Advertisement
“ನಾನು ನಾಯಕ ನಟನಾಗಿ ಹದಿನೈದು ವರ್ಷ ಕಳೆದಿದೆ. ಇಷ್ಟು ವರ್ಷಗಳ ಈ ಸಿನಿಜರ್ನಿಯಲ್ಲಿ ಹೀರೋ ಆಗಿ 37 ಸಿನಿಮಾ ಮಾಡಿದ್ದೇನೆ. ಆ ಪೈಕಿ ಈ ಚಿತ್ರ ನನ್ನ ವೃತ್ತಿ ಬದುಕಿನ ಮತ್ತೂಂದು ಮೈಲಿಗಲ್ಲು ಅಂತಾನೇ ಹೇಳ್ತೀನಿ…’ ಗಗೀತಾ ಣೇಶ್ ಹೀಗೆ ಹೇಳಿದ್ದು, ಇಂದು ಬಿಡುಗಡೆಯಾಗುತ್ತಿರುವ “ಗೀತಾ’ ಚಿತ್ರದ ಬಗ್ಗೆ. ಅವರು ಹಾಗೆ ಹೇಳ್ಳೋಕೆ ಕಾರಣ, “ಗೀತಾ’ ಚಿತ್ರದ ಪಾತ್ರ ಮತ್ತು ಅದಕ್ಕೆ ಗಟ್ಟಿಯಾಗಿ ನಿಲ್ಲುವ ತಾಕತ್ತು ಇದೆ ಅನ್ನುವುದು. ಸಹಜವಾಗಿಯೇ ಗಣೇಶ್ ಅವರಿಗೆ “ಗೀತಾ’ ಮೇಲೆ ಪ್ರೀತಿ ಜಾಸ್ತಿ. ಆ ಕುರಿತು ಗಣೇಶ್ ಹೇಳಿದಿಷ್ಟು.
“ಗೀತಾ’ 80ರ ದಶಕದ ಕಥೆ. ಅದರಲ್ಲೂ ಗೋಕಾಕ್ ಚಳವಳಿ ಹಿನ್ನೆಲೆಯಲ್ಲಿ ಸಾಗುವ ಸಿನಿಮಾ. ಆ ಕುರಿತು ಸ್ವತಃ ಗಣೇಶ್ ಹೇಳಿದ್ದು ಹೀಗೆ. “ಇದು 80ರ ದಶಕದ ಚಿತ್ರ. ಹಾಗಂತ, ಪೂರ್ಣ ಪ್ರಮಾಣದಲ್ಲಿ ಅದೇ ಇರುವುದಿಲ್ಲ. ಅರ್ಧ ಸಿನಿಮಾ 80ರ ದಶಕದ ಕಥೆ ಹೇಳುತ್ತೆ. ಉಳಿದರ್ಧ ಕಥೆಯಲ್ಲಿ ಈ ಟ್ರೆಂಡ್‌ನ ಪಯಣವಿದೆ. ಪಾತ್ರ ಬಗ್ಗೆ ಹೇಳುವುದಾದರೆ, “ಗೀತಾ’ದಲ್ಲಿ ಒಬ್ಬ ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದೇನೆ. ಒಬ್ಬ ಅಪ್ಪಟ ಕನ್ನಡಿಗ. ಒಂದು ರೀತಿಯ ಕ್ರಾಂತಿಕಾರಿ. ಅದರಲ್ಲೂ ಪಕ್ಕಾ ಕನ್ನಡಪರ ಹೋರಾಟಗಾರ. ಚಿತ್ರದೊಳಗಿನ ಸೆಟ್, ಡ್ರೆಸ್, ನಡೆ, ನುಡಿ ಎಲ್ಲವೂ 80ರ ದಶಕಕ್ಕೆ ಕರೆದೊಯ್ಯುತ್ತವೆ. ರೆಟ್ರೋ ಫೀಲ್ ಇದ್ದರೂ, ಈಗಿನ ಟ್ರೆಂಡ್ ಬಿಟ್ಟುಕೊಟ್ಟಿಲ್ಲ. ಸಾಮಾನ್ಯವಾಗಿ ನನ್ನ ಬಹುತೇಕ ಚಿತ್ರಗಳಲ್ಲಿ ದುಃಖ ಇದ್ದರೂ ಅದನ್ನು ಹೇಳಲಾಗದೆ, ನಗುತ್ತಲೇ ಇರುವಂಥದ್ದು, ಮನೆಯಲ್ಲಿ ಕಷ್ಟವಿದ್ದರೂ, ಬೇರೆ ಯಾರಿಗೋ ಸಹಾಯ ಮಾಡುವಂಥದ್ದು ಹೀಗೆ ಟೋಟಲಿ ಸಾಫ್ಟ್ ಪಾತ್ರ ಮಾಡಿಕೊಂಡು ಬಂದವನು. ಮೊದಲ ಸಲ ಆ್ಯಂಗ್ರಿ ಯಂಗ್ ಮ್ಯಾನ್ ಪಾತ್ರ ಮಾಡಿದ್ದೇನೆ. ಅದು ಶಂಕರ್ ಎಂಬ ಹೋರಾಟಗಾರನ ಪಾತ್ರ. ನಾನು ಕಾಲೇಜ್ ದಿನಗಳಲ್ಲಿ ಯೂನಿಯನ್ ಲೀಡರ್ ಆಗಿದ್ದವನು. ಹೋರಾಟ, ಗಲಾಟೆ ಎಲ್ಲವನ್ನೂ ನೋಡಿದ್ದರಿಂದ, ಶಂಕರ್ ಪಾತ್ರ ಹೋರಾಟದವನು ಆಗಿದ್ದರಿಂದ ಮಾಡೋಕೆ ಸುಲಭವಾಯ್ತು. ಇಲ್ಲೊಂದು ವಿಷಯ ಹೇಳಬೇಕು. “ಗೀತಾ’ ಶೀರ್ಷಿಕೆ ನನ್ನ ಮನಸ್ಸಿಗೆ ಹತ್ತಿರ ಆಗೋಕೆ ಕಾರಣವೂ ಇದೆ. “ಗೀತಾ’ ಸೂಪರ್ ಹಿಟ್ ಚಿತ್ರ. ಶಂಕರ್‌ನಾಗ್ ನನ್ನ ಫೇವರೇಟ್ ಹೀರೋ. ಶಾಲೆ-ಕಾಲೇಜು ದಿನಗಳಲ್ಲೇ ನಾನು ಆರ್ಕೇಸ್ಟ್ರಾ ಇತ್ಯಾದಿ ಕಾರ್ಯಕ್ರಮಗಳಲ್ಲಿ ಸ್ಟೇಜ್ ಮೇಲೆ ಕನ್ನಡ ಹಾಡಿಗೆ ಹೆಜ್ಜೆ ಹಾಕೋದು, ಶಂಕರ್‌ನಾಗ್ ಅವರ “ಗೀತಾ’ ಚಿತ್ರದ “ಸಂತೋಷಕೆ ಹಾಡು ಸಂತೋಷಕೆ’ ಹಾಡಿಗೆ ಸ್ಟೆಪ್ ಹಾಕುತ್ತಿದ್ದೆ. ಆ ಹಾಡನ್ನು ಬೇಜಾರಾದಾಗೆಲ್ಲಾ ಕೇಳುತ್ತಿದ್ದೆ. ಸೋ, ಅದು ಹಾಗೆ ಕನೆಕ್ಷನ್ ಆಗಿತ್ತು. ಫೀಮೆಲ್ ಟೈಟಲ್ ಆಗಿದ್ದರೂ, ಅಲ್ಲೊಂದು ಹೋರಾಟದ ನೆನಪು, ಪ್ರೀತಿ, ಭಾಷೆ ಇತ್ಯಾದಿ ಅಂಶಗಳು ಗಮನಸೆಳೆಯುತ್ತವೆ’ ಎಂದು ಹೇಳುತ್ತಾರೆ ಗಣೇಶ್.
Related Articles
ಎಲ್ಲಾ ಸರಿ, ಗೋಕಾಕ್ ಚಳವಳಿ ಹಿನ್ನೆಲೆಯ ಕಥೆ ಇಲ್ಲಿದೆ, ಆಗಿನ ರೆಟ್ರೋ ಶೈಲಿಯೂ ಇದೆ ಅಂದಮೇಲೆ, ಶಂಕರ್ ಎಂಬ ಪಾತ್ರ ಆಗಿನ ಗೋಕಾಕ್ ಚಳವಳಿ ಹೋರಾಟದಲ್ಲಿದ್ದ ಯಾವುದಾದರೂ ಒಬ್ಬ ವ್ಯಕ್ತಿಯನ್ನು ಹೊಂದುತ್ತಾ? ಈ ಪ್ರಶ್ನೆಗೆ ಉತ್ತರಿಸುವ ಗಣೇಶ್, “ಅಂತಹ ಯಾವುದೇ ವ್ಯಕ್ತಿಯ ಹೋಲುವ ಪಾತ್ರ ಅದಲ್ಲ. ಅದೊಂದು ಕಾಲ್ಪನಿಕ
ಪಾತ್ರ.
