Advertisement

ಗೋಳಿಯಂಗಡಿ: ಜುವೆಲರಿಯಿಂದ ಕಳವು

12:50 AM Mar 07, 2019 | |

ಸಿದ್ದಾಪುರ: ಗೋಳಿಯಂಗಡಿ ಪೇಟೆಯ ಬಾಲಾಜಿ ಕಾಂಪ್ಲೆಕ್ಸ್‌ ನಲ್ಲಿರುವ ಮಾರುತಿ ಜುವೆಲರಿಗೆ ಮಂಗಳವಾರ ರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಬೆಳ್ಳಿ ಆಭರಣ ಹಾಗೂ ಇತರ ಸೊತ್ತುಗಳನ್ನು ಕಳವು ಮಾಡಿದ್ದಾರೆ.

Advertisement

ಗೋಪಾಲ ಆಚಾರ್ಯ ಅವರು ಸುಮಾರು 10 ವರ್ಷಗಳಿಂದ  ಈ  ಜುವೆಲರಿಯನ್ನು ನಡೆಸುತ್ತಿದ್ದರು. ಅದರ ಹೊರ ಭಾಗಕ್ಕೆ ಅಳವಡಿಸಿದ್ದ  ಗೇಟ್‌ನ ಬೀಗವನ್ನು ಗ್ಯಾಸ್‌ ಕಟರ್‌ ಮೂಲಕ ಮುರಿದು, ಅನಂತರ ರೋಲಿಂಗ್‌ ಶಟರ್‌ ಬಾಗಿಲಿನ  ಬೀಗಗಳನ್ನು ಮತ್ತು ಸೆಂಟರ್‌ ಲಾಕ್‌ ಅನ್ನು ಒಡೆದು  ಕಳ್ಳರು ನುಗ್ಗಿದ್ದಾರೆ. ಗ್ಯಾಸ್‌ ಕಟರ್‌ನಿಂದ ಸೇಫ್‌ ಲಾಕರನ್ನು ಒಡೆಯಲು ಪ್ರಯತ್ನಿಸಿ, ವಿಫಲರಾಗಿ ಶೋಕೇಸ್‌ನಲ್ಲಿದ್ದ ಸುಮಾರು 3 ಲ.ರೂ.ಮೌಲ್ಯದ ಬೆಳ್ಳಿ ಆಭರಣ, ಕಂಪ್ಯೂಟರ್‌,ಹಾರ್ಡ್‌ಡಿಸ್ಕ್, ಸಿಸಿ ಕೆಮರಾ, ಡಿವಿಆರ್‌, ಸ್ಕೇಲ್‌  ಸಹಿತ ಸುಮಾರು 75 ಸಾ. ರೂ. ಮೌಲ್ಯದ ಸೂತ್ತುಗಳನ್ನು ಕಳವಾಗಿದೆ. ಸೇಫ್‌ ಲಾಕರ್‌  ಒಡೆಯಲಾಗದ ಕಾರಣ ಚಿನ್ನವನ್ನು ಕೊಂಡೊಯ್ದಿಲ್ಲ.  

ಅಪಾರ ನಷ್ಟ
3.75 ಲ. ರೂ. ಮೌಲ್ಯದ ಬೆಳ್ಳಿ ಹಾಗೂ ಸೊತ್ತು ಕಳ ವಾಗಿವೆ, ಅದಲ್ಲದೆ ಅನೇಕ ಸೊತ್ತುಗಳಿಗೆ ಹಾನಿಯಾಗಿದ್ದು, ಇದರಿಂದ ಲಕ್ಷಾಂತರ ರೂ. ನಷ್ಟವಾಗಿದೆ ಎಂದು  ಅಂದಾಜಿಸಲಾಗಿದೆ. 

ಮೂರು ತಂಡ ರಚನೆ 
ಕಳ್ಳರ  ಪತ್ತೆಗೆ ಮೂರು ತಂಡ  ರಚಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚುತ್ತಿರುವ ಕಳ್ಳತನ
ಶಂಕರನಾರಾಯಣ ಠಾಣಾ ವ್ಯಾಪ್ತಿ ಯಲ್ಲಿ ಕಳ್ಳತನ ಪ್ರಕರಣ ಹೆಚ್ಚುತ್ತಿದ್ದು, ಕೆಲ ದಿನಗಳ ಹಿಂದೆ ಅಲಾºಡಿಯಲ್ಲಿ ಇದೇ ರೀತಿಯಲ್ಲಿ ಜುವೆಲ್ಲರಿ ಮಳಿಗೆಯಲ್ಲಿ ಕಳ್ಳತನ ನಡೆದಿತ್ತು. ಈ ಕೃತ್ಯದಲ್ಲಿ ಭಾಗಿಯಾದವರ ಬಗ್ಗೆ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ. 

Advertisement

ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರೀಶಿಲನೆ ನಡೆಸಿದರು. ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಕುಮಾರ್‌ ಚಂದ್ರ, ಕುಂದಾಪುರ ಡಿವೈಎಸ್ಪಿ ಬಿ.ಪಿ. ದಿನೇಶ್‌ಕುಮಾರ್‌, ಶಂಕರನಾರಾಯಣ ಪೊಲೀಸ್‌ ಠಾಣೆ ಉಪನೀರಿಕ್ಷಕ ಕೆ. ಪ್ರಕಾಶ, ಬೈಂದೂರು ಪೊಲೀಸ್‌ ಠಾಣೆ ಉಪನೀರಿಕ್ಷಕ ಪರಮೇಶ್ವರ ಆರ್‌.ಗುನಗಾ, ಕಂಡೂÉರು ಎಸ್‌ಐ ಶ್ರೀಧರ ನಾಯ್ಕ ಹಾಗೂ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸಿಸಿ ಕೆಮರಾದಲ್ಲಿ ದಾಖಲು 
ಜುವೆಲರಿ ಕಟ್ಟಡ ಮೇಲಿ ರುವ ಬ್ಯಾಂಕಿನ ಸಿಸಿ ಕೆಮರಾ  ಹಾಗೂ ಗೋಳಿಯಂಗಡಿ ಪೇಟೆಯ ಸರ್ಕಲ್‌ನಲ್ಲಿ ಅಳವಡಿಸಿದ್ದ  ಕೆಮರಾದಲ್ಲಿ ಕಾರು ಬರುವ ದೃಶ್ಯಾವಳಿಗಳು ದಾಖಲಾಗಿವೆ. ಕಳ್ಳರು ಮಾರುತಿ ಸ್ವಿಫ್ಟ್‌ ಕಾರಿನಲ್ಲಿ ಬಂದಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next