Advertisement

ಗೋಲ್ಡನ್‌ ಅದೃಷ್ಟ

12:10 PM Nov 19, 2018 | Team Udayavani |

ನಟ ಗಣೇಶ್‌ ಅವರಿಗೆ ಡಿಸೆಂಬರ್‌ ಅಂದರೆ ಲಕ್ಕಿ..! ಹೌದು, ಅವರ ಯಶಸ್ವಿ ಚಿತ್ರಗಳನ್ನು ಹಾಗೊಮ್ಮೆ ಗಮನಿಸಿದರೆ, ಡಿಸೆಂಬರ್‌ನಲ್ಲೇ ಬಿಡುಗಡೆಯಾಗಿವೆ. ಹಾಗಾಗಿ, ಗಣೇಶ್‌ ಚಿತ್ರಗಳು ಡಿಸೆಂಬರ್‌ನಲ್ಲಿ ಬಿಡುಗಡೆಗೊಂಡರೆ, ಅದೊಂಥರಾ ಗೆಲುವಿನ ಹೆಜ್ಜೆ ಎಂದೇ ಬಿಂಬಿಸಲಾಗಿದೆ. ಈಗಾಗಲೇ ಪ್ರೇಕ್ಷಕರ ಮುಂದೆ ಬರಲು ಅಣಿಯಾಗಿರುವ ಅವರ “ಆರೆಂಜ್‌’ ಚಿತ್ರ ಕೂಡ ಡಿಸೆಂಬರ್‌ 7 ರಂದು ತೆರೆಗೆ ಬರುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ “ಆರೆಂಜ್‌’ ಈಗಾಗಲೇ ಬಿಡುಗಡೆಯಾಗಬೇಕಿತ್ತು.

Advertisement

ಆದರೆ, ಡಿಸೆಂಬರ್‌ ಗಣೇಶ್‌ ಅವರಿಗೆ ಲಕ್ಕಿ ಎಂಬ ಕಾರಣಕ್ಕೆ ನಿರ್ದೇಶಕ ಪ್ರಶಾಂತ್‌ರಾಜ್‌ ಅವರು ಡಿ.7 ರಂದು ಬಿಡುಗಡೆ ಮಾಡಲು ತಯಾರು ಮಾಡಿಕೊಂಡಿದ್ದಾರೆ. ಡಿಸೆಂಬರ್‌ನಲ್ಲಿ ಈ ಹಿಂದೆ ಬಿಡುಗಡೆಯಾದ “ಮುಂಗಾರು ಮಳೆ’, “ಮಳೆಯಲಿ ಜೊತೆಯಲಿ’ ಹಾಗು “ಚಮಕ್‌’ ಚಿತ್ರಗಳ ಯಶಸ್ಸು ಕಣ್ಣಮುಂದೆಯೇ ಇದೆ. ಇವುಗಳಲ್ಲದೆ, ಇನ್ನಷ್ಟು ಚಿತ್ರಗಳು ಡಿಸೆಂಬರ್‌ನಲ್ಲಿ ತೆರೆಗೆ ಬಂದಿದ್ದುಂಟು.

ಈಗ ಅವುಗಳ ಸಾಲಿಗೆ “ಆರೆಂಜ್‌’ ಕೂಡ ಸೇರುತ್ತಿದೆ. ಕಳೆದ ಫೆಬ್ರವರಿಯಲ್ಲಿ ಗಣೇಶ್‌ ಅಭಿನಯದ “ಆರೆಂಜ್‌’ ಚಿತ್ರ ಶುರುವಾಗಿತ್ತು. ಈ ಹಿಂದೆ “ಜೂಮ್‌’ ಮೂಲಕ ಮೋಡಿ ಮಾಡಿದ್ದ ಗಣೇಶ್‌ ಹಾಗು ಪ್ರಶಾಂತ್‌ರಾಜ್‌ “ಆರೆಂಜ್‌’ ಮೂಲಕ ಹೊಸ ನಿರೀಕ್ಷೆ ಹುಟ್ಟಿಸಿದ್ದಾರೆ. “ಜೂಮ್‌’ ಚಿತ್ರ ಕೂಡ ಗೆಲುವು ಕಂಡಿತ್ತು. ಅದೇ ಖುಷಿಯಲ್ಲೇ ಮತ್ತೂಂದು ಚಿತ್ರ ಮಾಡುವ ಯೋಚನೆ ಮಾಡಿದ್ದ ಆ ಜೋಡಿ, “ಆರೆಂಜ್‌’ ಮುಗಿಸಿ, ಇದೀಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

ಇನ್ನು, ಈ ಚಿತ್ರದಲ್ಲಿ ಪ್ರಿಯಾ ಆನಂದ್‌ ನಾಯಕಿಯಾಗಿ ನಟಿಸಿದ್ದಾರೆ. ಈ ಹಿಂದೆ “ರಾಜಕುಮಾರ’ ಚಿತ್ರದಲ್ಲಿ ನಟಿಸಿದ್ದ ಪ್ರಿಯಾಗೆ ಕನ್ನಡದಲ್ಲಿ ಇದು ಎರಡನೆಯ ಚಿತ್ರ. ಈ ಚಿತ್ರದಲ್ಲಿ ಸಾಧು ಕೋಕಿಲ, ರಂಗಾಯಣ ರಘು ಸೇರಿದಂತೆ ಅನೇಕ ಕಲಾವಿದರು ನಟಿಸುತ್ತಿದ್ದಾರೆ. ಎಸ್‌.ಎಸ್‌. ತಮನ್‌ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next