Advertisement
ಚಳವಳಿಯಲ್ಲಿ ಹೋರಾಡುವ ಒಬ್ಬ ಕಾಲ್ಪನಿಕ ಪಾತ್ರಧಾರಿಯಷ್ಟೇ. ಆಗಿನ ಚಳವಳಿ ವೇಳೆ ನಡೆದ ಗೋಲಿಬಾರ್ ಘಟನೆ ಸೇರಿದಂತೆ ಹಿಂದಿನ ಎಲ್ಲಾ ಸತ್ಯದ ಅಂಶಗಳು ಅಲ್ಲಿರಲಿವೆ. ಇನ್ನು, ಗೋಕಾಕ್ ಚಳವಳಿ ಅಂದಮೇಲೆ ಡಾ.ರಾಜಕುಮಾರ್ ನೆನಪಾಗದೇ ಇರದು. ಅವರ ಭಾಗವೂ ಇಲ್ಲಿದೆ. ಗೋಕಾಕ್ ಚಳವಳಿಯ ಒರಿಜಿನಲ್ ಫುಟೇಜ್ ಇಟ್ಟುಕೊಂಡು ಮಾಡಿದ್ದೇವೆ. “ಕನ್ನಡಿಗ ಕನ್ನಡಿಗ’ ಹಾಡಲ್ಲಿ ಅಣ್ಣಾವ್ರು ಕಾಣುತ್ತಾರೆ. ಅವರು ಭಾಷಣ ಮಾಡುವ ಸೀನ್‌ನಲ್ಲಿ ನಾನು ಪಕ್ಕದಲ್ಲೇ ಇರುವಂತೆಯೂ ಸಿಜಿ ಕೆಲಸ ಮಾಡಲಾಗಿದೆ. ಆಗಿನ ಕಾಲಘಟ್ಟದ ಕಥೆ ಈಗಿನ ಕಾಲಘಟ್ಟಕ್ಕೂ ಬರುತ್ತೆ. ಅದು ಹೇಗೆ ಎಂಬುದನ್ನು ಸಿನಿಮಾದಲ್ಲಿ ಕಾಣಬೇಕು’ ಎನ್ನುತ್ತಾರೆ ಅವರು.
ಹೋರಾಟಗಾರ ಕೂಡ ಪ್ರೀತಿಯ ಬಲೆಯಲ್ಲಿ ಸಿಲುಕುತ್ತಾನೆ. ಹಾಗಾದರೆ, ಕನ್ನಡಪರ ಹೋರಾಟಗಾರ ಪರಭಾಷೆ ಹುಡುಗಿಯೊಬ್ಬಳ ಪ್ರೀತಿಗೆ ಬೀಳುತ್ತಾನೆ ಅನ್ನಿ? ಇದಕ್ಕೆ ಕ್ಷಣ ಕಾಲ ಮೌನವಾಗುವ ಗಣೇಶ್, “ಇಲ್ಲಿ ಲವ್ ಇದೆ. ಹೀರೋ ಯಾರನ್ನು ಹೇಗೆ ಲವ್ ಮಾಡ್ತಾನೆ ಅನ್ನುವುದಕ್ಕೂ ಚಿತ್ರ ನೋಡಿ. ಹಾಗಂತ ಇಲ್ಲಿ ಭಾಷೆ ಮತ್ತು ಜಾತಿಯ ಸಂಘರ್ಷ ಇದೆಯಾ ಎಂಬುದಕ್ಕೆ ಚಿತ್ರವೇ ಉತ್ತರ ಕೊಡಲಿದೆ ಅನ್ನುವ ಅವರು, “ಇಲ್ಲಿ ಡಬ್ಬಲ್ ಶೇಡ್ ಇದೆ. ಹೊಸ ರೀತಿಯ ಸ್ಕ್ರೀನ್‌ಪ್ಲೇನೊಂದಿಗೆ “ಗೀತಾ’ ಎಲ್ಲರಿಗೂ ಹತ್ತಿರವಾಗುತ್ತಾಳೆ’ ಎಂದಷ್ಟೇ ಹೇಳುತ್ತಾರೆ.
