಿಗೆ ಬೆರೆಸಿ ಕೂದಲಿಗೆ ಲೇಪಿಸಿ 20 ನಿಮಿಷದ ಬಳಿಕ ತೊಳೆದರೆ ಹೊಟ್ಟು ನಿವಾರಣೆಯಾಗಿ ಕೂದಲು ಉದುರುವುದು ಶಮನವಾಗುತ್ತದೆ. ನೆರಿಗೆನಿವಾರಕ ಇಂಗಿನ ಫೇಸ್‌ಮಾಸ್ಕ್
ಒಂದು ಬೌಲ್‌ನಲ್ಲಿ ಮುಲ್ತಾನಿ ಮಿಟ್ಟಿ , ಜೇನು ಹಾಗೂ ರೋಸ್‌ವಾಟರ್ ಬೆರೆಸಿ ಪೇಸ್ಟ್ ತಯಾರಿಸಬೇಕು. ಇದಕ್ಕೆ 3 ಚಿಟಿಕೆ ಇಂಗು ಬೆರೆಸಿ ಮುಖಕ್ಕೆ ಲೇಪಿಸಿ 10-15 ನಿಮಿಷದ ಬಳಿಕ ತೊಳೆದರೆ ನೆರಿಗೆ ನಿವಾರಕ ಹಾಗೂ ಚರ್ಮವನ್ನು ಬಿಳಿಯಾಗಿಸುತ್ತದೆ. ಇಂಗಿನ ಮಜ್ಜಿಗೆ
ಮಳೆಗಾಲದಲ್ಲಿ ನಿತ್ಯವೂ ಮಜ್ಜಿಗೆಯಲ್ಲಿ ಇಂಗು ಕದಡಿ ಕಲ್ಲುಪ್ಪು , ಕೊತ್ತಂಬರಿಸೊಪ್ಪು ಹೆಚ್ಚಿದ್ದು ಬೆರೆಸಿ ಸೇವಿಸಿದರೆ ಪಚನಕ್ರಿಯೆಗೆ ಉತ್ತಮ. ವಾತಾಕಫ ರೋಗನಿವಾರಕ. ಮಳೆಗಾಲದಲ್ಲಿ ಮನೆಯಲ್ಲಿರಲಿ ಇಂಗು! ಡಾ. ಅನುರಾಧಾ ಕಾಮತ್