Advertisement

ವಸತಿ ಶಾಲೆಗಳಲ್ಲೂ ಉತ್ತಮ ಶಿಕ್ಷಣ ದೊರೆಯಲಿದೆ

03:40 PM Nov 27, 2017 | |

ಅರಸೀಕೆರೆ: ಉನ್ನತ ವಸತಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ ಎಂಬ ಭಾವನೆ ಎಲ್ಲರದ್ದು, ಅಲ್ಲಿಯೂ ಕೆಲ ವಿದ್ಯಾರ್ಥಿಗಳು ದಾರಿತಪ್ಪಿರುವ ನಿದರ್ಶನಗಳು ಇವೆ, ಇದಕ್ಕೆ ಪ್ರಾಥಮಿಕ ಶಿಕ್ಷಣದೊಂದಿಗೆ ನೈತಿಕತೆ ಮತ್ತು ಸಂಸ್ಕೃತಿ
ದೊರೆತಾಗ ಮಾತ್ರ ಅವರ ಭವಿಷ್ಯ ಉಜ್ವಲವಾಗಿ ರೂಪಗೊಳ್ಳಲು ಸಾಧ್ಯ ಎಂದು ಶ್ರೀಚಂದ್ರಶೇಖರ ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಅಶೋಕ್‌ ಹಾರನಹಳ್ಳಿ ಹೇಳಿದರು.

Advertisement

ನಗರದ ಹಾರನಹಳ್ಳಿ ರಾಮಸ್ವಾಮಿ ಸಮುದಾಯ ಭವನದಲ್ಲಿ ಶ್ರೀಚಂದ್ರಶೇಖರ ಭಾರತಿ ತಾಂತ್ರಿಕ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಪದವಿ ಪ್ರದಾನ ಹಾಗೂ ಶ್ರೀಚಂದ್ರಶೇಖರ ಭಾರತಿ ಇಂಟರ್‌ ನ್ಯಾಷನಲ್‌ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಕಾನ್ವೆಂಟ್‌ನಲ್ಲಿ ಓದಬೇಕು ಎನ್ನುವ ಅಭಿಲಾಷೆ ಹೊಂದಿರುತ್ತಾರೆ ಮೊದಲು ಅದನ್ನು ಬಿಡಬೇಕು ಎಂದರು.

ತಾವು ಶ್ರೀಚಂದ್ರಶೇಖರ ಭಾರತಿ ಇಂಟರ್‌ ನ್ಯಾಷನಲ್‌ ಶಾಲೆಯನ್ನು ವಾಣಿಜ್ಯ ದೃಷ್ಟಿಯಿಂದ ಪ್ರಾರಂಭಿಸಿಲ್ಲ. ಇಲ್ಲಿ ನಮ್ಮ ಸಂಸ್ಕೃತಿ ಹಾಗೂ ನೈತಿ ಕತೆ ಮತ್ತು ಗುಣಮಟ್ಟದ ಬೋಧನೆಯನ್ನು ನೀಡುವ ಸೇವಾಭಾವನೆಯಲ್ಲಿ ನಡೆಸಲಾಗುತ್ತಿದೆ. ಇನ್ನೂ ಹೆಚ್ಚಿನ ಇಂಗ್ಲಿಷ್‌ ಪ್ರಬುದ್ಧತೆಯನ್ನು ಮಕ್ಕಳಿಗೆ ಕಲಿಸುವ ಉದ್ದೇಶ ಈ ಸಂಸ್ಥೆಯದಾಗಿದೆ.

ಇದಕ್ಕಾಗಿ ಬೆಂಗಳೂರಿನ ಹಿಪ್ರೋಕ್ಯಾಂಪಸ್‌ ಮುಖ್ಯಸ್ಥರೊಂದಿಗೆ ಮಾತನಾಡಿದ್ದೇನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ನಡೆಸುತ್ತಿರುವ ಶಾಲೆಗಳಲ್ಲಿ ಬೋಧನೆ ಉತ್ತಮವಾಗಿರುವ ಕಾರಣ ಅದನ್ನು ಮನಗಂಡು ಮುಂದಿನ ಶೈಕ್ಷಣಿಕ ವರ್ಷದಿಂದ ಈ ಶಾಲೆಯ ಬೋಧನಾ ಹೊಣೆ ಅವರಿಗೆ ವಹಿಸಲಿದ್ದೇವೆ ಎಂದು ತಿಳಿಸಿದರು.

