Advertisement

ರೆಸ್ಟೋರೆಂಟಿನಲ್ಲಿ ವ್ಯಾಪಾರ ಚೆನ್ನಾಗಿದ್ದರೂ ಮನಃಶಾಂತಿ ಇರಲಿಲ್ಲ ಏಕೆ?

11:40 AM Jun 12, 2017 | Team Udayavani |

ಮೂರು ವರ್ಷದ ಹಿಂದಿನ ಮಾತು. ಒಂದು ರೆಸ್ಟೋರೆಂಟಿನ ವಾಸ್ತು ಪರಿಶೀಲನೆಗಾಗಿ ಹೋಗಬೇಕಾಗಿ ಬಂತು. ಅವರ ನೋವು ವಿಚಿತ್ರವಾಗಿತ್ತು. ವ್ಯಾಪಾರವಿದೆ. ಲಾಭದ ಪ್ರಮಾಣ ಗಮನಿಸಿದರೆ ಅದೂ ಒಳ್ಳೆಯ ರೀತಿಯಲ್ಲೇ ಇದೆ. ಒಟ್ಟಿನಲ್ಲಿ ಹಣದ ಸಮಸ್ಯೆ ಏನೂ ಇಲ್ಲ. ಆದರೆ ಮನೆಯಲ್ಲಿ ಸುಖವಿಲ್ಲ. ರೆಸ್ಟೋರೆಂಟಿನಲ್ಲೂ ಮನಸ್ಸಿಗೆ ಶಾಂತಿ ಇಲ್ಲ.
ಬರುತ್ತಿರುವ ಲಕ್ಷಿಯನ್ನು ಕಂಡು ಸಂತೋಷವಿಲ್ಲ. ಲವಲವಿಕೆ ಇಲ್ಲ ಎಂದರೆ ಹೇಗೆ? ಸ್ವಲ್ಪ ವಾಸ್ತು ನೋಡಬೇಕಿತ್ತು ಎಂದು ಅವರು ನನ್ನನ್ನು ಕೇಳಿದರು. ಅವರ ಜನ್ಮಕುಂಡಲಿಯಲ್ಲಿ ಧನಯೋಗವಿತ್ತು. ಸುಖಭಾವಕ್ಕೆ ತೂಕವೇನೂ ಕುಸಿಯುವ ಚಿಹ್ನೆಗಳಿರಲಿಲ್ಲ.

Advertisement

ಇವರ ಜನ್ಮಕುಂಡಲಿಗಳನ್ನು ಗಮನಿಸಿದ ಮೇಲೆ ರೆಸ್ಟೋರೆಂಟಿನ ವಾಸ್ತು ಗಮನಿಸಲು ಹೋದೆ. ಅಲ್ಲಿ ಶೌಚಾಲಯದೇ ಪ್ರಮುಖ ದೋಷವಾಗಿತ್ತು. ವಾಸ್ತುನ ಪ್ರಕಾರವೇ ನಿಯಮಗಳನ್ನು ಅನುಸರಿಸಿ ಅಡುಗೆ ಮನೆ, ಶೌಚಾಲಯ, ಗಲ್ಲಾಪೆಟ್ಟಿಗೆ ಇತ್ಯಾದಿ ಸೂಕ್ತವಾದ ರೀತಿಯಲ್ಲೇ (ಪಶ್ಚಿಮ ಭಾಗದಲ್ಲಿ ಸುಮಾರು ನಿಷ#ಲ ಪರಿಮಾಣದ ಅಂತರದಲ್ಲಿ
ಪ್ರವೇಶ ದ್ವಾರವನ್ನು ಕಟ್ಟಿಸಿದ್ದರಿಂದಾಗಿ ಯಜಮಾನನಿಗೆ ಇದು ಮನಃ ಶಾಂತಿಯನ್ನು ಕೊಡಲಾರದು. ಎಂಬುದಾಗಿ ವಾಸ್ತು ಉಲ್ಲೇಖೀಸುತ್ತದೆ) ಇದ್ದರೂ ಪ್ರವೇಶ ದ್ವಾರ ಬಹಳ ಮಟ್ಟಿಗಿನ ಕ್ಷೀಣತೆಯನ್ನು ಪಡೆದಿತ್ತು. ಈ ರೆಸ್ಟೋರೆಂಟಿನ ಪಕ್ಕದಲ್ಲೇ ಇನ್ನೊಂದು ರೆಸ್ಟೋರೆಂಟಿನಲ್ಲಿ ಕೂಡಾ ಪ್ರವೇಶದ್ವಾರವಿದ್ದೇ ಆದ ವಿಷಯ ಸಂಯೋಜನೆ ಒಗ್ಗೂಡಿದ್ದರಿಂದ
ಇದೇ ಪರಿಣಾಮವನ್ನು ಒದಗಿಸಿತ್ತು. ಇಷ್ಟೇ ಅಲ್ಲ, ಉತ್ತರವನ್ನು ದೃಷ್ಟಿಸುತ್ತಿದ್ದ ಆ ರೆಸ್ಟೋರೆಂಟಿನ ಪ್ರವೇಶದ್ವಾರ ವ್ಯತಿರಿಕ್ತ ಪರಿಣಾಮಗಳು ಶೌಚಾಲಯದ ಅಸಮತೋಲನದಿಂದಲೇ ಆಗಿತ್ತು. ಶ್ರೀ ಶಕ್ತಿ ಪರಾಶಕ್ತಿಗಳು
ಸಾಂದ್ರೀಕರಣಗೊಳ್ಳಲು ಅವಕಾಶಗಳೇ ಇರಲಿಲ್ಲ. ಒಟ್ಟಿನಲ್ಲಿ ಎರಡೂ ರೆಸ್ಟೋರೆಂಟಿನ ಮಾಲೀಕರು ವಿವಿಧ ಕಾರಣಗಳಿಗಾಗಿ ತಂತಮ್ಮ ದಾರುಣತೆ ಅನುಭವಿಸುತ್ತಿದ್ದರು. ಮೊದಲ ರೆಸ್ಟೋರೆಂಟಿನ ಮಾಲೀಕರು ಗಳಿಕೆ ಇದ್ದೂ ಒಳಿತುಗಳ ಮುಖಾಂತರವಾದ ಸುಖದ ವಿಚಾರದಲ್ಲಿ ಯಾತನೆ ಅನುಭವಿಸುತ್ತಲೇ ಇದ್ದರು.

