Advertisement

ಸಕಾರಣದಿಂದಲೇ ಕಾರ್ತಿಗೆ ಲುಕ್‌ಔಟ್‌ ನೋಟಿಸ್‌

07:45 AM Sep 02, 2017 | |

ಹೊಸದಿಲ್ಲಿ:  ಭ್ರಷ್ಟಾಚಾರ ಪ್ರಕರಣದಲ್ಲಿ ಕೇಂದ್ರದ ಮಾಜಿ ಸಚಿವ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ವಿರುದ್ಧ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡುವುದಕ್ಕೆ ಉತ್ತಮ ಮತ್ತು ಸಮರ್ಪಕ ಕಾರಣಗಳಿವೆ ಎಂದು ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ಸಿಬಿಐ ಅರಿಕೆ ಮಾಡಿದೆ.

Advertisement

ಪ್ರಕರಣ ಸಂಬಂಧದ ಎಲ್ಲ ದಾಖಲೆಗಳನ್ನು ಸಿಬಿಐ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಗೆ ಸಲ್ಲಿಸಿದ್ದು, ಬಳಿಕ ಲುಕ್‌ಔಟ್‌ಗೆ ಸಂಬಂಧಿಸಿ ಸಿಜೆಐ ದೀಪಕ್‌ ಮಿಶ್ರಾ ನೇತೃತ್ವದ ಪೀಠವು ಸಿಬಿಐ ಅಭಿಪ್ರಾಯ ಕೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ಸಿಬಿಐ, “ಇದು ಸರಳ ಅಥವಾ ಒಂದೇ ಕಂಪನಿಗೆ ಸಂಬಂಧಿಸಿದ ಪ್ರಕರಣವಲ್ಲ. ಇಲ್ಲಿ ಹಲವು ಕಂಪನಿಗಳು ಭಾಗಿಯಾಗಿದ್ದು, ವಿದೇಶಗಳಲ್ಲಿನ ಆಸ್ತಿಪಾಸ್ತಿ, ಖಾತೆಗಳೂ ಸೇರಿವೆ. ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಲು ಸಮರ್ಥ ಕಾರಣಗಳಿವೆ,’ ಎಂದಿದೆ. ಸೆ.11ರಂದು ಮುಂದಿನ ವಿಚಾರಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next