ಗೀತಾ ಸುತ್ತ ಸ್ಟೋರಿನಿರ್ದೇಶಕ ವಿಜಯ್ ನಾಗೇಂದ್ರ ಅವರಿಗೆ ಇದು ಮೊದಲ ಚಿತ್ರ. ಎರಡು ವರ್ಷದ ಹಿಂದೆ ಹೊಳೆದ ಕಥೆ ಈಗ ಚಿತ್ರವಾಗಿದೆ. “ಗೋಕಾಕ್ ಚಳವಳಿ ಕರ್ನಾಟಕದ ಹಿಸ್ಟರಿ. ಈವರೆಗೆ ಅದನ್ನಿಟ್ಟುಕೊಂಡು ಯಾರೂ ತೆರೆಮೇಲೆ ತೋರಿಸಿರಲಿಲ್ಲ. ನಾನು ಆ ಪ್ರಯತ್ನ ಮಾಡುತ್ತಿದ್ದೇನೆ. ಎರಡು ಜನರೇಷನ್ ಲವ್‌ಸ್ಟೋರಿ ಇಲ್ಲಿದೆ. ಗೀತಾ ಪಾತ್ರವನ್ನೇ ಕಥೆ ಸುತ್ತುವರೆಯುವುದರಿಂದ ಟೈಟಲ್ ಗೀತಾ ಅಂತಿಡಲಾಗಿದೆ. ಇನ್ನು, ಇಲ್ಲಿ “ಗೀತಾ’ ಚಿತ್ರದ ಒರಿಜಿನಲ್ ಹಾಡನ್ನೇ ಬಳಸಲಾಗಿದೆ. ಗೋಕಾಕ್ ಚಳವಳಿ ರೀಸರ್ಚ್ ಮಾಡಿದ್ದೇನೆ. ಕಂಟೆಂಟ್ ಕಮ್ಮಿ ಇತ್ತು. ಆದರೆ, ಮನೋಹರ್ ಎಂಬುವರ ಬಳಿ ಚಳವಳಿಯ ವಿಡಿಯೋ ಇತ್ತು. ಅದನ್ನು ಇಟ್ಟುಕೊಂಡು ಆ ಕಾಲದಲ್ಲಿದ್ದ ಕೆಲವರನ್ನು ಭೇಟಿಯಾಗಿ, ಏನೆಲ್ಲಾ ಆಯ್ತು, ಹೇಗೆಲ್ಲಾ ಇತ್ತು ಎಂಬ ಬಗ್ಗೆ ತಿಳಿದು ಚಿತ್ರ ಮಾಡಿದ್ದೇನೆ’ ಎಂಬ ವಿವರ ಕೊಡುತ್ತಾರೆ ನಿರ್ದೇಶಕರು. ಸಂತೋಷ್ ಆನಂದರಾಮ್‌ಗೆ “ಗೀತಾ’ ಸಿನಿಮಾ ಕುತೂಹಲ ಮೂಡಿಸಿದೆಯಂತೆ. “ನನ್ನ ಜೊತೆ ಕೋ ಡೈರೆಕ್ಟರ್ ಆಗಿದ್ದ ವಿಜಯ್ ನಾಗೇಂದ್ರ ಮೊದಲ ಚಿತ್ರವಾದ್ದರಿಂದ ಚಿತ್ರದ ಸ್ಕ್ರಿಪ್ಟ್ನಲ್ಲಿ ಕೆಲಸ ಮಾಡಿದ್ದೇನೆ. ಹಾಡನ್ನೂ ಬರೆದಿದ್ದೇನೆ. ಸಿನಿಮಾ ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಬೆಂಬಲ ಇರಲಿ’ ಎಂದರು ಸಂತೋಷ್. ಸಂಗೀತ ನಿರ್ದೇಶಕ ಅನೂಪ್ ರುಬೆನ್ಸ್ “ಹಾಡುಗಳಿಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಹೊಸಬಗೆಯ ಚಿತ್ರದಲ್ಲಿ ಕೆಲಸ ಮಾಡಿದ ಖುಷಿ ಇದೆ’ ಎಂದರು. ನಾಯಕಿ ಸಾನ್ವಿ ಅಂದು ಥ್ಯಾಂಕ್ಸ್ ಗಷ್ಟೇ ಮಾತುಗಳನ್ನು ಮೀಸಲಿಟ್ಟರು. ನಿರ್ಮಾಪಕ ಸೈಯದ್ ಸಲಾಂ ಅವರಿಗೆ “ಗೀತಾ’ ಮೇಲೆ ವಿಶ್ವಾಸ ಹೆಚ್ಚಿದೆಯಂತೆ. ಈಗಾಗಲೇ ಸೇಫರ್ ಜೋನ್‌ನಲ್ಲಿದ್ದು, ಕನ್ನಡಿಗರು “ಗೀತಾ’ ಕೈ ಬಿಡಲ್ಲ’ ಎಂದರು. ಜಾಕ್ ಮಂಜು ವಿತರಣೆ ಮಾಡುತ್ತಿದ್ದು, 160 ಚಿತ್ರಮಂದಿರ ಸೇರಿದಂತೆ 60 ಮಲ್ಟಿಪ್ಲೆಕ್ಸ್
ನಲ್ಲಿ ರಿಲೀಸ್ ಮಾಡುವ ಪ್ಲಾನ್ ಮಾಡಿದ್ದಾಗಿ ಹೇಳಿಕೊಂಡರು. ಸುಧಾರಾಣಿ, ಛಾಯಾಗ್ರಾಹಕ ಶ್ರೀಷ, ಆನಂದ್ ಆಡಿಯೋ ಶ್ಯಾಮ್, ದಾಸೇಗೌಡ ಇತರರು ಇದ್ದರು. ವಿಜಯ್ ಭರಮಸಾಗರ