Advertisement
ಈ ಕುರಿತು ತಾ.ಪಂ ಅಧ್ಯಕ್ಷೆ ಸುಜಾತಾ ಗಾಂವಕರ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ ಅರುಣ ನಾಯ್ಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸರ್ಕಾರ ಪ್ರತಿ ತಾಲೂಕಿಗೆ ಒಂದು ಲಕ್ಷ ರೂ. ಅನುದಾನವನ್ನು ಮಹಿಳಾ ಸ್ವಸಹಾಯ ಗುಂಪುಗಳ ತರಬೇತಿಗೆಂದು ಚುನಾವಣೆಗಿಂತ ಪೂರ್ವದಲ್ಲಿಯೇ ನೀಡಿತ್ತು. ಆದರೆ ಇಲಾಖೆಯು ಯಾರ ಗಮನಕ್ಕೂ ತಾರದೆ ಮಹಿಳೆಯರಿಗೆ ತರಬೇತಿಯನ್ನೂ ನೀಡದೆ ಸಾಂತ್ವನ ಮಹಿಳಾ ಕೇಂದ್ರದವರಿಗೆ ಹಣ ನೀಡಿ ಕೈ ತೊಳೆದು ಕೊಂಡಿದೆ ಎಂದು ಆರೋಪಿಸಿದರು. ಇಲಾಖೆ ಅಧಿಕಾರಿ ಕೇಳಿದರೆ ಕಾರವಾರ ಮತ್ತು ಕುಮಟಾ ತಾಲೂಕಿನವರು ಈ ಸಾಂತ್ವನ ಕೇಂದ್ರದವರಿಗೆ ಹಣ ನೀಡಿದ್ದರಿಂದ ನಾನು ನೀಡಿದ್ದೇನೆ. ಎಂದು ಬೇಜವಾಬ್ದಾರಿ ಉತ್ತರ ಕೊಡುತ್ತಾರೆ. ಈ ತರಬೇತಿ ಯಾರಿಗೂ ತಿಳಿಯದೆ ಗಪ್-ಚುಪ್ ನಡೆದಿದೆಯಾ ಅಥವಾ ತರಬೇತಿ ನಡೆಯದೆ ಹಣ ಗುಳಂ ಮಾಡಲಾಗಿದೆಯೋ ತನಿಖೆಯಿಂದ ಹೊರ ಬರಬೇಕಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
Related Articles
Advertisement
ಮಂತ್ರಿಗಳಿಗೆ ಆರೋಗ್ಯ ಹದಗೆಟ್ಟರೆ ಹೆಲಿಕಾಪ್ಟರ್ ಇದೆ. ಆದರೆ ಸರಕಾರ ಬಡ ರೋಗಿಗಳಿಗೆ ಯಾಕೆ ಇಂತಹ ವ್ಯವಸ್ಥೆ ಕಲ್ಪಿಸುತ್ತಿಲ್ಲ. ಸುಸಜ್ಜಿತವಾದ ಐಸಿಯು ಮತ್ತು ಆಂಬ್ಯುಲೆನ್ಸ್ ವ್ಯವಸ್ಥೆ ಇದ್ದಲ್ಲಿ ಅವಘಡಗಳು ಸಂಭವಿಸುವುದಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಿ ಎಂದು ಡಾ| ಮಹೇಂದ್ರ ನಾಯಕ ಹೇಳಿದರು. ತಾ.ಪಂ ಇಓ ಕರೀಂ ಅಸದಿ, ತಾ.ಪಂ ಉಪಾಧ್ಯಕ್ಷೆ ತುಳಸಿ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ, ತಾ.ಪಂ ಸದಸ್ಯರು ಮತ್ತು ವಿವಿಧ ಇಲಾಖೆ ಅಧಿಕಾರಿಗಳಿದ್ದರು.