Advertisement
ಆ ಪ್ರಯುಕ್ತ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಶಿಲುಬೆಯ ಹಾದಿ (ವೆ ಆಫ್ ದಿ ಕ್ರಾಸ್), ಶಿಲುಬೆಯ ಆರಾಧನೆ ಮತ್ತು ಇತರ ಕಾರ್ಯಕ್ರಮಗಳು ನಡೆಯಲಿವೆ. ಕೋವಿಡ್ ಸೋಂಕು ಭೀತಿ ಹಿನ್ನೆಲೆಯಲ್ಲಿ ಸರಕಾರದ ನಿಯಮಗಳನ್ನು ಪಾಲಿಸಿ ಈ ಪವಿತ್ರ ಸಪ್ತಾಹದ ಎಲ್ಲ ದಿನಗಳ (ಗರಿಗಳ ರವಿವಾರ, ಯೇಸು ಕ್ರಿಸ್ತರ ಕೊನೆಯ ಭೋಜನದ ಸ್ಮರಣೆಯ ದಿನ- ಪವಿತ್ರ ಗುರುವಾರ), ಶುಭ ಶುಕ್ರವಾರ, ಈಸ್ಟರ್ ಜಾಗರಣೆಯ ಶನಿವಾರ, ಈಸ್ಟರ್ ಆಚರಣೆಯ ರವಿವಾರ) ಕಾರ್ಯಕ್ರಮಗಳನ್ನು ಸರಳ ರೀತಿಯಲ್ಲಿ ನಡೆಸಲಾಗುತ್ತದೆ ಎಂದು ಮಂಗಳೂರು ಬಿಷಪ್ ವಂ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ತಿಳಿಸಿದ್ದಾರೆ.
Related Articles
Advertisement
ಯೇಸು ಕ್ರಿಸ್ತರಿಗೆ ಶಿಲುಬೆಯ ಮರಣ ಶಿಕ್ಷೆ ವಿಧಿಸಿದಲ್ಲಿಂದ ಮೊದಲ್ಗೊಂಡು ಅವರು ಶಿಲುಬೆಯಲ್ಲಿ ಕೊನೆಯುಸಿರೆಳೆದು, ಅವರ ಶರೀರವನ್ನು ಸಮಾಧಿ ಮಾಡುವಲ್ಲಿ ವರೆಗಿನ 14 ಪ್ರಮುಖ ಘಟನಾವಳಿಗೆ ಸಂಬಂಧಿಸಿದ “ಶಿಲುಬೆಯ ಹಾದಿ’ (ವೇ ಆಫ್ ದಿ ಕ್ರಾಸ್) ಈ ದಿನದ ವೈಶಿಷ್ಟÂಗಳಲ್ಲೊಂದು. ಚರ್ಚ್ ಅಥವಾ ಚರ್ಚ್ ಆವರಣದಲ್ಲಿ ಇದನ್ನು ನಡೆಸುವ ಮೂಲಕ ಯೇಸು ಕ್ರಿಸ್ತರು ಅನುಭವಿಸಿದ ಯಾತನೆಯನ್ನು ಕ್ರೈಸ್ತರು ಸ್ಮರಿಸಿ ಧ್ಯಾನಿಸುತ್ತಾರೆ. ಈ ಸಂದರ್ಭ ವಿವಿಧ ಕಷ್ಟ ಸಂಕಷ್ಟಗಳಲ್ಲಿರುವ ಜನರಿಗಾಗಿ ಮತ್ತು ಸಮಗ್ರ ಲೋಕ ಕಲ್ಯಾಣಕ್ಕಾಗಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.
ಚರ್ಚ್‌ಗಳಲ್ಲಿ ಬೆಳಗ್ಗೆ ಅಥವಾ ಮಧ್ಯಾಹ್ನ ಶಿಲುಬೆಯ ಹಾದಿ ಹಾಗೂ ಸಂಜೆ ವೇಳೆ ಶುಭ ಶುಕ್ರವಾರದ ಕಾರ್ಯಕ್ರಮಗಳು ನಡೆಯುತ್ತವೆ. ಈ ಸಂದರ್ಭ ಪವಿತ್ರ ಗ್ರಂಥ ಬೈಬಲ್‌ನ ವಾಚನ ಮತ್ತು ಮನನ, ಪ್ರವಚನ, ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ, ಶಿಲುಬೆಯ ಆರಾಧನೆ ಇತ್ಯಾದಿಗಳನ್ನು ನಡೆಸಲಾಗುತ್ತದೆ.
ಜನರು ಕೋವಿಡ್ ದಿಂದ ತತ್ತರಿಸು ತ್ತಿರುವ ಈ ದಿನಗಳಲ್ಲಿ ಶುಭ ಶುಕ್ರವಾರ ದಿನ ನಾವು ಯೇಸು ಕ್ರಿಸ್ತರ ಶಿಲುಬೆಯ ಮರಣವನ್ನು ಸಾರುತ್ತೇವೆ. ಮರಣವನ್ನು ಜಯಿಸಿದ ಯೇಸು ಕ್ರಿಸ್ತರು ನಮ್ಮೆಲ್ಲರಿಗೆ ಹೊಸ ಚೈತನ್ಯವನ್ನು ತುಂಬಲಿ. -ವಂ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ,, ಬಿಷಪ್ ಮಂಗಳೂರು