Advertisement

ಫಲಾನುಭವಿಗಳ ಆಯ್ಕೆಯಲ್ಲಿ ಗೋಲ್‌ಮಾಲ್‌

03:30 PM Dec 27, 2019 | Team Udayavani |

ಶಿಗ್ಗಾವಿ: ಅತಿವೃಷ್ಟಿಯಲ್ಲಿ ಮನೆ ಕಳೆದುಕೊಂಡ ಫಲಾನುಭವಿಗಳ ಆಯ್ಕೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಮನೆ ಬಿದ್ದ ಫಲಾನುಭವಿಗಳ ಬದಲಾಗಿ ಅನಧಿಕೃತ ಕೆಲಸಗಳೇ ಹೆಚ್ಚಾಗಿ ನಡೆದಿವೆ. ಪರಿಶೀಲನೆಯಲ್ಲಿ ಬೇಕಾಬಿಟ್ಟಿ ಹಾನಿಯ ಗ್ರೇಡ್‌ ಹಾಕಲಾಗಿದೆ ಎಂದು ಆಯ್ಕೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಪಸ್ವರ ಕೇಳಿಬರುತ್ತಿದ್ದು, ಜನರಿಗೆ ಮುಖ ತೋರಿಸದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಂದಾಯ ಅ ಧಿಕಾರಿ ಗಣೇಶ ಸವಣೂರು ಅವರನ್ನು ತಾಪಂ ಸದಸ್ಯರಾದ ವಿಶ್ವನಾಥ ಹರವಿ, ಶ್ರೀಕಾಂತ ಪೂಜಾರ ಹಾಗೂ ಯಲ್ಲಪ್ಪ ನರಗುಂದ ಸೇರಿಂದಂತೆ ಸರ್ವ ಸದಸ್ಯರೂ ಮರು ಪರಿಶೀಲನೆಗೆ ಒತ್ತಾಯಿಸಿದರು.

Advertisement

ಪಟ್ಟಣದ ತಾಪಂ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನೆರೆ ಹಾಗೂ ಮಹಾಮಳೆಗೆ ಬಿದ್ದ ಮನೆಗಳ ಪರಿಹಾರ ವಿಚಾರವಾಗಿ ನಡೆದ ಚರ್ಚೆಯಲ್ಲಿ ಅಧಿಕಾರಿಗಳೊಂದಿಗೆ ಮಾತಿನ ಸಮರಕ್ಕಿಳಿದ ಸದಸ್ಯರು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರಹಾಕಿದರು. ಬನ್ನೂರ ಗ್ರಾಮದಲ್ಲಿ 205 ಮನೆಗಳು ಶೇ. 70ರಷ್ಟು ಬಿದ್ದಿವೆ ಎಂದು ವರದಿಯಾದರೂ ಫಲಾನುಭವಿಗಳಿಗೆ ಇನ್ನೂ ಪರಿಹಾರ ವಿತರಣೆಯಾಗಿಲ್ಲ. ಇಲಾಖೆಯ ವಾಲೀಕಾರರಿಗೆ ಇಷ್ಟೊಂದು ಜವಾಬ್ದಾರಿ ಕೊಡುವ ಅಗತ್ಯವಾದರೂ ಏನಿತ್ತು? ಎ.ಬಿ.ಸಿ ಎಂದು ಮೂರು ರೀತಿಯಲ್ಲಿ ಹಾನಿಯನ್ನು ಪರಿಗಣಿಸಲಾಗಿದೆ. ಆದರೆ, ನಿಜವಾಗಿ ಯಾರಿಗೆ ಪರಿಹಾರ ಲಭ್ಯವಾಗಬೇಕಿತ್ತೋ ಅವರೇ ಆಯ್ಕೆಯಿಂದ ವಂಚಿತಾರಾಗಿದ್ದಾರೆ ಎಂದು ದೂರಿದರು.

ಕೆಲವು ಕಡೆಗೆ ಗ್ರೇಡ್‌ ಹಾಕುವಾಗಲೂ ಫಲಾನುಭವಿಗಳಿಂದ ಪರಸೆಂಟೇಜ್‌ ಲೆಕ್ಕಾಚಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಇಂಥ ಹಲವು ಉದಾಹರಣೆಗಳಿವೆ. ಒಂದೇ ಮನೆಯಲ್ಲಿ ನಾಲ್ಕು ಜನರಿಗೆ ಪರಿಹಾರ ಸಹ ನೀಡಲಾಗಿದೆ. ಈ ತಾರತಮ್ಮಯ ನೀತಿ ಯಾಕೆ ಎಂದು ಹರಿಹಾಯ್ದರು. ಆರೋಗ್ಯ ಇಲಾಖೆಯ ಬಂಕಾಪೂರ ಆರೋಗ್ಯ ಕೇಂದ್ರದಲ್ಲಿ ಎಲ್ಲ ವ್ಯವಸ್ಥೆಗಳಿದ್ದರೂ ರಾತ್ರಿ ವೇಳೆಯಲ್ಲಿ ಸಣ್ಣ ಚಿಕಿತ್ಸೆಗೂ ಶಿಗ್ಗಾವಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗುತ್ತಿದೆ. ಅಲ್ಲಿಯೇ ಚಿಕಿತ್ಸೆ ನೀಡಬಹುದಲ್ಲವೇ ಎಂದು ಯಲ್ಲಪ್ಪ ನರಗುಂದ ಹಾಗೂ ವಿಶ್ವನಾಥ ಹರವಿ ತಾಲೂಕು ವೈದ್ಯಾಧಿಕಾರಿಯವರನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ವೈದ್ಯಾಧಿಕಾರಿ ವಿಜಯಾ ಪಾಟೀಲ ಇತ್ತೀಚಿಗಷ್ಟೇ ನಾನು ಅಧಿಕಾರವಹಿಸಿಕೊಂಡಿದ್ದೇನೆ. ಈ ಕುರಿತು ಪರಿಶೀಲಸುವುದಾಗಿ ತಿಳಿಸಿದರು. ತಾಪಂ ಅಧ್ಯಕ್ಷೆ ಪಾರವ್ವ ಆರೇರ ಅಧ್ಯಕ್ಷತೆವಹಿಸಿದ್ದರು. ಉಪಾಧ್ಯಕ್ಷೆ ಪದ್ಮಾವತಿ ಪಾಟೀಲ, ಕೃಷಿ ಅಧಿಕಾರಿ ಸುರೇಶ ದಿಕ್ಷೀತ, ಇಒ ಪ್ರಶಾಂತ ತುರ್ಕಾಣಿ ಸೇರಿದಂತೆ ಸರ್ವ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next