ಬೇಲೂರಿನ ಶ್ರೀವತ್ಸವಟಿ ಮಾತನಾಡಿ, ಕನ್ನಡ ಭಾಷೆಗೆ ಭವ್ಯವಾದ ಇತಿಹಾಸವಿದೆ, ಮಾತೃ ಭಾಷೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಿ ನಂತರ ಮರಾಠಿ ಅದರಲ್ಲಿಯೂ ಕನ್ನಡ ಅಡಗಿದೆ, ಆದರೆ ಮೂಲ ಕನ್ನಡದ ಲಿಪಿ ಬದಲಾಗುತ್ತಾ ಬಂದಿದೆ, ಪುರಾತನ ಕಾಲದಲ್ಲಿಯೇ ಶಾಲೆಗಳು ಎಂಬುದಿತ್ತು, ಇವು ವಸತಿ ಶಾಲೆಗಳಾಗಿದ್ದವು, ಅರಸೀಕೆರೆ ತಾಲೂಕಿನ
ಕರುಗುಂದ ಹಾಗೂ ಮುರುಂಡಿ ಗ್ರಾಮಗಳಲ್ಲಿ ಇಂತಹ ಶಾಲೆಗಳು ಇದ್ದವು ಎಂಬುದನ್ನು ಇತಿಹಾಸ ಸಾರಿ ಹೇಳುತ್ತಿದೆ. ಈ ಶಾಲೆಗಳಲ್ಲಿ ಬೋಧಿಸುವ ಶಿಕ್ಷರಿಗೆ ವರ್ಷಕ್ಕೆ 120 ಗ್ರಾಂ ಚಿನ್ನವನ್ನು ವರಹ ರೂಪದಲ್ಲಿ ನೀಡಲಾಗುತ್ತಿತ್ತು
ಎಂಬುದನ್ನು ಸ್ಮರಿಸಿದರು. 

Advertisement

ಶ್ರೀಚಂದ್ರಶೇಖರ ಭಾರತಿ ವಿದ್ಯಾಸಂಸ್ಥೆ ದತ್ತಿ ಅಧ್ಯಕ್ಷ ಟಿ.ಆರ್‌.ನಾಗರಾಜ್‌ ಮಾತನಾಡಿ, ಈ ವಿದ್ಯಾಸಂಸ್ಥೆ ಎಲ್ಲರ ಸಹಕಾರ ದಿಂದ ಬೆಳೆಯುತ್ತಿದೆ, ಇದಕ್ಕೆ ಮೂಲಪುರುಷರು ಸಂಸ್ಥಾಪಕರಾದ ಹಾರನಹಳ್ಳಿ ರಾಮಸ್ವಾಮಿಯವರು
ಅವರ ವಿಶೇಷ ಕಾಳಜಿಯಿಂದಾಗಿ ಇಂದು ಸಾವಿರಾರು ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ ಎಂದರು.

ಬೆಂಗಳೂರಿನ ಹಿಪ್ರೋಕ್ಯಾಂಪಸ್‌ ಸಂಸ್ಥೆಯ ರಂಜನಿ ಮತ್ತು ಅಮಿತಾಪಾಲ್‌ ವಿದ್ಯಾರ್ಥಿಗಳ ತಾಯಂದಿರೊಂದಿಗೆ ಸಂವಾದ ನಡೆಸಿದರು. ಕಾರ್ಯದರ್ಶಿ ನಾರಾಯಣ್‌, ಕೆ.ವಿ. ಹಿರಿಯಣ್ಣಯ್ಯ, ನಿರ್ದೇಶಕ ಹಾಗೂ ಮಲ್ನಾಡ್‌ ಎಂಜಿಯರಿಂಗ್‌ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಡಿ.ವಿ.ಗಿರೀಶ್‌, ತಾಂತ್ರಿಕ ವಿದ್ಯಾಸಂಸ್ಥೆ ಪ್ರಾಶುಪಾಲ ಆರ್‌. ಸುರೇಶ್‌, ಇಂಟರ್‌ ನ್ಯಾಷನಲ್‌  ಶಾಲೆಯ ಪ್ರಾಂಶುಪಾಲ ಆಶಾ, ರಾಮಚಂದ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next