ಆ ರೆಸ್ಟೋರೆಂಟಿನ ತೊಂದರೆಗಳೇನು?
ಪ್ರವೇಶ ದ್ವಾರವನ್ನು ವಾಯುವ್ಯ ಮೂಲೆಗೆ ಇನ್ನಿಷ್ಟು ಜರುಗಿಸಿ, ಉತ್ತಮ ಫ್ರೆàಮಿನಲ್ಲಿ ಕಟ್ಟಿಸಿ ಸುಮಾರು 2×3 ಅಳತೆಯ ಗಣೇಶ, ಲಕ್ಷಿಯ ಸುಭದ್ರ ಚಿತ್ರವನ್ನು ತತ್ಪರ ಶಕ್ತಿ ಒಗ್ಗೂಡುವ ಬೆಳಕಿನಲ್ಲಿ ಇರಿಸಬೇಕಿತ್ತು. ಹೀಗೆ ಮಾಡಿದ್ದರೆ ಅನೇಕ ರೀತಿಯ ಉತ್ತಮ ಫ‌ಲಿತಾಂಶಗಳು ಮಾನಸಿಕ ಶಾಂತಿಯ ನಿಟ್ಟಿನಲ್ಲಿ ಪಡೆಯಲು ಅನುಕೂಲವಾಗುತ್ತಿತ್ತು. ಆದರೆ
ಬೇಕಿರದ ಯಾವುದೋ ಕಾರಣಕ್ಕಾಗಿ ಸ್ಥಳೀಯ ಸ್ವಾಮೀಜಿಗಳ ಫೋಟೋ ಒಂದನ್ನು ತೂಗು ಹಾಕಿದ್ದರು. ಸ್ವಾಮೀಜಿಗಳ ಕುರಿತಾದ ಭಕ್ತಿಭಾವ ಬೇಡವೆಂದಲ್ಲ. ಆದರೆ ತೊಂದರೆಗಳ ಪರಿಹಾರಕ್ಕೆ ಸ್ವಾಮೀಜಿಯವರ ಫೋಟೋ ಸೂಕ್ತವಾಗುವುದಿಲ್ಲ. ನಿಗೂಢ ಶಕ್ತಿಗಳು ಈಶಾನ್ಯ ಕ್ಲಿಂ ಬೀಜ ಶಕ್ತಿಯಿಂದ ಉತ್ಪನ್ನಗೊಳ್ಳಬೇಕಾದ ಅನಿವಾರ್ಯತೆ ರೆಸ್ಟೋರೆಂಟಿಗೆ (ಅನಿಷ್ಟ ತೊಳೆದುಕೊಳ್ಳಲು ಅಗತ್ಯವಿರುವಾಗ) ಯಾವುದೋ ಫೋಟೋ ಪ್ರಯೋಜನವಾಗುವುದಿಲ್ಲ. ಇದನ್ನು ಮಾಲೀಕರಿಗೆ ತಿಳಿಸಿ ಹೇಳಿದೆ. ಇನ್ನೊಂದು ತೊಂದರೆ ನೈಋತ್ಯ ದಿಕ್ಕಿನಲ್ಲಿನ ಶೌಚಾಲಯ ಹದಗೆಟ್ಟಿತ್ತು.
ಗಿರಾಕಿಗಳು ತಿಂಡಿ, ಕಾμ ಮುಗಿಸಿದ ನಂತರ ಶೌಚಾಲಯಗಳನ್ನು ನೋಡುತ್ತ ಕೈ ತೊಳೆಯುವ ಸ್ಥಿತಿ ಇರಬಾರದು. ಇದರ ಪರಿಣಾಮವನ್ನು ಮಾಲೀಕರಿಗೆ ತಿಳಿಸಿ ಹೇಳಿದ್ದೆ. ಶೌಚಾಲಯದ ಬಾಗಿಲು, ಒಳಗಿನ ಸ್ವತ್ಛತೆ, ನೀರು ತುಂಬಿ ಗಲೀಜಾದ ಜಾಗ, ಸೋರುವ ಟ್ಯಾಪ್‌, ನೀಸು ಕಾಲಿಯಾಗಿದೆ ಎಂದು ಬಿಂದಿಗೆಯಲ್ಲಿ ಕೈತೊಳೆಯಲು ಇಡುವ ನೀರು,
ಉತ್ತಮವಾಗಿರದ ಬೆಳಕು, ಇತ್ಯಾದಿ ಗಳಿಸಿದ ಹಣಕ್ಕೆ ಲಕ್ಷಿದೇವಿಯು ಫ‌ಲವತ್ತಾದ ಶಕ್ತಿ ಒದಗಿಸುವುದಿಲ್ಲ. ಇದನ್ನು ತಿಳಿಸಿ ಹೇಳಿದ್ದೆ. ಈಗ ಇವನ್ನೆಲ್ಲಾ ಸರಿಪಡಿಸಿಕೊಂಡು ಮಾಲೀಕರು ಹಾರ್ದಿಕವಾಗಿ ನಗುವ ಶಕ್ತಿ ಸಂಪಾದಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next