Advertisement

ಬ್ಯಾಡ್ಮಿಂಟನ್‌ಗೆ ಉತ್ತಮ ಅವಕಾಶ: ಚಿರಾಗ್‌ ಶೆಟ್ಟಿ 

10:46 PM Feb 12, 2022 | Team Udayavani |

ಮಂಗಳೂರು: ಬ್ಯಾಡ್ಮಿಂಟನ್‌ ಕ್ರೀಡೆಯು ಕ್ರಿಕೆಟ್‌ ಅನಂತರದ ಸ್ಥಾನದಲ್ಲಿದ್ದು, ಭಾರತ ಸರಕಾರ ಕೂಡ ಇದಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದು ಅಂತಾರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್‌ ಪಟು, ಕರ್ನಾಟಕ ಕರಾವಳಿಯ ಮೂಲದ ಚಿರಾಗ್‌ ಸಿ. ಶೆಟ್ಟಿ  ಹೇಳಿದರು.

Advertisement

ಪಡುಬಿದ್ರೆ ಸಮೀಪದ ಎರ್ಮಾಳು ಮೂಲದವ‌ರಾದ ಚಿರಾಗ್‌ ಪ್ರಸ್ತುತ  ಮಹಾರಾಷ್ಟ್ರದಲ್ಲಿ ವಾಸ್ತವ್ಯವಿದ್ದು, 7 ವರ್ಷ ಬಳಿಕ ಊರಿಗೆ ಆಗಮಿಸಿದ್ದರು. ಮಂಗಳೂರಿನ ಗೋಲ್ಡನ್‌ ಶಟಲ್‌ ಅಕಾಡೆಮಿಯಲ್ಲಿ ಶಟ್ಲರ್‌ಗಳ ಜತೆ ಸಂವಾದ ನಡೆಸಿದರು. ಗೋಲ್ಡನ್‌ ಶಟಲ್‌ನ ಮುಖ್ಯಸ್ಥ ಜ್ಞಾನೇಶ್‌, ಪ್ರಾಂಜಲ್‌ ಘಾಟೆ ಮತ್ತಿತರರು ಇದ್ದರು. ಬಳಿಕ ಚಿರಾಗ್‌ ಸುದ್ದಿಗಾರರ ಜತೆ ಮಾತನಾಡಿದರು.

“ಬ್ಯಾಡ್ಮಿಂಟನ್‌ ತರಬೇತಿ ಪಡೆಯಲು ಉತ್ತಮ ಮೂಲ ಸೌಲಭ್ಯಗಳಿವೆ. ಗೋ-ನ್ಪೋರ್ಟ್ಸ್  ಫೌಂಡೇಶನ್‌, ಒಲಿಂಪಿಕ್‌ ಗೋಲ್ಡ್ ಕ್ವೆಸ್ಟ್‌ನಂತಹ ಸಂಸ್ಥೆಗಳು ಉದಯೋನ್ಮುಖ ಆಟಗಾರರಿಗೆ ತರಬೇತಿ ನೀಡುತ್ತಿವೆ’ ಎಂದರು.

“7 ವರ್ಷಗಳ ಹಿಂದೆ ನಾನು  ಜೂನಿಯರ್‌ ಲೆವೆಲ್‌ನಲ್ಲಿ ಇದ್ದೆ. ಈಗ ಬಹಳಷ್ಟು ಬದಲಾವಣೆಗಳಾಗಿವೆ. ಬ್ಯಾಡ್ಮಿಂಟನ್‌ ಕೋರ್ಟ್‌ಗಳ ಸಂಖ್ಯೆ 15 ಪಟ್ಟು ಹೆಚ್ಚಾಗಿವೆ ಎಂದರು. ಮುಂದಿನ ಒಲಿಂಪಿಕ್ಸ್‌ಗೂ ಮೊದಲು ಏಶ್ಯಾಡ್‌ ಹಾಗೂ ಕಾಮನ್‌ವೆಲ್ತ್‌ ಗೇಮ್ಸ್‌ ಗೆ ಅಭ್ಯಾಸ ಮಾಡುವುದಕ್ಕೆ ಸದ್ಯದ ಆದ್ಯತೆ. ಜತೆಗೆ 2024ರ ಒಲಿಂಪಿಕ್ಸ್‌ ಪದಕದ ಗುರಿಯೂ ಇದೆ’ ಎಂದು ಚಿರಾಗ್‌ ಹೇಳಿದರು.

ನನ್ನ ಡಬಲ್ಸ್‌ ಜತೆಗಾರ ಆಂಧ್ರದ ಸಾತ್ವಿಕ್‌ರೆಡ್ಡಿ ಜತೆ ಸಂವಹನ ಈಗ ಉತ್ತಮಗೊಂಡಿದೆ. ನಮಗೆ ಮೊದಲು ಹೊಂದಾಣಿಕೆ ಸಮಸ್ಯೆ ಇತ್ತು. ನಾವಿಬ್ಬರೂ ಬ್ಯಾಕ್‌ ಕೋರ್ಟ್‌ ಆಟಗಾರರು. ಬಳಿಕ ಕೋಚ್‌ ನನಗೆ ಫ್ರಂಟ್‌ ಕೋರ್ಟ್‌ ಆಡಲು ಹೇಳಿದರು, ಈಗ ನಾನು ಅದರಲ್ಲೇ ಸೆಟ್‌ ಆಗಿದ್ದೇನೆ. ನಮಗೆ ಭಾಷೆಯ ಸಮಸ್ಯೆಯೂ ಇತ್ತು. ಈಗ ಅದೆಲ್ಲ ನಿವಾರಣೆಯಾಗಿ ಉತ್ತಮ ಒಡನಾಡಿಗಳಾಗಿದ್ದೇವೆ ಎಂದು ಚಿರಾಗ್‌ ಹೇಳಿದರು.ಮಂಗಳೂರಿನಲ್ಲಿ ನನಗೆ ಗಡ್‌ಬಡ್‌ ಇಷ್ಟ. ತರಬೇತಿಯಲ್ಲಿ ಹೆಚ್ಚು ಐಸ್‌ಕ್ರೀಂ ತಿನ್ನುವಂತಿಲ್ಲ, ಆದರೆ ಇಲ್ಲಿ ಬಂದ ನೆನಪಿಗೆ ತಿಂದಿದ್ದೇನೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next